ಭಾರತ ತನ್ನದೇ ಆದ ಐತಿಹಾಸಿಕ ಪರಂಪರೆ ಹೊಂದಿರುವ ರಾಷ್ಟ್ರ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಹೀಗೆ ನಾನಾ ಸ್ತರಗಳಲ್ಲಿ ಐತಿಹ್ಯ ಕುರುಹುಗಳನ್ನು ತನ್ನ ಒಡಲಲ್ಲಿ ಇಟ್ಟು ಕೊಂಡಿದೆ. ಇತಿ ಹಾಸ ಎಂಬುದು ಕಟ್ಟು ಕಥೆ ಯಲ್ಲ, ಸತ್ಯದ ಘಟನೆಯೇ ಆಗಿದೆ ಎಂಬುದನ್ನು ಸಾಕ್ಷ್ಯಾ ಧಾರಗಳ ಮೂಲಕ ತಿಳಿಸುತ್ತದೆ. ಹೀಗಾಗಿ ಇತಿಹಾಸದ ಜ್ಞಾನವಿಲ್ಲ ದವರೂ ಇತಿಹಾಸ ನಿರ್ಮಿಸಲಾರರು ಎಂಬ ಮಾತು ಹಾಸುಹೊಕ್ಕಾಗಿದೆ.
ಭಾರತ ಸಂಪದ್ಭರಿತ ವಾದ ರಾಷ್ಟ್ರ. ದೇಶದ ಸಂಪತ್ತನ್ನು ಎಷ್ಟೋ ವಿದೇಶಿಯರು ಕೊಳ್ಳೆ ಹೊಡೆದು ತಮ್ಮ ದೇಶಕ್ಕೆ ತೆಗೆದುಕೊಂಡಿ ಹೋಗಿರುವುದು ನಮಗೆಲ್ಲ ತಿಳಿದ ವಿಷಯ. ವಾಸ್ಕೋಡಿಗಾಮಾ ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಬಳಿಕ ವಿದೇಶಿಯರು ಭಾರತದ ಮೇಲೆ ಆಕ್ರಮಣ ಮಾಡಿದರು. ಭಾರತವು ಸುಮಾರು 400 ವರ್ಷಗಳ ಕಾಲ ಪೋರ್ಚ್‌ಗೀಸರು, ಡಚ್ಚರು, ಫ್ರೆಂಚರು, ಬ್ರಿಟಿಷರು ಆಳ್ವಿಕೆ ನಡೆಸಿದ್ದಾರೆ.
ಪೋರ್ಚಗೀಸರು ಭಾರತದ ಸಾಂಬಾರು ಪದಾರ್ಥಗಳ ವ್ಯಾಪಾರಕ್ಕೆಂದು ಬಂದ ಬಗೆ ಮುಂದೆ ಆಗುವ ಐತಿಹಾಸಿಕ ಘಟನೆಗಳ ಬಗ್ಗೆ ತಿಳಿಸುವ ಮಹತ್ವದ ಕಾದಂಬರಿಯೇ ತೇಜೋ-ತುಂಗಭದ್ರಾ. 14ನೇ ಶತಮಾನದ ಲಿಸºನ್-ಗೋವಾ-ವಿಜಯನಗರ ಈ ಮೂರು ನಗರಗಳ ಮೇಲೆ ಬೆಳಕು ಚೆಲ್ಲಲಾಗಿದೆ.
ತೇಜೋ-ತುಂಗಭದ್ರಾ ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲಿ ಮೇರು ಕೃತಿಯಾಗಲಿದೆ ಎಂದು ಎಂದು ಹಿರಿಯ ಸಾಹಿತಿ, ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಲೇಖಕ ವಸುಧೇಂದ್ರ ಅವರು ಎರಡು ದೇಶಗಳ ನಡುವಿನ ಇತಿಹಾಸವನ್ನು ಇಲ್ಲಿ ದಾಖಲಿಸಿರುವುದು ಮಹತ್ವದು. ಪೋರ್ಚ್‌ಗಲ್ ತೇಜೋ ನದಿ, ಭಾರತದ ತುಂಗಭದ್ರಾ ನದಿಯ ತಟದ ಸಾಮಾಜಿಕ ಜೀವನದ ಬಗ್ಗೆ ಈ ಕೃತಿಯೂ ಬೆಳಕು ಚೆಲ್ಲುತ್ತದೆ.
ಲಿಸºನ್ ನಗರದ ತೇಜೋ ನದಿಯಿಂದ ಕಥೆ ಆರಂಭವಾಗುತ್ತದೆ. ಲಿಸºನ್‌ನ ನದಿಯಲ್ಲಿ ಭಾರತದ ಸಾಂಬಾರು ಪದಾರ್ಥಗಳ ಘಮ. ಇದಕ್ಕೆ ಲಿಸºನ್‌ನ ಬೆಲ್ಲಾ ಎಂಬ ಯುವತಿ ವಿರೋಧಿ ಸಿದರೆ, ಗೇಬ್ರಿಯಲ್‌ನ ಸಮರ್ಥನೆ. ಪೋರ್ಚುಗೀಸರು ಭಾರತ ದೇಶಕ್ಕೆ ಸಮುದ್ರಯಾನ ಮಾಡಿ ಜಲಮಾರ್ಗ ಕಂಡು ಹಿಡಿದ ಬಳಿಕ ಹೇರಳವಾಗಿ ಸಾಂಬಾರು ಪದಾರ್ಥಗಳು ಆಮುದು ಆಗಮಲಾರಂಭಿಸಿತು. ಹೀಗಾಗಿ ಸಾಂಬಾರು ಪದಾರ್ಥಗಳ ಬಳಕೆ ಏಥೇಚ್ಚವಾಯಿತು. ತೇಜೋ ನದಿಯಿಂದ ಆರಂಭವಾಗಿ ತುಂಗಾಭದ್ರಾ ನದಿ ದಡೆಗೆ ಕಥೆಯೂ ತಲುಪುತ್ತದೆ.
ಮುಂದೆ ತುಂಗಾಭದ್ರ ನದಿ ದಡದಲ್ಲಿ ಅತಿ ಶ್ರೀಮಂತವಾಗಿ ರಾಜ್ಯಭಾರ ಮಾಡುತ್ತಿದ್ದುದ್ದು ವಿಜಯನಗರ ಸಾಮ್ರಾಜ್ಯದ ತೆಂಬಕಪುರ ಎಂಬ ಹಳ್ಳಿಯಲ್ಲಿ ಈ ಕಥೆಯೂ ಮುಂದುವರಿಯುತ್ತದೆ. ಇಲ್ಲಿನ ಜನರ ಸಾಮಾನ್ಯ ಜೀವನದ ಮೇಲೆ ಬಹುಅಂಶ ಬೆಳಕು ಚೆಲ್ಲುತ್ತದೆ. ವಿಜಯನಗರ ಸಾಮ್ರಾಜ್ಯದ ಒಡಲಾಳದಲ್ಲಿ ಅಡಗಿರುವ ರಹಸ್ಯಗಳು, ನಿಗೂಢಗಳು ಬಗ್ಗೆ ಕಾದಂಬರಿ ಪಾತ್ರಗಳ ಮೂಲಕ ಮಾತನಾಡಿಸುತ್ತದೆ.
ತೇಜೋ-ತುಂಗಭದ್ರಾ ಈ ಎರಡು ನದಿಗಳ ದಡದಲ್ಲಿ ನಡುವೆ ನಡೆಯುತ್ತಿದ್ದ ವ್ಯಾಪಾರ ವಹಿವಾಟು ಇಂತಹ ಸಂಗತಿಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಬೆಲ್ಲಾ, ಗೇಬ್ರಿಯಲ್, ಹಂಪಮ್ಮ, ಮಾಪಳ, ಚಂಪಮ್ಮ, ಅಡವಿಸಾಮಿ ಹಲವಾರು ಪಾತ್ರಗಳು ಬಹುವಿಶಿಷ್ಠ ಅಂಶಗಳ ಬಗ್ಗೆ ಸಂವಾದಿಸುತ್ತವೆ.
ವಿನೋದ್ ಕುಮಾರ ಕುಲಕರ್ಣಿ , ಕುವೆಂಪು ವಿವಿ, ಶಿವಮೊಗ್ಗ