Advertisement
“ಸಾಂದ್ರತೆ ಮತ್ತು ತೇವಾಂಶ ನಾವು ಬಯಸಿದ ರೀತಿಯಲ್ಲೇ ಇದೆ. ಆರು ಮಿ.ಮೀ.ನಷ್ಟು ಹುಲ್ಲಿನ ಹೊದಿಕೆ ಇದೆ. ಪಂದ್ಯ ರಾತ್ರಿಯೂ ನಡೆಯುವುದರಿಂದ ಮಂಜಿನ ಪ್ರಭಾವ ಸಹಜ. ಪಿಚ್ ಲಘು ತಿರುವು, ಬೌನ್ಸ್ ಕೂಡ ಪಡೆಯಲಿದೆ. ಶುಕ್ರವಾರ ಬಲವಾದ ಗಾಳಿ ಬೀಸುವ ಸಾಧ್ಯತೆ ಇದ್ದು, ಶನಿವಾರದಿಂದ ಟೆಸ್ಟ್‌ಗೆ ಅನುಕೂಲಕರವಾದ ಸಹಜ ವಾತಾವರಣವನ್ನು ನಿರೀಕ್ಷಿಸಬಹುದು’ ಎಂದು ಹಾಗ್ ಹೇಳಿದರು. ಭಾರತ-ಆಸ್ಟ್ರೇಲಿಯ ನಡುವಿನ ಅಡಿಲೇಡ್ ಟೆಸ್ಟ್ ಶುಕ್ರವಾರ ಆರಂಭವಾಗಲಿದೆ.
ಈ ಬಾರಿಯ ಬೋರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತೀಯರ ನೆಟ್ ಅಭ್ಯಾಸದ ವೇಳೆ ಇನ್ನು ಪ್ರೇಕ್ಷಕರಿಗೆ ಪ್ರವೇಶವಿರುವುದಿಲ್ಲ. ಅಡಿಲೇಡ್ ಟೆಸ್ಟ್‌ಗಾಗಿ ನಡೆಯುತ್ತಿರುವ ಭಾರತೀಯರ ಅಭ್ಯಾಸದ ವೇಳೆ ಮೂರು ಸಾವಿರದಷ್ಟು ಪ್ರೇಕ್ಷಕರು ಮೈದಾನಕ್ಕೆ ಆಗಮಿಸಿದ್ದರು. ಆಸೀಸ್ ಅಭ್ಯಾಸದ ವೇಳೆ ಬರೀ 70 ವೀಕ್ಷಕರಿದ್ದರು. ಕೆಲವರು ವೀಕ್ಷಕರು ಭಾರತೀಯ ಆಟಗಾರರ ಫಿಟ್‌ನೆಸ್ ಬಗ್ಗೆ ಅಣಕಿಸಿದರೆ, ಕೆಲವರು ಫೇಸ್‌ಬುಕ್ ಲೈವ್ ಮಾಡಿದರು. ಇನ್ನೊಬ್ಬರು ಗುಜರಾತಿಯಲ್ಲಿ “ಹೈ’ ಎನ್ನಲು ಆಟಗಾರರೊಬ್ಬರಿಗೆ ಪದೇಪದೆ ಒತ್ತಾಯಿಸಿದರು. ಆಟಗಾರರ ಅಭ್ಯಾಸಕ್ಕೆ ಇದು ತೊಂದರೆ ನೀಡಿದ್ದರಿಂದ ಬಿಸಿಸಿಐ ಈ ಕ್ರಮಕ್ಕೆ ಮುಂದಾಗಿದೆ. ಅಡಿಲೇಡ್ ಅಭ್ಯಾಸವನ್ನು ಅತೀ ಹತ್ತಿರದಿಂದ ವೀಕ್ಷಿಸಬಹುದಾದ ಕಾರಣ ಆಟಗಾರರಿಗೆ ಸಹಜವಾಗಿಯೇ ಕಿರಿಕಿರಿ ಆಗುತ್ತದೆ.