Advertisement
ಬೆಂಗಳೂರು ಉತ್ತರ ತಾಲೂಕಿನಲ್ಲಿ 11 ಗ್ರಾಮಪಂಚಾಯ್ತಿಗಳಿವೆ. ಅವುಗಳಲ್ಲಿ ಕಾಚೋಹಳ್ಳಿ, ಮಚೋಹಳ್ಳಿ, ಕೊಡಿಗೆಹಳ್ಳಿ ಸೇರಿದಂತೆ ಮತ್ತಿತರರಗ್ರಾಮ ಪಂಚಾಯ್ತಿಗಳು ಬೃಹತ್ ಬೆಂಗಳೂರುಮಹಾನಗರಕ್ಕೆ ತಾಕಿಕೊಂಡಿವೆ. ಈ ಭಾಗದಲ್ಲಿಹಲವು ಸಂಖ್ಯೆಗಳಲ್ಲಿ ಕಾರ್ಖಾನೆಗಳು ತಲೆಎತ್ತಿದ್ದು, ಕಾರ್ಖಾನೆಯ ಕಲುಷಿತ ನೀರು ಆಗ್ರಾಮ ಗಳು ಕೆರೆಗಳನ್ನು ಸೇರಿ ಮಾಲಿನ್ಯ ಉಂಟಾಗಿದೆ. ಹೀಗಾಗಿ ಕೆಲವು ಕೆರೆಗಳು ನೊರೆಯಿಂದ ಉಕ್ಕಿ ಹರಿಯುತ್ತಿವೆ.
Related Articles
Advertisement
ಬೋರ್‌ವೆಲ್‌ನಲ್ಲಿ ಕಲುಷಿತ ನೀರು: ಕಾಚೋಹಳ್ಳಿ ವ್ಯಾಪ್ತಿಯಲ್ಲಿ 15 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಜನರು ನೆಲೆಸಿದ್ದಾರೆ. ಕುಡಿಯುವ ನೀರಿಗಾಗಿ ಕೊರೆದ ಬೋರ್‌ವೆಲ್ ನಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಬಂದ ಹಿನ್ನೆಲೆಯಲ್ಲಿ ಆ ಬೋರ್‌ವೆಲ್ ಸ್ಥಗಿತಗೊಳಿಸಿಲಾಗಿದೆ. ಉತ್ತರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಕೊರೆದ ಬೋರ್‌ವೆಲ್‌ಗಳಲ್ಲಿ ಕಲುಷಿತ ನೀರು ಬಂದಿರುವುದು ಇದೆ ಎಂದು ಬೆಂಗಳೂರು ಉತ್ತರ ತಾಲೂಕಿನ ಅಧಿಕಾರಿಗಳು ಹೇಳುತ್ತಾರೆ.
ಕೊಡಿಗೆಹಳ್ಳಿಯಲ್ಲಿ ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಘಟಕವಿದೆ. ಅಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಆ ಭಾಗದ ವ್ಯಾಪ್ತಿಯಲ್ಲಿ ನೊಣಗಳು ಸಂಖ್ಯೆ ಅಧಿಕವಿರುವುದರ ಜತೆ ಘನತಾಜ್ಯ ಕೂಡ ನಾರುತ್ತಿದೆ. ಪಾಲಿಕೆಯ ಗಮನಕ್ಕೆ ತರಲಾಗಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಯಾವುದೇ ರೀತಿಯ ಗಮನ ನೀಡುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ಸ್ಪಂದಿಸದ ಮಾಲಿನ್ಯ ಇಲಾಖೆ, ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಮೊರೆ :
ಈ ಸಂಬಂಧ ಕೆಲವು ಗ್ರಾಮ ಪಂಚಾಯ್ತಿಗಳೂ ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಗೂ ಪತ್ರ ಬರೆಯಲಾಗಿದೆ. ಆದರೆ ಯಾವುದೇ ರೀತಿಯ ಪ್ರಯೋಜನ ವಾಗಿಲ್ಲ. ಹೀಗಾಗಿ, ಬೆಂಗಳೂರು ನಗರ ಉತ್ತರ ತಾಲೂಕಿನ ಹಿರಿಯ ಅಧಿಕಾರಿಗಳು ಈ ಬಗ್ಗೆ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರ ಸಲಹೆ
ಮೊರೆ ಹೋಗಿದ್ದಾರೆ. ಶೀಘ್ರದಲ್ಲಿ ಯಲ್ಲಪ್ಪ ರೆಡ್ಡಿ ಅವರಿಂದ ಸ್ಥಳ ಪರಿಶೀಲನೆ ನಡೆಸಿ ಈ ಬಗ್ಗೆ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡುವ ಆಲೋಚನೆ ನಡೆಸಿದ್ದಾರೆ. ಇತ್ತೀಚಿಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ದಿಶಾ ಸಭೆಯಲ್ಲೂ ಕೂಡ ಈ ಬಗ್ಗೆ ಬೆಳಕು ಚೆಲ್ಲಲಾಯಿತು
ಕೆಲವು ಗ್ರಾಮ ಪಂಚಾಯ್ತಿಯ ಬೋರ್‌ವೆಲ್‌ಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಬರುತ್ತಿವೆ ಎಂಬ ಮಾಹಿತಿ ಜಿಪಂ ಗಮನಕ್ಕೆ ಬಂದಿದೆ. ಜತೆಗೆಕಾರ್ಖಾನೆ ಯಿಂದ ಹೊರಹೋಗುವ ಮಲಿನ ನೀರು ಕೂಡ ಗ್ರಾಮಗಳ ಕೆರೆಗಳನ್ನು ಸೇರುತ್ತಿದೆ ಎಂಬ ದೂರು ಇದೆ. ಆ ಹಿನ್ನೆಲೆಯಲ್ಲಿ ಪಾಲಿಕೆ ಹಾಗೂ ಮಾಲಿನ್ಯ ಮಂಡಳಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.-ಸಂಗಪ್ಪ ಸಿಇಒ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ
-ದೇವೇಶ ಸೂರಗುಪ್ಪ