Advertisement

ಹಲವು ನಿರೀಕ್ಷೆಯಲ್ಲಿ ಗಡಿಭಾಗದ ಜನರು

09:20 AM Apr 16, 2022 | Team Udayavani |

ಸುಳ್ಯಪದವು: ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಎ. 16ರಂದು ಕರ್ನಾಟಕ ಕೇರಳ ಗಡಿ ಭಾಗದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಎ. 15ರಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್‌ ನಂದನ್‌, ತಹಶೀಲ್ದಾರ್‌ ರಮೇಶ್‌ ಬಾಬು, ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಇವರ ಜತೆಗೆ ಸ್ಥಳೀಯ ಬಡಗನ್ನೂರು ಗ್ರಾ.ಪಂ. ಕೈಜೋಡಿಸಿದೆ.

Advertisement

ವಿವಿಧ ಇಲಾಖೆಗಳು ಸ್ಟಾಲ್‌ಗ‌ಳನ್ನು ತೆರೆದು ಜನರಿಗೆ ಮಾಹಿತಿ ಜತೆ ಪ್ರಾತ್ಯಕ್ಷಿಕೆ ನೀಡಲಿವೆ. ಅಂದು ಡಿಸಿ ಸಂಜೆ ಎಸ್‌ಟಿ, ಎಸ್‌ಸಿ ಮನೆಗಳಿಗೆ, ಅಂಗನ ವಾಡಿ ಕೇಂದ್ರ, ಧಾರ್ಮಿಕ ಕೇಂದ್ರ, ಎಂಡೋ ಪೀಡಿತರ ಮನೆಗಳಿಗೆ ಭೇಟಿ ನೀಡಿ ಗ್ರಾಮದ ಹಿರಿಯರೊಂದಿಗೆ ಗ್ರಾಮ ಚಾವಡಿ ನಡೆಸಲಿದ್ದಾರೆ. ರಾತ್ರಿ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯಲ್ಲಿ ವಾಸ್ತವ್ಯ ಹೊಂದಲಿದ್ದಾರೆ.

ಜಿಲ್ಲಾಧಿಕಾರಿಯ ಜತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದು ಸಮಸ್ಯೆಗಳು ಸ್ಥಳದಲ್ಲಿ ಇತ್ಯರ್ಥವಾಗುವ ನಂಬಿಕೆ ಜನರಲ್ಲಿದೆ.

ಮುನ್ನಲೆಗೆ ಎಂಡೋಸಲ್ಫಾನ್‌ ವಿಚಾರ

ಕರ್ನಾಟಕ ಕೇರಳ ಗಡಿಭಾಗವಾದ ಮಿಂಚಿಪದವು ಎಂಬಲ್ಲಿ ಗೇರು ನಿಗಮ ದವರು ಬಾವಿಗೆ ಎಂಡೋಸಲ್ಫಾನ್‌ ಸುರಿದಿದ್ದಾರೆ ಎಂಬ ಮಾತು ಅಂದಿನಿಂದ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಅದು ಡಿಸಿ ಗ್ರಾಮವಾಸ್ತವ್ಯದ ವೇಳೆ ಮುನ್ನಲೆಗೆ ಬರುವ ಸಾಧ್ಯತೆ ಅಧಿಕವಾಗಿದೆ. ಜಿಲ್ಲಾಧಿಕಾರಿ ಮಿಂಚಿಪದವುಗೆ ತಂಡ ದೊಂದಿಗೆ 2021ನೇ ಜೂನ್‌ಲ್ಲಿ ಭೇಟಿ ನೀಡಿ ಅದರ ತೆರವಿಗೆ ಕಾಸರಗೋಡು ಜಿಲ್ಲಾಧಿಕಾರಿ ಜತೆ ಚರ್ಚಿಸಿ, ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಈ ವರೆಗೆ ಏನೂ ಆಗದೆ ಇರುವುದು ಸಂಶಯಗಳಿಗೆ ಕಾರಣವಾಗಿದೆ.

Advertisement

ಇಲ್ಲಿ ಪ್ರಥಮ ಬಾರಿಗೆ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಇದು ಆಗಿರುವುದರಿಂದ ಸಮಸ್ಯೆ ಗಳನ್ನು ಮಂಡಿಸಲು ಸಾರ್ವ ಜನಿಕರು ತುದಿಗಾಲಲ್ಲಿ ನಿಂತಿದ್ದಾರೆ. ಗಡಿ ಭಾಗದ ಸುಳ್ಯಪದವು ಶ್ರೀ ಬಾಲ ಸುಬ್ರಹ್ಮಣ್ಯ ಅನುದಾನಿತ ಶಾಲೆ ಸುಸಜ್ಜಿತವಾಗಿ ಇದ್ದರೂ ಶೂನ್ಯ ಅಧ್ಯಾಪಕರನ್ನು ಹೊಂದಿದೆ.

ಈ ಭಾಗ ಗಡಿ ಪ್ರದೇಶ ವಾಗಿರುವುದರಿಂದ ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಎಸ್‌ಸಿ, ಎಸ್‌ಟಿ ಜಾತಿ ಸರ್ಟಿಫಿಕೇಟ್‌ ಸಮಸ್ಯೆ, ಕರ್ನಾಟಕದಿಂದ ಕೇರಳಕ್ಕೆ ಸಂಪರ್ಕಿಸಲು ಸಾರಿಗೆ ವ್ಯವಸ್ಥೆ, ಕೇರಳ ಮತ್ತು ಕರ್ನಾಟಕ ರಸ್ತೆಗಳು ಮರು ಡಾಮರು ಕಾಮಗಾರಿ ಹೊಂದಿದ್ದರೂ ಗಡಿಭಾಗದ ಕಾಯರ್‌ಪದವು ಎಂಬಲ್ಲಿ ಸರಿಯಾದ ಸೇತುವೆ ನಿರ್ಮಾಣ ಆಗಬೇಕಾಗಿದೆ. ಮೊಬೈಲ್‌ ಟವರ್‌ ಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕೃಷಿಕರ ತೋಟಗಳಿಗೆ ಕಾಡುಕೋಣ, ಹಂದಿ, ಮಂಗಗಳು ನಿರಂತರ ದಾಳಿ ನಡೆಸುತ್ತಿದ್ದು ಕೃಷಿ ನಾಶವಾಗುತ್ತಿದೆ ಇದರ ಬಗ್ಗೆ ಗಮನಹರಿಸಬೇಕಾಗಿದೆ. ಕೃಷಿಕರು ಪಿಎಂ ಕಿಸಾನ್‌ ಯೋಜನೆಯಲ್ಲಿ ಅರ್ಜಿ ಹಾಕಿ ಕೆವೈಸಿ ಪುನಃ ಮಾಡಿದರೂ ಹಣ ಬಂದಿಲ್ಲ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next