Advertisement
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಮುಜಗೊಂಡ ಕುಟುಂಬದ ಪೂಜ ಹಾಗೂ ಸತೀಶ ದಂಪತಿಗೆ ಸಾತ್ವಿಕ ಒಬ್ಬನೇ ಮಗ.14 ತಿಂಗಳ ಮಗು ಸಾತ್ವಿಕ ಏಕಾಏಕಿ ತಮ್ಮದೇ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಬಿದ್ದಿದ್ದ. ಇದರಿಂದ ಕಂಗಾಲಾಗಿದ್ದ ಮುಜಗೊಂಡ ಕುಟುಂಬದವರು ತಮ್ಮ ಮಗ ಸುರಕ್ಷಿತವಾಗಿ ಬದುಕಿ ಬರಲೆಂದು ಹಲವು ರೀತಿಯಲ್ಲಿ ಹರಕೆ ಹೊತ್ತಿದ್ದರು.ಹೆತ್ತವರ ಹರಕೆಯಂತೆ ಮಗು ಸಾತ್ವಿಕ್ ಸುರಕ್ಷಿತವಾಗಿ ಬದುಕಿದ್ದು, ಸ್ಥಳೀಯ ದೈವೀಶಕ್ತಿಯಾದ ಸಿದ್ಧಲಿಂಗ ಮಹಾರಾಜರ ಪವಾಡ ಹಾಗೂ ಕೃಪೆ ಎಂದು ಮುಜಗೊಂಡ ಕುಟುಂಬ ಸಂಭ್ರಮಿಸುತ್ತಿದೆ.
Related Articles
Advertisement
ವಿಜಯಪುರ ಜಿಲ್ಲೆಯಲ್ಲಿ ಮೂರನೇ ಪ್ರಕರಣ ಕಾಂಚನಾ, ಅಕ್ಷತಾ ದುರಂತ ಘಟನೆಗಳ ಬಳಿಕ ಸಾತ್ವಿಕ ಪ್ರಕರಣ ನಡೆದಿದ್ದು, ಸಾತ್ವಿಕ ಪ್ರಕರಣ ಸುಖಾಂತ್ಯ ಕಂಡಿದೆ.
ರಕ್ಷಣಾ ಕಾರ್ಯಾಚರಣೆ ವಿಫಲವಾಗಿ 2008 ರಲ್ಲಿ ದೇವರನಿಂಬರಗಿ ಕಾಂಚನಾ ದುರಂತ ಘಟನೆ, 2014 ರಲ್ಲಿ ದ್ಯಾಬೇರಿಯಲ್ಲಿ ಅಕ್ಷತಾ ಪಾಟೀಲ ದುರಂತ ಸಾವು ಸಂಭವಿಸಿತ್ತು.
2008 ರಲ್ಲಿ ಇಂಡಿ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದದ್ದ ಕೊಳವೆ ಬಾವಿಯಲ್ಲಿ ಕಾಂಚನಾ ಉರ್ಫ್ ಏಗವ್ವ ಎಂಬ ಬಾಲಕಿ ಪ್ರಕರಣ ನಡೆದ ರಕ್ಷಣಾ ಕಾರ್ಯಾಚರಣೆ ವಿಫಲವಾಗಿತ್ತು.2014 ರಲ್ಲಿ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ಜಮೀನಿನಲ್ಲಿ ಅಕ್ಷತಾ ಪ್ರಕರಣ ನಡೆದಿತ್ತು. ಹೆತ್ತವರು ಕೂಲಿಗಾಗಿ ತೋಟದ ವಸ್ತಿಯಲ್ಲಿ ಇದ್ದಾಗ ಪಕ್ಕದ ಜಮೀನನಲ್ಲಿ ಆಟವಾಡಲು ಹೋಗಿದ್ದ ಅಕ್ಷತಾ ವಿಫಲವಾಗಿದ್ದ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದಳು.ಹಲವು ದಿನಗಳ ಕಾರ್ಯಾಚರಣೆ ಬಳಿಕ ಬಾಲಕಿಯನ್ನು ಸುರಕ್ಷಿತವಾಗಿ ಹೊರತರುವ ಪ್ರಯತ್ನ ವಿಫಲವಾಗಿ, ದುರಂತ ಅಂತ್ಯ ಕಂಡಿತ್ತು.