Advertisement

ತನ್ನ ಸಲಹೆಗಾರನನ್ನು ಸಮರ್ಥಿಸಿಕೊಂಡ ಬ್ರಿಟನ್ ಪ್ರಧಾನಿ

10:38 AM May 26, 2020 | sudhir |

ಲಂಡನ್‌: ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿರುವ ತನ್ನ ಮುಖ್ಯ ಸಲಹೆಗಾರ ಡೊಮಿನಿಕ್‌ ಕಮ್ಮಿಂಗ್ಸ್‌ ಅವರನ್ನು ರಕ್ಷಿಸಲು ಯತ್ನಿಸುವ ಮೂಲಕ ಬ್ರಿಟಿಷ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ತಮ್ಮ ರಾಜಕೀಯ ಪ್ರತಿಷ್ಠೆಗೆ ಅಪಾಯ ತಂದುಕೊಂಡಿದ್ದಾರೆ.

Advertisement

ಕಮ್ಮಿಂಗ್ಸ್‌ ಎ. 12ರಂದು ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದಾಗ ಕೋವಿಡ್‌-19 ಲಕ್ಷಣಗಳಿದ್ದ ತನ್ನ ಪತ್ನಿ ಮತ್ತು ಪುತ್ರನನ್ನು ಕಾರಿನಲ್ಲಿ 264 ಮೈಲು ದೂರದ ಡರಾಮ್‌ಗೆ ತನ್ನ ಹೆತ್ತವರ ಬಳಿಗೆ ಕರೆದೊಯಿುªದು ಏಕೆಂದು ವಿವರಿಸುವಂತೆ ವಿಪಕ್ಷಗಳಿಂದ ತೀವ್ರ ಒತ್ತಡಕ್ಕೆ ಗುರಿಯಾಗಿರುವ ಜಾನ್ಸನ್‌, ತನ್ನ ಸಲಹೆಗಾರ “ಜವಾಬ್ದಾರಿಯುತವಾಗಿ, ಕಾನೂನುಬದ್ಧವಾಗಿ ಮತ್ತು ನಿಷ್ಠಾಪೂರ್ವಕವಾಗಿ’ ವರ್ತಿಸಿದ್ದಾರೆಂದು ಹೇಳಿದ್ದಾರೆ.

“ತಂದೆ ಹಾಗೂ ಪೋಷಕರಾಗಿ ಅವರು ಅನುಸರಿಸಿದ ಕ್ರಮವನ್ನು ನಾನು ದೂಷಿಸುವುದಿಲ್ಲ’ ಎಂದು ಜಾನ್ಸನ್‌ ರವಿವಾರ ಹೇಳಿದ್ದಾರೆ.
ಅನವಶ್ಯಕ ಪ್ರಯಾಣಗಳನ್ನು ನಿರ್ಬಂಧಿಸಲಾಗಿದ್ದ ವೇಳೆ ಕಮ್ಮಿಂಗ್ಸ್‌ ಅವರು ತನ್ನ ಹೆತ್ತವರ ಮನೆಯಿಂದ ಬರ್ನಾರ್ಡ್‌ ಕ್ಯಾಸಲ್‌ಗೆ ಪ್ರಯಾಣಿಸಿರುವುದನ್ನು ತಾನು ಅಲ್ಲಗಳೆಯುವುದಿಲ್ಲ. ಆದರೆ ಅವರು 14 ದಿನಗಳ ಕಾಲ ಸ್ವಯಂ ಏಕಾಂತವಾಸದಲ್ಲಿದ್ದರು ಎಂದು ಪ್ರಧಾನಿ ಹೇಳಿದರು.

ಕಮ್ಮಿಂಗ್ಸ್‌ ತನಗೆ ಹಾಗೂ ತನ್ನ ಪತ್ನಿಗೆ ಕೋವಿಡ್‌ ಲಕ್ಷಣಗಳಿದ್ದಾಗ ತನ್ನ ಮಗನನ್ನು ಸುರಕ್ಷಿತ ಸ್ಥಳದಲ್ಲಿರಿಸಿ, ವೈರಸ್‌ ಹರಡುವುದನ್ನು ತಪ್ಪಿಸಲು ಬಯಸಿದ್ದರಿಂದ ಅವರು ಡರಾಮ್‌ಗೆ ಪ್ರಯಾಣ ಬೆಳೆಸಿದರು ಎಂದು ಜಾನ್ಸನ್‌ ಸಮರ್ಥಿಸಿಕೊಂಡರು.

ಆದರೆ ಕಮ್ಮಿಂಗ್ಸ್‌ ನಾಲ್ಕು ತಾಸಿನ ಪ್ರಯಾಣ ವೇಳೆ ಎಲ್ಲಾದರೂ ಕಾರನ್ನು ನಿಲ್ಲಿಸಿದ್ದರೇ ಮತ್ತು ಅವರ ಪ್ರಯಾಣ ಕುರಿತು ತನಗೆ ಮಾಹಿತಿಯಿತ್ತೇ ಎಂಬ ಕುರಿತ ಪ್ರಶ್ನೆಗಳಿಗೆ ಜಾನ್ಸನ್‌ ಉತ್ತರಿಸಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next