Advertisement
ಆದರೆ, ಇತ್ತೀಚಿಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕೆರೆ-ಕುಂಟೆಗಳು ಮತ್ತು ಜಲಾಶಯಗಳು ಭರ್ತಿಯಾಗಿವೆ. ಅಲ್ಲದೇ, ಮಳೆ ಅಭಾವದಿಂದ ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಬಂದಿದೆ. ಹಾಗೆಯೇ ಮಳೆ ಆರ್ಭಟಕ್ಕೆ ಹೊಲದಲ್ಲಿನ ಬೆಳೆಗಳು ನೀರು ಪಾಲಾಗಿ ರೈತರು ಕಂಗಾಲಾಗಿದ್ದಾರೆ.
Related Articles
Advertisement
ಚಿಕ್ಕಬಳ್ಳಾಪುರ ತಾಲೂಕಿನ ಮುಸ್ಟೂರು ಕೆರೆ ಕೋಡಿ ಹರಿಯುತ್ತಿದ್ದು ಚಿಕ್ಕಬಳ್ಳಾಪುರ ನಗರ ಪ್ರವೇಶ ಮಾಡುವ ಮಾರ್ಗದ ಗೋಪಾಲಕೃಷ್ಣ ಕೆರೆಯೂ ಎಚ್.ಎನ್.ವ್ಯಾಲಿಯ ನೀರು ಸೇರಿದಂತೆ ಮಳೆ ನೀರಿನಿಂದ ಮೈದುಂಬಿದೆ. ಇನ್ನೂ ರಂಗಧಾಮ ಕೆರೆ ಕೋಡಿ ಹರಿದಿದ್ದು ಕಂದವಾರ ಕೆರೆ ಮೂಲಕ ದಿಬ್ಬೂರು ಮತ್ತು ಪೆರೇಸಂದ್ರ ಭಾಗದ ಕೆರೆಗಳಿಗೆ ನೀರು ಹರಿಯಲು ಆರಂಭಗೊಂಡಿದೆ. ಇದರಲ್ಲದೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ, ತಲಕಾಯಲಬೆಟ್ಟ ಕೆರೆ ಕೋಡಿ ಹರಿಯುತ್ತಿದ್ದು ಶಾಸಕ ವಿ.ಮುನಿಯಪ್ಪ ಸಹಿತ ಗ್ರಾಮಸ್ಥರು ಕೆರೆಗೆ ಬಾಗಿನ ಅರ್ಪಿಸಿದ್ದರು.
ಇದನ್ನೂ ಓದಿ:- ಡಬಲ್ ಬ್ಯಾನರ್‌ನಿಂದ “ಕಾಂಗ್ರೆಸ್’ಗೆ ತಲೆನೋವು!
ಶಾಲಾ ಮಕ್ಕಳ ಬಗ್ಗೆ ಗಮನಹರಿಸಿ
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಗೊಂಡಿರುವ ಹಿನ್ನೆಲೆ ಸರ್ಕಾರಿ ಶಾಲಾ ಕಾಲೇಜು ಆರಂಭಿಸಿ ಯಾವುದೇ ತೊಂದರೆ ಇಲ್ಲದೇ ತರಗತಿಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ದಸರಾ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡುವ ಸಾಧ್ಯತೆ ಇದ್ದು ವಿದ್ಯಾರ್ಥಿಗಳು ಕೆರೆ-ಕುಂಟೆಗಳಲ್ಲಿ ಈಜಾಡಲು ಧಾವಿಸಬಹುದೆಂಬ ಆತಂಕ ಪೋಷಕರಿಗೆ ಕಾಡುತ್ತಿದೆ. ಮಳೆ ಆರ್ಭಟದಿಂದ ಒಂದು ಕಡೆ ಕೆರೆ-ಕುಂಟೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿದ್ದರೆ ಮತ್ತೂಂದಡೆ ಮೈದುಂಬಿ ಹರಿಯುತ್ತಿರುವ ಕೆರೆ-ಕುಂಟೆಗಳು ಅಪಾಯದ ಮಟ್ಟದಲ್ಲಿದೆ. ಜಿಲ್ಲಾಡಳಿತ ಈ ಕುರಿತು ಸೂಕ್ತ ಗಮನಹರಿಸಬೇಕಾಗಿದೆ.
- ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಮುಸ್ಟೂರು ಕೆರೆ ತುಂಬಿ ಕೋಡಿ ಹರಿಯುತ್ತಿರುವುದು.
- ಮಳೆ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಸಿರುವುದು.