Advertisement

ಮಹಾ ಗಡಿ ವಿವಾದ; ಬಸ್ ಗಳಿಗೆ ಮಸಿ ಬಳಿದು ಉಭಯ ರಾಜ್ಯಗಳಲ್ಲಿ ಆಕ್ರೋಶ

06:09 PM Nov 25, 2022 | Team Udayavani |

ಬೆಳಗಾವಿ : ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ತೀವ್ರವಾಗಿರುವ ವೇಳೆಯಲ್ಲಿ ಉಭಯ ರಾಜ್ಯಗಳಲ್ಲಿ ಸಂಘಟನೆಗಳ ಕಾರ್ಯಕರ್ತರು ಬಸ್ ಗಳ ಮೇಲೆ ಪರಸ್ಪರ ವಿರೋಧಿ ಬರಹಗಳನ್ನು ಬರೆದು ಆಕ್ರೋಶ ಹೊರ ಹಾಕಿರುವ ಬಗ್ಗೆ ವರದಿಯಾಗಿದೆ.

Advertisement

ಪುಣೆ ಯಲ್ಲಿ ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದು ಬಳಿದ ಮರಾಠ ಮಹಾಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಕರ್ನಾಟಕದ ವಿರುದ್ಧ ಆಕ್ರೋಶದಲ್ಲಿ ಘೋಷಣೆಗಳನ್ನು ಕೂಗಿದರು. ಸಿಎಂ ಬೊಮ್ಮಾಯಿ ಅವರ ವಿರುದ್ಧ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಕುರಿತು “ರಾಜ್ಯದ ಒಂದು ಇಂಚು ಭೂಮಿಯನ್ನು ಸಹ ಬಿಡುವುದಿಲ್ಲ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ ನೀಡಿದ್ದಾರೆ.

ಕಲಬುರಗಿ: ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರ ಆಕ್ರೋಶ
ಮಹಾರಾಷ್ಟ್ರ ದಲ್ಲಿ ಕರ್ನಾಟಕ ಬಸ್ ಗಳಿಗೆ ಮಸಿ ಬಳಿದಿರುವುದನ್ನು ಖಂಡಿಸಿ ಶುಕ್ರವಾರ ಕರ್ನಾಟಕ ನವನಿರ್ಮಾಣ ಸೇನೆ ಕಲಬುರಗಿ ಜಿಲ್ಲಾಘಟಕದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ರವೀಂದ್ರ ಜಮಾದಾರ ನೇತೃತ್ವದಲ್ಲಿ ಅಫಜಲಪುರ ತಾಲೂಕಿನ ಬಳೂರಗಿಯಲ್ಲಿ ಮಹಾರಾಷ್ಟ್ರ ಬಸ್ ಗೆ ಮಸಿ ಬಳಿದು ಬಿತ್ತಿ ಪತ್ರ ಅಂಟಿಸಿ ಪ್ರತಿಭಟಿಸಿದರು.

ನಮ್ಮ ಗಡಿ ತಂಟೆಗೆ ಬಂದರೆ ನಾವು ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಗಡಿ ವಿವಾದ ಕುರಿತು ಪ್ರಕರಣ ನ್ಯಾಯಾ ಲಯದಲ್ಲಿ ಇರುವಾಗ ಮಹಾರಾಷ್ಟ್ರ ಕ್ಯಾತೆ ತೆಗೆಯುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next