Advertisement
ನಗರದ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಕೈಲಾಂಚ ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಎದುರಾಳಿ ಯಾರೇ ಆಗಿರಲಿ, ಅದರ ಬಗ್ಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವುದು ಬೇಡ. ಅವರನ್ನು ಸಮ ರ್ಥವಾಗಿ ಎದುರಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
Related Articles
Advertisement
ಈಗ ಈ ಹೊಣೆಯನ್ನು ತಾವು ಹೊತ್ತುಕೊಂಡಿರುವು ದಾಗಿ, ಹೀಗೆ ರಚನೆಯಾಗುವ ಬೂತ್ ಮಟ್ಟದ ಕಮಿಟಿ ಯಲ್ಲಿ ಎಲ್ಲಾ ಜಾತಿ, ಸಮುದಾಯದ ಯುವಕರು, ಮಹಿಳೆಯರು ಇರಬೇಕು. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಅಷ್ಟರೊಳಗೆ ನಾವು ಪಕ್ಷ ಸಂಘಟನೆ ಮಾಡಬೇಕಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಸ ಟ್ರೆಂಡ್!: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕುಮಾರಸ್ವಾಮಿ ಅವರು ಎಂದೂ ಹಸ್ತಕ್ಷೇಪ ಮಾಡಿದವರಲ್ಲ. ಆದರೆ, ಇತ್ತೀಚೆಗೆ ಒಂದು ಟ್ರೆಂಡ್ ಶುರುವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿಧಾನಸಭೆ ಚುನಾವಣೆ ರೀತಿ ನಡೆಸಲಾಗುತ್ತಿದೆ. ನಾವೂ ಅದನ್ನು ಶುರು ಮಾಡಬೇಕಿದೆ. ಬುಡ ಸದೃಢವಾಗಿ ಇದ್ದಾಗ ನಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.
ನಮ್ಮ ಕಾರ್ಯಕರ್ತರಲ್ಲಿದ್ದ ಗೊಂದಲದಿಂದ ಚುನಾವಣೆಯಲ್ಲಿ ನಮಗೆ ಅಲ್ಪ ಹಿನ್ನಡೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ನಗರಸಭೆ ಚುನಾವಣೆ ವೇಳೆ ಕುಮಾರಸ್ವಾಮಿ ಯಾವತ್ತೂ ಕಾರ್ಯಕರ್ತರು ಸಭೆ ನಡೆಸಿರಲಿಲ್ಲ. ಆದರೆ, ಮೊದಲ ಬಾರಿ ಸಭೆ ನಡೆಸಿ ಕಾರ್ಯಕರ್ತರ ಬೆನ್ನೆಲುಬಾಗಿ ನಿಂತರು. ಕೋವಿಡ್ ಕಾರಣದಿಂದ ಪ್ರಚಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಫಲಿತಾಂಶ ನಮಗೆ ವ್ಯತಿರಿಕ್ತವಾಗಿ ಬಂದಿದೆ ಎಂದು ನಗರಸಭೆ ಚುನಾವಣೆ ಫಲಿತಾಂಶವನ್ನು ವಿಶ್ಲೇಷಿಸಿದರು.
ಜಿಪಂ, ತಾಪಂ ಚುನಾವಣೆಬಗ್ಗೆಯೂ ನಿಗಾ ಇರಲಿ-
ನಗರಸಭೆ ಆಡಳಿತವನ್ನು ಸಂಪೂರ್ಣವಾಗಿ ನಮ್ಮ ವಶಕ್ಕೆ ತೆಗೆದುಕೊಳ್ಳುವ ದಿನ ಮುಂದೆ ಬರಲಿವೆ. ಅದಕ್ಕಾಗಿ ಇಂದಿನಿಂದಲೇ ಪ್ರಾಮಾಣಿಕವಾಗಿ ದುಡಿಯುವ ಶಪಥ ಮಾಡಬೇಕಿದೆ. ಜಿಪಂ, ತಾಪಂ ಚುನಾವಣೆಯನ್ನು ಸಮರ್ಥವಾಗಿ ಎದುರಿಸೋಣ. ಜಿಪಂನಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯ ಪ್ರವೃತ್ತರಾಗೋಣ. ಇನ್ನುಬೂತ್ ಕಮಿಟಿಗಳ ರಚನೆ ವಿಚಾರದಲ್ಲಿ ತಮ್ಮ ತಂದೆ ಕುಮಾರಸ್ವಾಮಿಯವರು ಅನುಮತಿಸಿ ದ್ದಾರೆ. ಕೈಲಾಂಚ ಹೋಬಳಿ ಮತದಾರರು ಎಂದೂ ಪಕ್ಷದ ಕೈಬಿಟ್ಟಿಲ್ಲ. ಹಾಗಾಗಿ ಅಲ್ಲಿಂದಲೇ ಸಂಘಟನೆಗೆ ಚಾಲನೆ ನೀಡುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್ ಕುಮಾರಸ್ವಾಮಿ ತಿಳಿಸಿದರು.
ಕಾರ್ಯಾಗಾರ: ಬೂತ್ ಕಮಿಟಿಗಳ ರಚನೆ ನಂತರ ರಾಜ್ಯಮಟ್ಟದ ಕಾರ್ಯಾಗಾರ ನಡೆಸಿದಂತೆ ಕ್ಷೇತ್ರದ ಮುಖಂಡರಿಗೂ ಕಾರ್ಯಾಗಾರ ಹಮ್ಮಿಕೊಳ್ಳುವುದಾಗಿ. 4 ಹೋಬಳಿಗಳಿಗೆ ನಾಲ್ಕು ದಿನ ಕಾರ್ಯಾಗಾರ ನಡೆಸುವುದಾಗಿ, ಕಾರ್ಯಾಗಾರದಲ್ಲಿ ಸ್ವತಃ ಕುಮಾರಸ್ವಾಮಿಯವರೇ ಭಾಗವಹಿಸಲಿದ್ದಾರೆ ಎಂದರು.
ಸಂಪರ್ಕದಲ್ಲಿರಿ: ಪ್ರತಿ ಬೂತ್‌ನಿಂದ 3 ಮಂದಿ ನನ್ನ ನೇರ ಸಂಪರ್ಕದಲ್ಲಿರಬೇಕು. ಅದಕ್ಕೆಂದೇ ಒಂದು ಸಿಮ್, ಫೋನ್ ಮೀಸಲಿರುತ್ತದೆ, ಎಲ್ಲರ ಹೆಸರು, ನಂಬರ್ ಅನ್ನು ಅದರಲ್ಲಿ ಸೇವ್ ಮಾಡಿರಲಾಗುತ್ತದೆ. ಏನೇ ಸಮಸ್ಯೆಗಳಿದ್ದರೂ ತನಗೆ ನೇರವಾಗಿ ಕರೆ ಮಾಡಬಹುದು. ಚರ್ಚೆ ನಡೆಯಬೇಕು, ಆಗ ಮಾತ್ರ ಸಮಸ್ಯೆ ಹಾಗೂ ಅವುಗಳ ಪರಿಹಾರ ಸಾಧ್ಯ ಎಂದರು.
ಹಾರೋಹಳ್ಳಿ, ಮರಳವಾಡಿ ಹೋಬಳಿಗಳಲ್ಲಿ ಸಾಗುವಳಿ ಚೀಟಿ ಸಮಸ್ಯೆ ಹೊರತುಪಡಿಸಿದರೆ ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕೊರತೆ ಇಲ್ಲ, ಅದನ್ನು ಶೀಘ್ರ ಪರಿಹರಿಸಲಾಗುವುದು ಎಂದರು. ಸಭೆಯಲ್ಲಿ ತಾಲೂಕು ಅಧ್ಯಕ್ಷ ರಾಜಶೇಖರ್, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ರಾಜು, ರಾಜ್ಯ ವಕ್ತಾರ ಬಿ.ಉಮೇಶ್, ಮುಖಂಡರಾದ ದೊರೆಸ್ವಾಮಿ, ಅಶ್ವತ್ಥ, ಪ್ರಕಾಶ್, ಮಾವಿನ ಸಸಿ ವೆಂಕಟೇಶ್, ರವಿ, ಗೂಳಿ ಕುಮಾರ್, ಕೃಷ್ಣ, ರಾಮಕೃಷ್ಣಯ್ಯ, ಮೋಹನ್, ಗೇಬ್ರಿ ಯಲ್, ಎಂ.ಜಿ.ಫೈರೋಜ್, ಸೊಹೇಲ್ ಪಾಷಾ, ಕಾಡನಕುಪ್ಪೆ ನವೀನ್, ಪಾಂಡುರಂಗ ಮತ್ತಿತರರು ಉಪಸ್ಥಿತರಿದ್ದರು.