Advertisement
ಹೀಗಾಗಿ, ಶೀಘ್ರದಲ್ಲಿ ಸರ್ಕಾರ ಚಿತ್ರಮಂದಿರಗಳಿಗೆ ಹೌಸ್‌ಫುಲ್ ಪ್ರದರ್ಶನಕ್ಕೆ ಅವಕಾಶ ಕೊಡುವ ನಿರೀಕ್ಷೆ ಇದೆ. ಇದೇ ಕಾರಣದಿಂದ ಸಿನಿಮಾಗಳು ತೆರೆಮರೆಯಲ್ಲಿ ಬಿಡುಗಡೆಯ ತಯಾರಿ ನಡೆಸುತ್ತಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜನವರಿಯಿಂದಲೇ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ತೆರೆದುಕೊಳ್ಳಬೇಕಿತ್ತು. ಅಷ್ಟೊಂದು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದ್ದವು. ಆದರೆ, ಮೂರನೇ ಅಲೆಯ ಭೀತಿ ಹಾಗೂ ಚಿತ್ರಮಂದಿರಗಳಲ್ಲಿ ಶೇ 50 ಸೀಟು ಭರ್ತಿ ಇದ್ದ ಕಾರಣ ಸಿನಿಮಾಗಳೆಲ್ಲವೂ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದವು. ಈಗ ಆ ಸಿನಿಮಾಗಳು ಫೆಬ್ರವರಿಯಲ್ಲಿ ಬಿಡುಗಡೆಗೆ ತಯಾರಿ ನಡೆಸುತ್ತಿವೆ. “ಏಕ್ ಲವ್ ಯಾ’, “ಬೈ ಟು ಲವ್’, “ತೋತಾಪುರಿ’, “ಲವ್ ಮಾಕ್ಟೇಲ್-2′, “ಫೋರ್ ವಾಲ್ಸ್’, “ಗಜಾನನ ಅಂಡ್ ಗ್ಯಾಂಗ್’, “ಓಲ್ಡ್ ಮಾಂಕ್’, “ಮನಸಾಗಿದೆ’.. ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
Related Articles
Advertisement
ಜನವರಿಯಲ್ಲಿ 3 ಸಿನಿಮಾ ರಿಲೀಸ್: ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗ ರಂಗೇರುವ ನಿರೀಕ್ಷೆ ಇತ್ತು. ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿ, ಚಿತ್ರರಂಗ ಮತ್ತೆ ತನ್ನ ಹಳೆಯ ವೈಭವಕ್ಕೆ ಮರಳಬಹುದು ಎಂಬ ನಂಬಿಕೆಯಲ್ಲಿ ಸಿನಿಮಂದಿ ಇದ್ದರು. ಆದರೆ, 2022ರ ಮೊದಲ ತಿಂಗಳಾದ ಜನವರಿ ಮಾತ್ರ ಮಂಕಾಗಿದ್ದು ಸುಳ್ಳಲ್ಲ. ಜನವರಿಯಲ್ಲಿ ಬಿಡುಗಡೆಯಾಗಿದ್ದು, ಕೇವಲ ಮೂರೇ ಮೂರು ಸಿನಿಮಾಗಳು. “ನಮ್ಮ ಭಾರತ’, “ಡಿಎನ್‌ಎ’ ಹಾಗೂ “ಒಂಬತ್ತನೇ ದಿಕ್ಕು’ ಚಿತ್ರಗಳು ಜನವರಿಯಲ್ಲಿ ಬಿಡುಗಡೆಯಾದವು. ಒಂದು ವೇಳೆ ಹೌಸ್‌ಫುಲ್ ಪ್ರದರ್ಶನಕ್ಕೆ ಅವಕಾಶವಿದ್ದಿದ್ದರೆ ಕಡಿಮೆ ಎಂದರೂ 10ಕ್ಕೂ ಹೆಚ್ಚು ಚಿತ್ರಗಳು ಜನವರಿಯಲ್ಲಿ ಬಿಡುಗಡೆಯಾಗಬೇಕಿತ್ತು. ಈಗ ಆ ಎಲ್ಲಾ ಚಿತ್ರಗಳು ಮುಂದೆ ಹೋಗಿದ್ದು, ಫೆಬ್ರವರಿಯಿಂದ ಬಿಡುಗಡೆಯಾಗಲಿವೆ.
ಫೆಬ್ರವರಿ ಫುಲ್ ರಶ್: ಈ ವಾರ “ಜಾಡಘಟ್ಟ’ ಹಾಗೂ “ಆಪರೇಶನ್ 72′ ಚಿತ್ರಗಳು ಬಿಡುಗಡೆಯಾದರೆ, ಫೆಬ್ರವರಿ 11ರಿಂದ ಸಿನಿ ಟ್ರಾಫಿಕ್ ಜೋರಾಗಲಿದೆ. ಕನ್ನಡದ ಅನೇಕ ಸಿನಿಮಾಗಳು ಅಂದಿನಿಂದ ಬಿಡುಗಡೆಯಾಗಲಿದೆ ಈಗಾಗಲೇ “ಲವ್ ಮಾಕ್ಟೇಲ್-2′, “ಫೋರ್‌ವಾಲ್ಸ್’, “ರೌಡಿ ಬೇಬಿ’, “ರೌದ್ರ’, “ಪ್ರೀತಿಗಿಬ್ಬರು’, “ಒಪ್ಪಂದ’ ಚಿತ್ರಗಳು ಫೆ.11ರಂದು ತಮ್ಮ ಬಿಡುಗಡೆ ಯನ್ನು ಘೋಷಿಸಿಕೊಂಡಿವೆ. ಫೆ.18ಕ್ಕೆ “ವರದ’, “ಬಹುಕೃತ ವೇಷಂ’, “ಗಿಲ್ಕಿ’ ಸಿನಿಮಾಗಳು ಘೋಷಿಸಿಕೊಂಡರೆ, ಫೆ.24ಕ್ಕೆ “ಏಕ್ ಲವ್ ಯಾ’ ಹಾಗೂ “ಓಲ್ಡ್ ಮಾಂಕ್’, “ಮನಸಾಗಿದೆ’ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದಕ್ಕೆ ಇನ್ನೊಂದಿಷ್ಟು ಸಿನಿಮಾಗಳು ಸೇರಿಕೊಳ್ಳುವ ನಿರೀಕ್ಷೆ ಇದೆ.
ರವಿಪ್ರಕಾಶ್ ರೈ