Advertisement

ಪವರ್ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ ಮಾಡಿದ “ಯುವರತ್ನ’ 

07:45 AM Jun 25, 2020 | Lakshmi GovindaRaj |

ಈಗಾಗಲೇ ಲಾಕ್‍ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಸಿನಿಮಾಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಚಿತ್ರದ ಕಲಾವಿದರು, ತಂತ್ರಜ್ಞರು ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದರಿಂದ ಸಿನಿಮಾ ಕೆಲಸಗಳು ನಿಧಾನವಾಗಿ ಸಾಗುತ್ತಿವೆ. ಈ ನಡುವೆ ಸ್ಯಾಂಡಲ್‌ವುಡ್‌ನದ ಬಹು ನಿರೀಕ್ಷಿತ “ಯುವರತ್ನ’ ಚಿತ್ರ ತಂಡದಿಂದ ಸುದ್ದಿಯೊಂದು ಹೊರ ಬಂದಿದ್ದು, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಬೇಸರ ತರಿಸಿದೆ.

Advertisement

ಹೌದು! “ಯುವರತ್ನ’ ಚಿತ್ರದ ನಿರ್ದೇಶಕ ಸಂತೋಷ್ ಆನಂದ್‌ರಾಮ್‌ ಈ ಬಗ್ಗೆ  ಟ್ವೀಟ್ ಮಾಡಿದ್ದು, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈನಲ್ಲಿ ಕೆಲಸಗಳು ನೆಡೆಯುತ್ತಿಲ್ಲ. ಚೆನ್ನೈ ಮತ್ತು ಮುಂಬೈ ಲಾಕ್‍ಡೌನ್ ನಲ್ಲಿವೆ. ಪರಿಸ್ಥಿತಿ ಹದವಾಗುವವರೆಗೂ ಯುವರತ್ನ ಹಾಡುಗಳು ಬರುವುದು ಕಷ್ಟ. ಸಂಗೀತ ನಿರ್ದೇಶಕ ತಮನ್ ಅವರು ಚೆನ್ನೈನ ಲಾಕ್‍ಡೌನ್ ನಲ್ಲಿ ಸಿಲುಕಿದ್ದಾರೆ. ಹಾಗಾಗಿ ಅಭಿಮಾನಿಗಳು ದಯವಿಟ್ಟು ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸುತ್ತಿರುವ “ಯುವರತ್ನ’ ಸಿನಿಮಾ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅಲ್ಲದೇ “ರಾಜಕುಮಾರ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಸಂತೋಷ್ ಆನಂದ್ ರಾಮ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ಪುನೀತ್ ರಾಜ್‍ಕುಮಾರ್‌ಗೆ ಜೋಡಿಯಾಗಿ ಸಯೇಷ ಸೈಗಲ್ ಕಾಣಿಸಿಕೊಂಡಿದ್ದು, ಜೊತೆಗೆ ಸೋನು, ಡಾಲಿ ಧನಂಜಯ್, ವಸಿಷ್ಠ ಸಿಂಹ ಸಿನಿಮಾದಲ್ಲಿ ಅಬ್ಬರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next