ನವದೆಹಲಿ: ಕೋವಿಡ್ 19 ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದುಕೊಂಡರೆ ಕೋವಿಡ್ ಕಾರಣದ ಸಾವಿನಿಂದ ಶೇ.98ರಷ್ಟು ರಕ್ಷಣೆಯನ್ನು ನೀಡುತ್ತದೆ. ಆದರೆ ಒಂದು ಕೋವಿಡ್ ಡೋಸ್ ಶೇ.92ರಷ್ಟು ರಕ್ಷಣೆ ನೀಡಲಿದೆ ಎಂಬುದನ್ನು ಪಂಜಾನ್ ಪೊಲೀಸ್ ಸಿಬ್ಬಂದಿಗಳ ಮೇಲೆ ನಡೆಸಿದ ಅಧ್ಯಯನದ ಅಂಶವನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ:ದಾವಣಗೆರೆ: ಮೂರು ವರ್ಷದ ಮಗುವಿನೊಂದಿಗೆ ನೇಣಿಗೆ ಶರಣಾದ ತಾಯಿ
ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಪಂಜಾಬ್ ಸರ್ಕಾರದ ಸಹಯೋಗದೊಂದಿಗೆ ಈ ಅಧ್ಯಯನ ನಡೆಸಿದೆ. ಈ ಅಧ್ಯಯನದ ಅಂಕಿಅಂಶವನ್ನು ಹಂಚಿಕೊಂಡಿರುವ ನೀತಿ ಆಯೋಗದ ಸದಸ್ಯ(ಆರೋಗ್ಯ) ಡಾ.ವಿ.ಕೆ.ಪೌಲ್ ಅವರು, 4,868 ಪೊಲೀಸ್ ಸಿಬಂದಿಗೆ ಲಸಿಕೆ ನೀಡಿಲ್ಲ ಮತ್ತು ಅವರಲ್ಲಿ 15 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಇದು ಪ್ರತಿ ಸಾವಿರಕ್ಕೆ 3.08ರಷ್ಟು ಸಾವಿನ ಪ್ರಮಾಣ ಇಳಿಕೆಯಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ.
35,856 ಪೊಲೀಸ್ ಸಿಬಂದಿಗಳಿಗೆ ಒಂದು ಡೋಸ್ ಲಸಿಕೆ ನೀಡಿದ್ದು, ಇವರಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 42,720 ಪೊಲೀಸ್ ಸಿಬಂದಿಗಳು ಕೋವಿಡ್ ಎರಡೂ ಡೋಸ್ ಗಳನ್ನು ಪಡೆದಿದ್ದು, ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಅಧ್ಯಯನದಿಂದ ಇದು ಪ್ರತಿ ಸಾವಿರಕ್ಕೆ ಸಾವಿನ ಪ್ರಮಾಣ 0.05ರಷ್ಟು ಸಂಭವಿಸುತ್ತದೆ ಎಂದು ಪೌಲ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.