Advertisement
ಶಾಸಕರು, ಸಂಸದರು, ರಾಜ್ಯ ಮತ್ತು ಕೇಂದ್ರ ಸಚಿವರು – ಹೀಗೆ ಎಲ್ಲರಿಗೂ ಈ ಜವಾಬ್ದಾರಿಯನ್ನು ವಹಿಸಲಾಗಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಸದರು ಕನಿಷ್ಠ 100 ಬೂತ್ ಮತ್ತು ಶಾಸಕರು ಕನಿಷ್ಠ 50 ಬೂತ್‌ಗಳಲ್ಲಿ ಪಕ್ಷದ ಸಂಘಟನೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆಗಳನ್ನು ಜನರಿಗೆ ತಲುಪಿಸುವ, ಬಿಜೆಪಿಯ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಕಡ್ಡಾಯವಾಗಿ ಮಾಡ ಬೇಕೆಂದು ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ.
ಕಳೆದ ವಿಧಾನಸಭೆ, ಲೋಕಸಭೆ ಚುನಾ ವಣೆಗಳಲ್ಲಿ ಬಿಜೆಪಿಗೆ ಶೇ. 50ಕ್ಕಿಂತ ಕಡಿಮೆ ಮತ ಬಿದ್ದಿರುವ ಬೂತ್‌ಗಳನ್ನು ಗುರುತಿಸಲಾಗಿದ್ದು, ಅಂಥ ಬೂತ್‌ಗಳನ್ನು ಬಿಜೆಪಿ ಪರವಾಗಿ ಪರಿವರ್ತಿಸುವಂತೆ ಶಾಸಕರು, ಸಂಸದರಿಗೆ ಸೂಚಿಸಲಾಗಿದೆ. ಈ ಬೂತ್‌ಗಳನ್ನು 3 ರೀತಿ ಯಾಗಿ ವಿಂಗಡಿಸಲಾಗಿದೆ. ಬಿಜೆಪಿ ಪರ ಹೆಚ್ಚಿನ ಮತ ಬೀಳುವ ಬೂತ್‌ಗಳನ್ನು “ಎ ವರ್ಗ’, ಮುಸ್ಲಿಮರು ಕಡಿಮೆ ಇದ್ದರೂ ಬಿಜೆಪಿ ಪರ ಕಡಿಮೆ ಮತ ಬೀಳುವ ಬೂತ್‌ಗಳನ್ನು “ಬಿ ವರ್ಗ’ ಎಂದು ಮತ್ತು ಮುಸ್ಲಿಮರು ಹೆಚ್ಚಿರುವ ಬೂತ್‌ಗಳನ್ನು “ಸಿ ವರ್ಗ’ ಎಂದು ವಿಂಗಡಿಸಲಾಗಿದೆ. ಕಾರ್ಯಕರ್ತರಲ್ಲಿ ಅಸಮಾಧಾನ
ಪಕ್ಷ ಅಧಿಕಾರಕ್ಕೆ ತರಲು ತಳ ಹಂತದಲ್ಲಿ ನಿರಂತರ ಕೆಲಸ ಮಾಡುವ ಕಾರ್ಯಕರ್ತರಿಗೆ ಪಕ್ಷ ಮೇಲಿಂದ ಮೇಲೆ ಬಿಡುವಿಲ್ಲದ ಕೆಲಸ ಕೊಡುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೆ ಅಧಿಕಾರ ನೀಡದೆ ಕೇವಲ ದುಡಿಸಿಕೊಳ್ಳ ಲಾಗುತ್ತಿದೆ ಎಂಬ ಅಸಮಾಧಾನ ಹೆಚ್ಚಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
Related Articles
ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಕಡಿಮೆ ಮತ ಬಿದ್ದಿರುವ ಬೂತ್ ಗುರುತಿಸಿ, ಕಾರಣ ತಿಳಿದು, ಮುಂದಿನ ಚುನಾವಣೆಯಲ್ಲಿ ಹೆಚ್ಚು ಮತ ಬೀಳುವಂತೆ ಮಾಡಲು ಎಲ್ಲ ಶಾಸಕರು, ಸಂಸದರಿಗೂ ವರಿಷ್ಠರು ಜವಾಬ್ದಾರಿ ನೀಡಿದ್ದಾರೆ.
– ಎ.ಎಸ್. ಪಾಟೀಲ್ ನಡಹಳ್ಳಿ ,
ಬಿಜೆಪಿ ಶಾಸಕ
Advertisement
-ಶಂಕರ ಪಾಗೋಜಿ