ಧಾರವಾಡ: ಮಹಾರಾಷ್ಟ್ರದ ರಾಜರಣಿಗಳು ಹಾಗೂ ನಮ್ಮಲ್ಲಿ ಎಂಇಎಸ್ನವರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಗಡಿ ಕ್ಯಾತೆ ತೆಗೆಯುತ್ತಾರೆ. ಹೀಗಾಗಿ ಆಗಾಗ ಬೀದಿಗೆ ಬಂದು ಕನ್ನಡಿಗರನ್ನು ಕೆದಕುವ ಕೆಲಸ, ಕಾಲು ಕೆದರಿ ಜಗಳ ತೆಗೆಯುವುದು ಬೇಡ. ಜೊತೆಗೆ ಉದ್ರಿಕ್ತ ವಾತಾವರಣ ನಿರ್ಮಾಣ ಮಾಡುವುದನ್ನು ಮಹಾರಾಷ್ಟ್ರದವರು ನಿಲ್ಲಿಸಬೇಕು ಎಂದು ಎಚ್ಚರಿಕೆ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಧಾರವಾಡದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ತಂಟೆ ಬಹಳ ವರ್ಷಗಳಿಂದ ನಡೆದು ಬಂದಿದೆ. ಕೊನೆಗೆ ಬೇರೆ ಬೇರೆ ಕಮಿಷನ್ ಹಾಗೂ ವರದಿಗಳಾಗಿವೆ. ಅದೇ ರೀತಿ ಮಹಾಜನ್ ಎಂಬ ವರದಿ ಕೂಡಾ ಕೊಟ್ಟಾಗಿದೆ. ಎರಡು ರಾಜ್ಯಗಳು ಆ ಸಂದರ್ಭದಲ್ಲಿ ಮಹಾಜನ್ ವರದಿ ಒಪ್ಪಿಕೊಂಡಿವೆ. ವರದಿಯಂತೆ ಬೆಳಗಾವಿ ಕರ್ನಾಟಕದಲ್ಲೇ ಉಳಿಯಲಿದೆ. ಮಹಾಜನ್ ವರದಿ ಪೈನಲ್ ಆಗಿದೆ ಎಂದರು.
ಮಹಾರಾಷ್ಟ್ರ ರಾಜಕಾರಣಿಗಳು ತಾವು ಬೆಳೆಯಲು ಈ ರೀತಿ ಕುತಂತ್ರ ಮಾಡಿ ಗಡಿ ಬಗ್ಗೆ ಮಾತನಾಡಿ, ಮರಾಠಿ ಹಾಗೂ ಕನ್ನಡಿಗರ ಮಧ್ಯದಲ್ಲಿ ವಿಘಂಟನೆ ಮಾಡುತಿದ್ದಾರೆ. ಈಗ ಇದನ್ನು ಕರ್ನಾಟಕ ಹಾಗೂ ಮಹಾಷ್ಟ್ರದಲ್ಲಿನ ಸಾಮಾನ್ಯ ಮರಾಠಿಗರು ಹಾಗೂ ಕನ್ನಡಿಗರು ಅರ್ಥ ಮಾಡಿಕೊಂಡಿದ್ದಾರೆ. ಅವರಲ್ಲಿ ಸೌಹಾರ್ದ ವಾತಾವರಣ ಇದೆ. ಮಹಾರಾಷ್ಟ್ರದವರು ಪದೆಪದೇ ಕೆದಕುವ ಕೆಲಸ ಮಾಡಬಾರದು. ಈ ಬಾರಿ ಮಹಾರಾಷ್ಟ್ರದ ರಾಜಕಾರಣಿಗಳೇ ಕೆದಕುವ ಕೆಲಸ ಮಾಡಿದ್ದಾರೆ ಎಂದರು.
ಇದನ್ನೂ ಓದಿ:“ ವಿಮಾನದಲ್ಲಿ ಪೀಡ್ಸ್ ಬಂದು ಬಿದ್ದಿದೆ..” ಮೂರ್ಛೆ ರೋಗದ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ
Related Articles
ಮಹಾರಾಷ್ಟ್ರದವರು ಸುಪ್ರೀಂ ಕೋರ್ಟ್ ಗೆ ಹೋಗುವ ಅವಶ್ಯಕತೆ ಇರಲಿಲ್ಲ. ಅಲ್ಲಿ ವಿಚಾರಣೆ ಹಂತದಲ್ಲಿ ಇದೆ. ರಾಜ್ಯ ಸರಕಾರ ಕುಡಾ ವಕೀಲರನ್ನು ನೇಮಕ ಮಾಡಿದೆ. ಮಹಾರಾಷ್ಟ್ರ ಕೂಡಾ ಅಲ್ಲಿ ಸಮಸ್ಯೆ ಇದ್ದರೆ ಕೊರ್ಟ್ ಎದುರು ಹೇಳಬೇಕು. ಅದನ್ನು ಬಿಟ್ಟು ಹೀಗೆ ಬೀದಿಗೆ ಬಂದು ಕನ್ನಡಿಗರನ್ನ ಕೆದಕುವ ಕೆಲಸ ಮಾಡಬಾರದು ಎಂದರು.
ಪ್ರತಿ ಬಾರಿ ಎರಡು ಕಡೆ ಒಂದೇ ಸರಕಾರ ಇದೆ ಎಂದು ಹೇಳುವದು ಬೇಡ. ಹಿಂದೆ ಹಲವು ಬಾರಿ ಕಾಂಗ್ರೆಸ್ ಸರಕಾರ ಇತ್ತು. ಆವಾಗಲೂ ಕೂಡಾ ಗಡಿ ತಂಟೆಯಿತ್ತು. ಮಹಾರಾಷ್ಟ್ರ ರಾಜಕಾರಣಿಗಳಿಗೆ ಇದು ಅಭ್ಯಾಸವಾಗಿದೆ. ತಮ್ಮಲ್ಲಿ ಸಮಸ್ಯೆಯಾದರೆ ಗಮನ ಬೇರೆ ಕಡೆ ತೆಗೆದುಕೊಂಡು ಹೋಗಲು ಗಡಿ ವಿಷಯ ತೆಗೆಯುತ್ತಾರೆ. ಜತ್ತ ಜಿಲ್ಲೆಗೆ ನಾನು ಹಲವು ಬಾರಿ ಹೋಗಿದ್ದೆನೆ, ಅಲ್ಲಿಯ ಜನ ಕನ್ನಡವನ್ನೇ ಮಾತನಾಡುತ್ತಾರೆ. ಅವರೆಲ್ಲ ನಮ್ಮ ರಾಜ್ಯಕ್ಕೆ ಬರುವ ಮಾತನ್ನು ಹೇಳಿದ್ದಾರೆ ಎಂದರು.
ಸುನಿಲ್ ಪಕ್ಷಕ್ಕೆ ಸೆರ್ಪಡೆ ಮಾಹಿತಿ ಇಲ್ಲ: ರೌಡಿ ಶೀಟರ್ ಸೈಲೆಂಟ್ ಸುನಿಲ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಬಗ್ಗೆ ನನಗೆ ಮಾಹಿತಿ ಇಲ್ಲ. ಎಂಪಿ ಅವರ ಪಕ್ಕ ಕುಳಿತಿರಬಹುದು. ಅದು ನಮ್ಮ ಪಕ್ಷದ ಕಾರ್ಯಕ್ರಮ ಕೂಡ ಆಗಿರಲಿಲ್ಲ. ಈ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಏನು ಹಕ್ಕಿದೆ. ಡಿಕೆಶಿ ಕೂಡ ಬೇಲ್ ಮೇಲೆ ಹೊರಗಡೆ ಇಲ್ಲವೇ ಎಂದು ಪ್ರಶ್ನಿಸಿದರು