Advertisement
ಬ್ರೆಕ್ಸಿಟ್ ನಿರ್ಧಾರಕ್ಕೆ ತಮ್ಮದೇ ಪಕ್ಷ ಕನ್ಸರ್ವೇಟಿವ್‌ನೊಳಗೆ ವಿರೋಧ ವ್ಯಕ್ತವಾದ ಹಿನ್ನೆಲೆ, ಹಾಲಿ ಪ್ರಧಾನಿ ಥೆರೇಸಾ ಮೇ ಅವರು ರಾಜೀನಾಮೆ ಸಲ್ಲಿಸಿದ್ದರು. ಹಾಗಾಗಿ, ಕನ್ಸರ್ವೇಟಿವ್ ಪಕ್ಷವು ಪ್ರಧಾನಿ ಹುದ್ದೆಗೆ ಹೊಸ ನಾಯಕನನ್ನು ಆಯ್ಕೆ ಮಾಡಲು ಇತ್ತೀಚೆಗೆ ಚುನಾವಣೆ ನಡೆಸಿತ್ತು. ಪ್ರಧಾನಿ ಹುದ್ದೆಯ ಆಕಾಂಕ್ಷಿ ಗಳಾಗಿದ್ದ ಜಾನ್ಸನ್ ಹಾಗೂ ಹಾಲಿ ವಿದೇಶಾಂಗ ಸಚಿವ ಜೆರೆಮಿ ಹಂಟ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಮಂಗಳವಾರ, ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಜಾನ್ಸನ್‌ಗೆ 92,153 ಮತಗಳು ಬಂದರೆ, ಹಂಟ್ ಅವರಿಗೆ 46,656 ಮತಗಳು ಸಿಕ್ಕಿವೆ.
ಪೂರ್ಣ ಹೆಸರು ಅಲೆಕ್ಸಾಂಡರ್ ಬೋರಿಸ್ ಡಿ ಫೆಫೆಲ್ ಜಾನ್ಸನ್. 1964ರ ಜೂ. 19ರಂದು ನ್ಯೂಯಾರ್ಕ್‌ನಲ್ಲಿ ಜನಿಸಿರುವ ಇವರು, ಆಕ್ಸ್‌ಫರ್ಡ್ ವಿವಿಯಲ್ಲಿ ಪದವಿ ಪಡೆದಿದ್ದು, ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. 2001ರಲ್ಲಿ ರಾಜಕೀಯ ಪ್ರವೇಶಿಸಿದ್ದರು. ಲಂಡನ್ ಮೇಯರ್, ಬ್ರಿಟನ್ ಸರಕಾರದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಂಪುಟಕ್ಕೆ ಇಬ್ಬರು ಭಾರತೀಯರು?: ಕನ್ಸರ್ವೇಟಿವ್ ಪಕ್ಷದಿಂದ ಬ್ರಿಟನ್ ಸಂಸತ್ತಿಗೆ ಲಗ್ಗೆಯಿಟ್ಟಿರುವ ಭಾರತೀಯ ಮೂಲದ ಪ್ರೀತಿ ಪಟೇಲ್ ಹಾಗೂ ರಿಷಿ ಸುನಾಕ್ ಅವರು ಜಾನ್ಸನ್ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ.