Advertisement

ಬನ್ನೇರುಘಟ್ಟದಲ್ಲಿ ಸಿಂಗಳೀಕ ಮರಿ ಜನನ

12:19 PM Aug 23, 2018 | Team Udayavani |

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಸಿಂಗಳೀಕ(ಹಂದಿ ಬಾಲದ ಕೋತಿ) ಮರಿಯೊಂದಕ್ಕೆ ಜನ್ಮ ನೀಡಿದ್ದು ತಾಯಿ- ಮರಿ ಆರೋಗ್ಯ ವಾಗಿವೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಹತ್ತು ವರ್ಷ ವಯಸ್ಸಿನ ಮಾಮನ್‌ ಗಂಡು ಸಿಂಗಳೀಕ,ಆರು ವರ್ಷ ವಯಸ್ಸಿನ ಸಲಾಜ್‌ ಹೆಣ್ಣು ಸಿಂಗಲೀಕ ಜೋಡಿಗೆ ಜನಿಸಿದ ಮರಿ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಆರ್‌. ಗೋಕುಲ್‌ ತಿಳಿಸಿದ್ದಾರೆ.2015 ರ ಆ.4 ರಂದು ತ್ರಿಪುರದಾ ಆಗರ್ತಾಲ್‌ ನ ಸೇμಸೋಲಾ ಜೂವಾಲಾಜಿಕಲ್‌ ಪಾರ್ಕ್‌ ನಿಂದ 2 ಹೆಣ್ಣು, 1 ಗಂಡು ಸಿಂಗಳೀಕಗಳನ್ನು ಪ್ರಾಣಿಗಳ ವಿನಿಮಯ
ಯೋಜನೆಯಡಿ ತರಿಸಿಕೊ ಳ್ಳಲಾಗಿತ್ತು. ಅಪರೂಪದ ಸಿಂಗಳೀಕಗಳು ಉದ್ಯಾ ನವನದಲ್ಲಿ ವಂಶಾಭಿವೃದ್ಧಿ ವರ್ಷದಿಂದ ವರ್ಷಕ್ಕೆ ಏರುತ್ತಿದೆ. 3 ಸಿಂಗಳೀ ಕಗಳಿಂದ ಸದ್ಯ 7 ಸಿಂಗಳೀಕಗಳು ಬೆಳೆದಿದ್ದು ಇದು ಪ್ರವಾಸಿಗರ ವೀಕ್ಷಣೆಗೆ ಸಂತಸ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next