Advertisement

ಬೆಂಕಿ ಇಲ್ಲದೆ ಹೊಗೆಯಾಡದು, ಬಿಎಸ್‍ವೈ, ಹೈಕಮಾಂಡ್ ಎರಡೂ ದುರ್ಬಲ: ಸಿದ್ದರಾಮಯ್ಯ

03:49 PM Jun 10, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಆದರೆ ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಯಡಿಯೂರಪ್ಪ ಅವರನ್ನು ಬದಲಿಸಿ ಎಂದು ನಾವ್ಯಾರೂ ಒತ್ತಾಯ ಮಾಡಿಲ್ಲ. ಆ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದಾದರೆ ಶಾಸಕರಾದ ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್, ವಿಶ್ವನಾಥ್, ರೇಣುಕಾಚಾರ್ಯ ಹಾಗೂ ಸಚಿವ ಯೋಗೀಶ್ವರ್ ವಿರುದ್ಧ ಬಿಜೆಪಿ ಹೈ ಕಮಾಂಡ್ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದನ್ನೂ ಓದಿ:ನಾಯಕತ್ವ ಬದಲಾವಣೆ ಊಹಾಪೋಹ: ಪ್ರಧಾನಿ ಮೋದಿ, ಶಾ ಭೇಟಿಗೆ ದೌಡಾಯಿಸಿದ ಸಿಎಂ ಯೋಗಿ

ಬಿಜೆಪಿಯಲ್ಲಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಎರಡೂ ದುರ್ಬಲ. ಅರುಣ್ ಸಿಂಗ್ ಬದಲಾವಣೆ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ಹಾಗಾದರೆ ಬದಲಾವಣೆ ಆಗಬೇಕು ಎಂದವರ ವಿರುದ್ಧ ಏಕೆ ಕ್ರಮವಿಲ್ಲ. ಇದರಿಂದ ರವಾನೆಯಾಗುವ ಸಂದೇಶ ಏನು? ಯಡಿಯೂರಪ್ಪ ಅವರೇ ಕಳಪೆ ಮುಖ್ಯಮಂತ್ರಿ. ಇನ್ನು ಬೇರೆಯವರು ಹೇಗಿರಬೇಕು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next