Advertisement
– ಇದು ರಾಜ್ಯದ ಜನರ ಒತ್ತಾಸೆ. ಇದೇ ಅಭಿಪ್ರಾಯವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಹಾಗೂ ಹಿರಿಯ ನ್ಯಾಯವಾದಿ ಮೋಹನ್ ಕಾತರಕಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದೆ ಇಟ್ಟಿದ್ದಾರೆ. ಗಡಿ ವಿವಾದಕ್ಕೆ ಸಂಬಂಧಿಸಿ ಇದೇ ಮೊದಲ ಬಾರಿಗೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಗಡಿ ವಿವಾದಕ್ಕೆ ಸಂಬಂಧಿಸಿ ಮಹಾರಾಷ್ಟ್ರ ದಾಖಲಿಸಿರುವ ದಾವೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿರುವಾಗ ಕೇಂದ್ರ ಗೃಹ ಸಚಿವರು ಉಭಯ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದಿರುವುದು ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಗಡಿ ವಿಚಾರದಲ್ಲಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಾಗುವುದು. ರಾಜ್ಯದ ಹಿತಾಸಕ್ತಿ ಕಾಯುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕೇಂದ್ರ ಗೃಹ ಸಚಿವರು ಗಡಿವಿವಾದದ ಬಗ್ಗೆ ಚರ್ಚಿಸುವ ಸಲುವಾಗಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ದಿಲ್ಲಿಗೆ ಕರೆದಿದ್ದಾರೆ. ಅಲ್ಲಿ ನಮ್ಮ ನಿಲುವಿನ ಬಗ್ಗೆ ಹೇಳುತ್ತೇವೆ. ರಾಜ್ಯ ಪುನರ್ ವಿಂಗಡನೆ ಕಾಯ್ದೆ, ಪ್ರಕ್ರಿಯೆ, ಸುಪ್ರೀಂ ಕೋರ್ಟ್ ಪ್ರಕರಣ ಸೇರಿದಂತೆ ಎಲ್ಲ ಮಾಹಿತಿಯನ್ನು ಗೃಹ ಸಚಿವರಿಗೆ ನೀಡಲಿದ್ದೇನೆ. ಸಂವಿಧಾನದ ಅವಕಾಶಗಳು ಮತ್ತು 2004ರಲ್ಲಿ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡೇ ಇಲ್ಲ ಎಂಬ ಬಗ್ಗೆ ಗೃಹ ಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಡಲಿದ್ದೇನೆ. ರಾಜ್ಯದ ವಾದ ಪ್ರಬಲವಾಗಿ ಮಂಡಿಸಲಿ
ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಗಡಿ ವಿವಾದ ಮುಗಿದ ಅಧ್ಯಾಯ. ಮಹಾಜನ ವರದಿ ಅಂತಿಮ. ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಬೆಳಗಾವಿಗೆ ತೆರಳಿದ ವೇಳೆ, “ಗಡಿ ವಿಚಾರ ಕೆದಕುವುದರಲ್ಲಿ ಅರ್ಥವಿಲ್ಲ. ಸಾಕಿನ್ನು, ಪದೇ ಪದೆ ಮಾತನಾಡುವುದನ್ನು ನಿಲ್ಲಿಸಿ’ ಎಂದು ಹೇಳಿ ಹೋಗಿದ್ದರು. ಆದರೂ ಇಷ್ಟು ವರ್ಷಗಳ ಕಾಲ ಮಹಾರಾಷ್ಟ್ರದವರು ರಾಜಕೀಯ ಕಾರಣಕ್ಕೆ ಗಡಿ ವಿಚಾರ ಆಗಾಗ್ಗೆ ಕೆದಕುತ್ತಿರುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನಿಲುವು ಸಭೆಯಲ್ಲಿ ಪ್ರಬಲವಾಗಿ ಮಂಡಿಸಲಿ. ನಾನೂ ಈ ಬಗ್ಗೆ ಪ್ರಧಾನಿಯವರ ಬಳಿ ಮಾತನಾಡಲಿದ್ದೇನೆ.
Related Articles
ಸಿದ್ದರಾಮಯ್ಯ,
ಮಾಜಿ ಮುಖ್ಯಮಂತ್ರಿ
ಗಡಿ ವಿವಾದ ಮಹಾಜನ ಆಯೋಗದ ವರದಿ ಪ್ರಕಾರ ಈಗಾಗಲೇ ಇತ್ಯರ್ಥ ಆಗಿದೆ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರು ವಾಗ ಅದನ್ನು ಈ ರೀತಿ ವಿವಾದ ಯಾಕೆ ಮಾಡಬೇಕು? ಅವರು ಕೋರ್ಟ್‌ನಲ್ಲಿ ಹೋರಾಟ ಮಾಡಲಿ, ನಾವೂ ಮಾಡೋಣ.ಎರಡೂ ಕಡೆ ಬಿಜೆಪಿ ಸರಕಾರವೇ ಇರುವುದರಿಂದ ಮುಖ್ಯಮಂತ್ರಿಗಳು, ಮಹಾರಾಷ್ಟ್ರ ಪುಂಡಾಟಿಕೆ ಮಾಡದಂತೆ ಅಲ್ಲಿನ ಸರಕಾರಕ್ಕೆ ಬುಧವಾರದ ಸಭೆಯಲ್ಲಿ ಮನವರಿಕೆ ಮಾಡಲಿ. ಹಾಗೆಯೇ ಅಲ್ಲಿನ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಲಿ. ಎರಡೂ ರಾಜ್ಯಗಳಿಗೆ ಸಂಬಂಧಿಸಿದ ವಿವಾದ ಬಗೆಹರಿಸಿಕೊಳ್ಳಲು ಕೇಂದ್ರದ ನೆರವನ್ನು ಪಡೆಯಬೇಕು.
Advertisement
ರಾಜ್ಯದ ನಿಲುವು ಮನವರಿಕೆ ಮಾಡಿಕೊಡಿಎಚ್.ಡಿ.ಕುಮಾರಸ್ವಾಮಿ,
ಮಾಜಿ ಮುಖ್ಯಮಂತ್ರಿ
ಗಡಿ ವಿಚಾರದಲ್ಲಿ ರಾಜ್ಯದ ನೆಲ ರಕ್ಷಣೆಗೆ ರಾಜ್ಯ ಸರಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಮುಖ್ಯ ಮಂತ್ರಿಯವರು ಸಭೆಯಲ್ಲಿ ನಮ್ಮ ನಿಲುವು ಪ್ರಬಲವಾಗಿ ಮಂಡಿಸಬೇಕು. ಗಡಿ ವಿವಾದವನ್ನು ರಾಜಕೀಯ ಕಾರಣಗಳಿಗಾಗಿ ಪದೇ ಪದೆ ಕೆದಕುವುದರಿಂದ ರಾಜ್ಯದ ಗಡಿ ಭಾಗದ ಜನರ ಜೀವನದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಮನ ವರಿಕೆ ಮಾಡಿಕೊಡಬೇಕು. ರಾಜ್ಯದ ನಿಲುವನ್ನು ಸಮರ್ಥವಾಗಿ ಪ್ರತಿಪಾದಿಸಬೇಕು. ಮುಖ್ಯ ಮಂತ್ರಿ ಯವರು ಈ ಕೆಲಸ ಮಾಡು ತ್ತಾರೆ ಎಂಬ ನಂಬಿಕೆ ಇದೆ. ಗಡಿ ವಿಚಾರ ಮುಗಿದ ಅಧ್ಯಾಯ. ಮಹಾಜನ ಆಯೋಗದ ವರದಿ ಪ್ರಕಾರ ಗಡಿ ವಿವಾದ ಇತ್ಯರ್ಥ ಆಗಿದ್ದರೂ ಮಹಾರಾಷ್ಟ್ರ ಸರಕಾರ ಅದನ್ನು ಪದೇ ಪದೆ ಕೆದಕುವುದರಲ್ಲಿ ಅರ್ಥವಿಲ್ಲ. ಮಹಾರಾಷ್ಟ್ರಕ್ಕೆ ಯಾವ ಅಧಿಕಾರವೂ ಇಲ್ಲ
ಮೋಹನ್ ಕಾತರಕಿ
ಹಿರಿಯ ಸುಪ್ರೀಂ ಕೋರ್ಟ್ ನ್ಯಾಯವಾದಿ ರಾಜ್ಯಗಳ ಪುನರ್ ವಿಂಗಡನೆ ಕಾಯ್ದೆ-1956ರ ಅಡಿ ದೇಶದ ಸಂಸತ್ತು ಬೆಳಗಾವಿ ಜಿಲ್ಲೆಯನ್ನು ಧಾರವಾಡ, ವಿಜಯಪುರ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಹಿಂದಿನ ಬಾಂಬೆ ರಾಜ್ಯದಿಂದ ಮೈಸೂರು ರಾಜ್ಯಕ್ಕೆ ವರ್ಗಾಯಿಸಿದೆ. ಸಂಸತ್ತು ತೆಗೆದುಕೊಂಡ ನಿರ್ಣಯ ಭಾಷಾ, ಐತಿಹಾಸಿಕ, ನಿಕಟ ಅಂತರದ ಅಂಶಗಳ ಆಧಾರದಲ್ಲಾಗಿತ್ತು. ಸಂಸತ್ತಿನ ನಿರ್ಣಯವನ್ನು ರಾಜ್ಯಗಳ ಪುನರ್ ವಿಂಗಡನೆ ಆಯೋಗದ ಶಿಫಾರಸುಗಳ ನೆಲೆಗಟ್ಟಿನಲ್ಲಿ ಕೈಗೊಳ್ಳಲಾಗಿತ್ತು. ಇದನ್ನು ಆಗ ಬಾಂಬೆ ರಾಜ್ಯ ವಿರೋಧಿಸಿರಲಿಲ್ಲ.
ಈ ಶಾಸಕಾಂಗ ನಿರ್ಣಯವನ್ನು ಪ್ರಶ್ನಿಸುವ ಅಧಿಕಾರ ಮತ್ತು ತಳಹದಿ ಮಹಾರಾಷ್ಟ್ರಕ್ಕೆ ಇಲ್ಲ. ಬೆಳಗಾವಿ ತನ್ನದು ಎಂಬ ಅದರ ಬೇಡಿಕೆ ಕಾನೂನು ಮಾತ್ರವಲ್ಲ, ವಾಸ್ತವಿಕ ನೆಲೆಗಟ್ಟಿನಲ್ಲೂ ಸಮರ್ಥನೀಯವಲ್ಲ. ಕೇಂದ್ರ ಸರಕಾರ ಈ ವಿಚಾರ ವನ್ನು ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿಕೊಡಬೇಕು.