Advertisement

ಬೊರಿವಲಿ ಸೈಂಟ್‌ ಕ್ಸೇವಿಯರ್ ನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ

01:31 PM Feb 26, 2019 | |

ಮುಂಬಯಿ: ರಾಯನ್‌ ಇಂಟರ್‌ನ್ಯಾಶನಲ್‌ ಶೈಕ್ಷಣಿಕ ಸಂಸ್ಥೆಯ ಸಂಚಾಲಕತ್ವದ ಬೊರಿವಲಿ ಪೂರ್ವದ ಸೈಂಟ್‌ ಕ್ಸೇವಿಯರ್ ಹೈಸ್ಕೂಲ್‌ನಲ್ಲಿ 2018-2019ನೇ ಶೈಕ್ಷಣಿಕ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನ ಕಾರ್ಯಕ್ರಮವು ಫೆ. 23ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

Advertisement

ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಶೈಕ್ಷಣಿಕ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಚಿತ್ರಕಲೆ, ಸಂಗೀತ, ನೃತ್ಯ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಶಾಲೆಯ ಆಲ್‌ರೌಂಡರ್‌ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ 2001ನೇ ಸಾಲಿನ ಆಲ್ಯುಮಿನಿ ಆ್ಯಂಡ್‌ ಮಿಸೆಸ್‌ ಇಂಡಿಯಾ ಫೈನಲಿಸ್ಟ್‌ ವಿಶ್ವ ಚೌದ್ಗಾರ್‌ ಅವರು ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯದಲ್ಲಿ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರಬೇಕು. ಆಗ ಮಾತ್ರ ಸಾಧನೆಯ ಶಿಖರವನ್ನು ತಲುಪಲು ಸಾಧ್ಯ ಎಂದು ನುಡಿದು ಶುಭ ಹಾರೈಸಿದರು.

ಸೈಂಟ್‌ ಕ್ಸೇವಿಯರ್ ಶಿಕ್ಷಣ ಸಂಸ್ಥೆಯ ಪದಾಧಿ ಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕೇತರ ಸಿಬಂದಿ, ಶಿಕ್ಷಕವೃಂದ, ವಿದ್ಯಾರ್ಥಿಗಳು, ಪಾಲಕರು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next