ಹಾಸನ: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಯ ಸರೋಜಿನಿ ಮಹಿಷಿ ಜಾರಿ ಸೇರಿದಂತೆ ಕನ್ನಡ ನಾಡು ಮತ್ತು ಕನ್ನಡಿಗರ ಹಿತ ರಕ್ಷಣೆಗೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹಾಸನ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ, ಆಟೋ ಸಂಚಾರ ಎಂದಿನಂತಿದ್ದು, ಶಾಲಾ, ಕಾಲೇಜುಗಳು ಸುಗಮವಾಗಿ ನಡೆದವು. ಸರ್ಕಾರಿ ಕಚೇರಿಗಳಿಗೂ ಸಾರ್ವಜನಿಕರ ಭೇಟಿ, ನೌಕರರ ಕರ್ತವ್ಯ ನಿರ್ವಹಣೆ ಎಂದಿನಂತಿದ್ದು, ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೂ ಅಡಚಣೆಯಾಗಲಿಲ್ಲ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯಿತು. ಒಟ್ಟಾರೆ ಸಾಮಾನ್ಯ ಜನ ಜೀವನಕ್ಕೆ ಯಾವುದೇ ಧಕ್ಕೆಯಾಗಲಿಲ್ಲ.
ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ: ಬಂದ್‌ಗೆ ಬೆಂಬಲಿಸಿದ್ದ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬೆಳಗ್ಗೆ 11ಗಂಟೆಗೆ ವಿವಿಧ ಸಂಘಟನೆಗಳು ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಕೆಲವು ಅಂಗಡಿಗಳು ಮುಚ್ಚಿದ್ದು ಬಿಟ್ಟರೆ ಆನಂತರ ವ್ಯಾಪಾರ ವಹಿವಾಟಿಗೆ ಯಾವುದೇ ತೊಂದರೆಯಾಗಲಿಲ್ಲ.
ಸಂಘಟನೆಗಳ ನಿರಾಸಕ್ತಿ: ಹರೀಶ್ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ, ಪ್ರವೀಣ್ ಗೌಡ ನೇತೃತ್ವದ ಪ್ರಜಾಶಕ್ತಿ ಸಮಿತಿ, ದಿನೇಶ್ ಗೌಡ ನೇತೃತ್ವದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ, ತೇಜ ನೇತೃತ್ವದ ಗಂಧದನಾಡು ಜನಪರ ವೇದಿಕೆ, ನೈತಿಕವಾಗಿ ಬೆಂಬಲ ಸೂಚಿಸಿರುವ ಲಾರಿ ಮಾಲೀಕರ ಸಂಘ, ಮ್ಯಾಕ್ಸಿ ಕ್ಯಾಬ್ ಚಾಲಕರ ಮತ್ತು ಮಾಲೀಕರ ಸಂಘ ಆಟೋ ಮಾಲೀಕರು ಹಾಗೂ ಚಾಲಕರ ಕ್ಷೇಮಾಭಿವೃದ್ಧಿ ಸಂಘ, ಕಾರು ಮಾಲೀಕರ ಸಂಘ ಬಂದ್‌ಗೆ ಬೆಂಬಲ ನೀಡಿದ್ದವು. ಆದರೆ ಬೆಂಬಲ ನೀಡಿದ್ದ ಸಂಘಟನೆಗಳು ಗುರುವಾರ ಬಂದ್ ಆಚರಣೆಗೆ ವರ್ತಕರನ್ನು ಮನವೊಲಿಸಲು ಆಸಕ್ತಿ ತೋರದ ಪರಿಣಾಮ ವ್ಯಾಪಾರವಹಿವಾಟಿನ ಮೇಲೆ ಪರಿಣಾಮ ಬೀರಲಿಲ್ಲ. ಇದರಿಂದ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಪೊಲೀಸ್ ಬಂದೋಬಸ್ತ್: ಬಂದ್ ಕರೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲೂ ಬಂದೋಬಸ್ತ್ಗೆ ಭಾರೀ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿತ್ತು. 4 ಮಂದಿ ಡಿವೈಎಸ್ಪಿ, 12 ಮಂದಿ ಇನ್‌ಸ್ಪೆಕ್ಟರ್ ಗಳು, 29 ಸಬ್ ಇನ್‌ಸ್ಪೆಕ್ ರ್ ಗಳು, 51 ಸಹಾಯಕ ಸಬ್ ಇನ್ ಸ್ಪೆಕ್ಟರ್‌ಗಳು, 510 ಕಾನ್‌ಸ್ಟೆಬಲ್‌ಗಳು, ಜಿಲ್ಲಾ ಸಶಸ್ತ್ರ ಪಡೆಯ (ಡಿಎಆರ್) 10 ತುಕಡಿಗಳನ್ನು ಬಂದೋಬಸ್ತ್ಗೆ ನಿಯೋಜನೆ ಮಾಡಲಾಗಿತ್ತು.