ಹೊಸದಿಲ್ಲಿ: ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಕ್ರಿಕೆಟಿಗರೊಬ್ಬರಿಗೆ ಫಿಕ್ಸಿಂಗ್ ಆಮಿಷ ಬಂದಿದೆ. ಆಟಗಾರ ನೀಡಿದ ಮಾಹಿತಿ ಮೇರೆಗೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹದಳ ತನಿಖೆ ನಡೆಸುತ್ತಿದೆ. ಹೀಗೆ ಫಿಕ್ಸಿಂಗ್ ಗೊಳಗಾದ ಆಟಗಾರ ಯಾರು, ಯಾವ ದೇಶದವರು ಎನ್ನುವುದನ್ನು ಬಿಸಿಸಿಐ ಖಚಿತಪಡಿಸಿಲ್ಲ. ಇಂತಹದೊಂದು ಪ್ರಕರಣ ನಡೆದಿರುವುದು ಹೌದು ಎಂದು ಬಿಸಿಸಿಐನ ಎಸಿಯು (ಭ್ರಷ್ಟಾಚಾರ ನಿಗ್ರಹದಳ) ಅಜಿತ್ ಸಿಂಗ್ ಬಹಿರಂಗಪಡಿಸಿದ್ದಾರೆ.
ನಾವು ಆರೋಪಿಯನ್ನು ಪತ್ತೆಹಚ್ಚಲು ಯತ್ನಿಸುತ್ತಿದ್ದೇವೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಯಾವ ಕ್ರಿಕೆಟಿಗ ಆಮಿಷಕ್ಕೊಳಗಾದರೋ, ಅವರು ತಕ್ಷಣ ಅದನ್ನು ಗ್ರಹಿಸಿ ಎಸಿಯು ಗಮನಕ್ಕೆ ತಂದಿದ್ದಾರೆ. ಈ ರೀತಿ ಅರಿವು ಮೂಡಿಸುವುದಕ್ಕಾಗಿ 19 ವಯೋಮಿತಿಯಿಂದ ಹಿಡಿದು ಹಿರಿಯ ಕ್ರಿಕೆಟಿಗರವರೆಗೆ ಹಲವಾರು ತರಗತಿಗಳನ್ನು ನಡೆಸಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಇದನ್ನೂ ಓದಿ:ಡೆಲ್ಲಿ- ಕೊಲ್ಕತ್ತಾ ಕಾಳಗ: 18 ರನ್ ಗಳಿಂದ ಸೋತ KKR
ವಿಚಿತ್ರವೆಂದರೆ ಈ ಬಾರಿ ಕೋವಿಡ್-19 ಇದೆ. ಆದ್ದರಿಂದ ಆಟಗಾರರನ್ನು ಜೈವಿಕ ಸುರಕ್ಷಾ ವಲಯಕ್ಕೊಳಪಡಿಸಲಾಗಿದೆ. ಇಂತಹ ನಿರ್ಬಂಧದ ನಡುವೆಯೂ ಆನ್‌ಲೈನ್ ಮೂಲಕ ಆಟಗಾರರನ್ನು ಆಮಿಷಕ್ಕೊಳಪಡಿಸುವ ಯತ್ನ ನಡೆದಿದೆ.
ಇದನ್ನೂ ಓದಿ:ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ತಂಡದ ಮೇಲೆ ಪೋಲೀಸರ ದಾಳಿ ಐವರ ಬಂಧನ