Advertisement
ಗಡಿಪ್ಪಿಲ ಸಮೀಪ ರಸ್ತೆಯು ಸ್ವಲ್ಪ ಎತ್ತರವಾಗಿತ್ತು. ಬಳಿಕ ಇದನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ರಸ್ತೆಯನ್ನು ತಗ್ಗಿಸಿದರು. ಆದರೆ ರಸ್ತೆಯನ್ನು ಅಗೆದು ಮರುಡಾಮರೀಕರಣ ನಡೆಸಿದ ಕೆಲವೇ ದಿನದಲ್ಲಿ ಮಳೆ ಬಂದ ಕಾರಣ ರಸ್ತೆಯೂ ಸಂಪೂರ್ಣವಾಗಿ ಹದೆಗೆಡುವಂತಾಯಿತು.
ಉತ್ತಮವಾಗಿದ್ದ ರಸ್ತೆಯನ್ನು ತಗ್ಗಿಸಲು ಹೋಗಿ ಸಂಪೂರ್ಣವಾಗಿ ಹಾಳುಮಾಡಲಾಗಿದೆ. ಈ ರಸ್ತೆಯಲ್ಲಿ ಚಲಿಸುವುದೇ ಕಷ್ಟಕರ. ಸುಮ್ಮನೆ ರಸ್ತೆಯನ್ನು ಹಾಳು ಮಾಡಿದರು ಎಂದು ಚಾಲಕರು ಇಲಾಖೆಯನ್ನು ದೂರುತ್ತಿದ್ದಾರೆ. ತಾತ್ಕಾಲಿಕ ಸಮಸ್ಯೆ ಪರಿಹರಿಸಿ
ಹೇಗೂ ರಸ್ತೆಯನ್ನು ಹಾಳು ಮಾಡಲಾಗಿದೆ. ತಾತ್ಕಾಲಿಕವಾಗಿಯಾದರೂ ರಸ್ತೆಯ ಹೊಂಡವನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.