Advertisement

ಬೊರ್ಗಲ್‌ ಗುಡ್ಡೆ: ಪುಸ್ತಕ,ಬ್ಯಾಗ್‌ ವಿತರಣೆ

10:05 PM May 31, 2019 | Sriram |

ಕಾರ್ಕಳ: ಮೇಕ್‌ ಸಮ್‌ ಒನ್‌ ಸ್ಮೈಲ್ ಯುವಕರ ವಾಟ್ಸ್ಯಾಪ್‌ ಗ್ರೂಪ್‌ ವತಿಯಿಂದ ನಿಟ್ಟೆ ಬೊರ್ಗಲ್‌ ಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್‌ ಮತ್ತು ಬ್ಯಾಗ್‌ ವಿತರಿ ಸಲಾಯಿತು.

Advertisement

ದ.ಕ., ಉಡುಪಿ ಜಿಲ್ಲೆಯ ಹಲವು ಯುವಕರು ರಚಿಸಿಕೊಂಡ ವಾಟ್ಸ್ಯಾಪ್‌ ಗ್ರೂಪ್‌ ಮೂಲಕ ಮೇಕ್‌ ಸಮ್‌ ಒನ್‌ ಸ್ಮೈಲ್ ಎಂಬ ಉದ್ದೇಶದೊಂದಿಗೆ ಪ್ರತಿ ವ್ಯಕ್ತಿಯಲ್ಲೂ ನಗು ಮೂಡಿಸುವ ಕಾರ್ಯದಲ್ಲಿ ನಿರತವಾಗಿವೆ. ಸ್ವಯಂಪ್ರೇರಿತವಾಗಿ ಸಾಮಾಜಿಕ ಸೇವೆಯೊಂದಿಗೆ ಸಾಮಾಜಿಕ ಪಿಡುಗು,ವಿಶ್ವಸಂಸ್ಥೆ ಹಮ್ಮಿಕೊಳ್ಳುವ ಸ್ವಯಂ ಸೇವಕತ್ವ ಮೊದಲಾದ ವಿಷಯಗಳ ಕುರಿತು ತಂಡದ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆದಿವೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ, ಮುಖ್ಯ ಶಿಕ್ಷಕಿ ಕಮಲಾಕ್ಷಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next