Advertisement

ಬೊರಿವಲಿ-ದಹಿಸರ್‌ ಬಿಲ್ಲವರ ಅಸೋಸಿಯೇಶನ್‌: ಶೈಕ್ಷಣಿಕ ನೆರವು ವಿತರಣೆ

05:08 PM Jul 08, 2018 | Team Udayavani |

ಮುಂಬಯಿ: ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರು ಮಕ್ಕಳೊಂದಿಗೆ  ವೈಯಕ್ತಿಕವಾಗಿ ಸ್ಪಂದಿಸುವ ಮೂಲಕ ಮಕ್ಕಳ ಶಿಕ್ಷಣದ ಆಂತರಿಕ ಸಂವೇದನಶೀಲತೆಯನ್ನು ಅರ್ಥೈಸಿಕೊಳ್ಳಬೇಕು. ಮಕ್ಕಳು ಕಲಿಯುವ ಮಾಧ್ಯಮ ಯಾವುದೇ ಇರಲಿ, ಮಕ್ಕಳ ಶಿಕ್ಷಣದಲ್ಲಿ ಪಾಲಕರು ಧೈರ್ಯ ತುಂಬುವ ಕೆಲಸ ಮಾಡಬೇಕು. ಶಿಕ್ಷಣದ ಸಂಘರ್ಷದ ಹಾದಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಜಯಶಾಲಿ ಯಾಗಬೇಕು. ಮಕ್ಕಳು ಬದುಕಿನಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡು ಆದರ್ಶ ಪ್ರಜೆಗಳಾಗಿ ಬಾಳಬೇಕು ಎಂದು ಬಿಲ್ಲವರ ಅಸೋಸಿಯೇಶನ್‌ ವಿದ್ಯಾ ಉಪಸಮಿತಿಯ ಗೌ. ಕಾರ್ಯದರ್ಶಿ ವಿಶ್ವನಾಥ ತೋನ್ಸೆ   ನುಡಿದರು.

Advertisement

ಜು. 5ರಂದು ಬಿಲ್ಲವರ ಅಸೋಸಿಯೇಶನ್‌ ಬೊರಿವಲಿ-ದಹಿಸರ್‌ ಸ್ಥಳೀಯ ಸಮಿತಿಯ ವತಿಯಿಂದ ಬೊರಿವಲಿಯ ಗೋರೈಯಲ್ಲಿರುವ ಗುರುಸನ್ನಿಧಿಯಲ್ಲಿ ಜರಗಿದ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ವಿದ್ಯಾರ್ಥಿ ಗಳಿಗೆ ಶುಭಹಾರೈಸಿದರು.

ಒಬಿಸಿ ಉಪಸಮಿತಿಯ ಕಾರ್ಯಾಧ್ಯಕ್ಷ ಎಂ. ಆನಂದ ಪೂಜಾರಿ ಇವರು ಮಾತನಾಡಿ, ವಿದ್ಯಾ ವಿಕಸದಕ್ಕಾಗಿ ಬಿಲ್ಲವರ ಅಸೋಸಿಯೇಶನ್‌ ದಾನಿಗಳಿಂದ ಹಣವನ್ನು ಸಂಗ್ರಹಿಸಿ, ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡುವ ಮೂಲಕ ಶ್ರೀ ನಾರಾಯಣ ಗುರುಗಳ ತತ್ವಕ್ಕೆ ಬದ್ಧವಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಸಾಧನೆಯ ಪ್ರಸಾದ ಎಂದು ಸ್ವೀಕರಿಸಬೇಕು. ಗುರುತ್ವತದ ಚಿಂತನೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ದಾನಿಗಳ ಸಹಾಯ ಮಹತ್ವದ್ದಾಗಿದೆ. ಅಸೋಸಿಯೇಶನ್‌ನ ಅಧ್ಯಕ್ಷ ಜಯ ಸಿ. ಸುವರ್ಣರ 

ಮಾರ್ಗದರ್ಶನದಲ್ಲಿ ವಿದ್ಯೆಯಿಂದ ವಂಚಿತ ಮಕ್ಕಳಿಗೆ ಹೆಚ್ಚಿನ ಅವಕಾಶ ನೀಡಿದೆ. ಸ್ಥಳೀಯ ಕಚೇರಿಗಳ ಈ ಒಂದು ಕಾರ್ಯ ಸ್ತುತ್ಯರ್ಹ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಪೂಜಾರಿ ಇವರು ಮಾತನಾಡಿ, ಧನ ಸಹಾಯ ಪಡೆದ ವಿದ್ಯಾರ್ಥಿಗಳು ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿ, ಮುಂದೆ ಸಮಾಜದ ಪ್ರತಿಷ್ಠಿತ ನಾಗರಿಕರಾಗಿ ಅಸೋಸಿಯೇಶನ್‌ ಮತ್ತು ಸಮಾಜ ಬಾಂಧವರಿಗೆ ಸಹಾಯಕರಾಗಿದ್ದು, ಸಮುದಾಯಕ್ಕೆ ಕೀರ್ತಿ ತರಬೇಕು ಎಂದು ಹಾರೈಸಿದರು.

Advertisement

ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾರತ್‌ ಬ್ಯಾಂಕ್‌ನ ನಿರ್ದೇಶಕ, ಉದ್ಯಮಿ ದಾಮೋದರ ಸಿ. ಕುಂದರ್‌, ಕೇಶವ ಕೋಟ್ಯಾನ್‌, ಅಕ್ಷಯದ ಸಹಾಯಕ ಸಂಪಾದಕ ಹರೀಶ್‌ ಕೆ. ಹೆಜ್ಮಾಡಿ, ಕೇಂದ್ರ ಕಚೇರಿಯ ಜತೆ ಕಾರ್ಯದರ್ಶಿ ಧನಂಜಯ ಕೋಟ್ಯಾನ್‌ ಅವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿ ಶುಭಹಾರೈಸಿದರು.
ಗೌರವ ಕಾರ್ಯದರ್ಶಿ ಮೋಹನ್‌ ಬಿ. ಅಮೀನ್‌ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಶ್ರೀಧರ ಬಂಗೇರ ಸಹಾಯ ಧನ ಪಡೆದ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು. ಉಪಕಾರ್ಯಾಧ್ಯಕ್ಷ ಕೃಷ್ಣರಾಜ್‌ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಬೆಳಗ್ಗೆ 8 ರಿಂದ ಕಚೇರಿಯಲ್ಲಿ ಗುರುಮೂರ್ತಿಯ ವಾರ್ಷಿಕ ಪ್ರತಿಷ್ಠಾಪನೆಯ ಅಂಗವಾಗಿ ವಿವಿಧ ರೀತಿಯ ಪೂಜೆ, ಅಭಿಷೇಕ ನಡೆಯಿತು. ಧನಂಜಯ ಶಾಂತಿ ಅವರು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಕೇಂದ್ರ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್‌ ಉಪಸ್ಥಿತರಿದ್ದರು. 

ಜತೆ ಕಾರ್ಯದರ್ಶಿ ಅಶೋಕ್‌ ಸಾಲ್ಯಾನ್‌, ಜತೆ ಕೋಶಾಧಿಕಾರಿ ಸುರೇಶ್‌ ಸನಿಲ್‌, ಕಾರ್ಯಕಾರಿ ಸಮಿತಿಯ ದಯಾನಂದ ಪೂಜಾರಿ, ಆರ್‌. ಎಸ್‌. ಕೋಟ್ಯಾನ್‌, ವತ್ಸಲಾ ಪೂಜಾರಿ, ಚಂದ್ರಹಾಸ್‌ ಸುವರ್ಣ, ಪಿ. ಎ. ಪೂಜಾರಿ, ಭಾರತಿ ಅಮೀನ್‌, ರಾಘು ಪೂಜಾರಿ, ರತ್ನಾ ಪೂಜಾರಿ, ಚಂದ್ರಶೇಖರ ಬಿ. ಎನ್‌., ವಿಶೇಷ ಆಮಂತ್ರಿತ ಸದಸ್ಯರು, ಯುವ ವಿಭಾಗದ ಸದಸ್ಯರು, ಮಹಿಳಾ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

 ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next