Advertisement

Father: 58ನೇ ವಯಸ್ಸಿನಲ್ಲಿ 8ನೇ ಬಾರಿಗೆ ತಂದೆಯಾಗಲಿದ್ದಾರೆ ಬ್ರಿಟಿಷ್‌ ಮಾಜಿ ಪ್ರಧಾನಿ

03:58 PM May 20, 2023 | Suhan S |

ಲಂಡನ್:‌ ಯುಕೆಯ ಮಾಜಿ ಪ್ರಧಾನಿ ತನ್ನ 58ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಲಿದ್ದಾರೆ. ಬೋರಿಸ್ ಜಾನ್ಸನ್, ಕ್ಯಾರಿ ಜಾನ್ಸನ್ ದಂಪತಿ ತಮ್ಮ ಮೂರನೇ ಮಗುವಿನ ಆಗಮನದ ಸಂತಸದಲ್ಲಿದ್ದಾರೆ.

Advertisement

ಈ ವಿಚಾರವನ್ನು ಶುಕ್ರವಾರ ಸ್ವತಃ ಬೋರಿಸ್ ಜಾನ್ಸನ್ ಪತ್ನಿ ಕ್ಯಾರಿ ಜಾನ್ಸನ್ ಅವರು ಇನ್ಸ್ಟಾಗ್ರಾಮ್‌ ನಲ್ಲಿ ತನ್ನ ಇಬ್ಬರು ಮಕ್ಕಳ ಫೋಟೋವನ್ನು ಹಂಚಿಕೊಂಡು ಹೇಳಿದ್ದಾರೆ. ಕೆಲವೇ ವಾರಗಳಲ್ಲಿ ನಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ. ಕಳೆದ 8 ತಿಂಗಳಿನಿಂದ ನಾನು ತುಂಬಾ ದಣಿದಿದ್ದೇನೆ. ನನ್ನ ಕುಟುಂಬದ ಪುಟ್ಟ ಸದಸ್ಯನ ಭೇಟಿಗೆ ಕುತೂಹಲಗೊಂಡಿದ್ದೇನೆ. ವಿಲ್ಫ್ (ಮಗ) ಮತ್ತೆ ದೊಡ್ಡ ಸಹೋದರನಾಗುವ ಬಗ್ಗೆ ಉತ್ಸುಕನಾಗಿದ್ದಾನೆ ಮತ್ತು ನಿರಂತರವಾಗಿ ಅದರ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.

ಮೇ.2021 ರಲ್ಲಿ ಮದುವೆಯಾದ ಬೋರಿಸ್ ಜಾನ್ಸನ್ ಮತ್ತು ಕ್ಯಾರಿ ಜಾನ್ಸನ್ ದಂಪತಿಗೆ ರೋಮಿ ಹಾಗೂ ವಿಲ್ಫ್‌ ಎನ್ನುವ ಮಕ್ಕಳಿದ್ದಾರೆ.

ಇದನ್ನೂ ಓದಿ: ‌Auto: ಚುಮ್ಮಾ…ಚುಮ್ಮಾ…ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆದಲ್ಲೇ ರಿಕ್ಷಾ ಚಾಲಕರ ಡ್ಯಾನ್ಸ್!

ಇದು ಬೋರಿಸ್ ಜಾನ್ಸನ್ ಅವರ ಮೂರನೇ ಮದುವೆ. ಇದಕ್ಕೂ ಮುನ್ನ ಮರೀನಾ ವೀಲರ್ ಅವರೊಂದಿಗೆ ಜಾನ್ಸನ್‌ ಮದುವೆಯಾಗಿದ್ದರು. ಮರೀನಾ ವೀಲರ್ ರಿಂದ ಜಾನ್ಸನ್ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ.‌ ಇದು ಮಾತ್ರವಲ್ಲದೆ ಜಾನ್ಸನ್‌  ಹೆಲೆನ್ ಮ್ಯಾಕಿನ್‌ಟೈರ್ ಅವರೊಂದಿಗಿನ ಸಂಬಂಧದಿಂದ ಒಂದು ಮಗುವನ್ನು ಹೊಂದಿದ್ದಾರೆ. ಮೊದಲ ಪತ್ನಿ ಅಲ್ಲೆಗ್ರಾ ಮೊಸ್ಟಿನ್-ಓವನ್ ಅವರೊಂದಿಗೆ ಯಾವುದೇ ಮಕ್ಕಳನ್ನು ಹೊಂದಿರಲಿಲ್ಲ ಎಂದು ವರದಿ ತಿಳಿಸಿದೆ.

Advertisement

ಕ್ಯಾರಿ ಜಾನ್ಸನ್ ಅವರು ಬ್ರಿಟಿಷ್ ಮಾಧ್ಯಮ ಸಲಹೆಗಾರರಾಗಿದ್ದಾರೆ ಮತ್ತು ಕನ್ಸರ್ವೇಟಿವ್ ಪಕ್ಷದ ಮಾಧ್ಯಮ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರು ಓಷಿಯನ್ ಕನ್ಸರ್ವೇಟಿವ್ ಚಾರಿಟಿಯಾದ ಓಷಿಯಾನಾಗೆ ಹಿರಿಯ ಸಲಹೆಗಾರರಾಗಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next