Advertisement

ಮನಸ್ಸು ಅರಳಿಸಲು ಬಂದಿದೆ ಜ್ಞಾನ ಭಂಡಾರ; ಇಲ್ಲಿವೆ ಲಕ್ಷಾಂತರ ಪುಸ್ತಕಗಳು

05:20 PM Jul 29, 2022 | Team Udayavani |

ಹುಬ್ಬಳ್ಳಿ: ಜ್ಞಾನ ಹೆಚ್ಚಿಸುವ, ಮಾಹಿತಿ ಒದಗಿಸುವ, ಮನಸ್ಸು ಅರಳಿಸುವ ಪುಸ್ತಕಗಳ ಭಂಡಾರವೇ ನಿಮಗಾಗಿ ಎದುರು ನೋಡುತ್ತಿದೆ. ದೇಶ-ವಿದೇಶಗಳಲ್ಲಿನ ಅತ್ಯಮೂಲ್ಯ ಲಕ್ಷಾಂತರ ಪುಸ್ತಕಗಳು ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿವೆ.

Advertisement

ಗೋಕುಲ ರಸ್ತೆ ಹೆಬಸೂರ ಭವನದಲ್ಲಿ ವಿವಿಧ ದೇಶಗಳಿಂದ ತರಿಸಿರುವ ವಿವಿಧ ಲೇಖಕರ ಹಾಗೂ ವಿವಿಧ ಭಾಷೆಗಳ ಪುಸ್ತಕಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇರಿಸಲಾಗಿದೆ. ಪ್ರದರ್ಶನ-ಮಾರಾಟ ನಾಲ್ಕು ದಿನ ನಡೆಯಲಿದೆ.

ಮೂಲತಃ ವಿಜಯಪುರದವರಾದ ಮಹಾಂತೇಶ ಹಿರೇಮಠ ಅವರು ಎಂಎಸ್‌ಸಿ ಮುಗಿಸಿಕೊಂಡು ಯುಎಸ್‌ದಲ್ಲಿ ಉದ್ಯೋಗ ಮಾಡುತ್ತಿದ್ದರು. ಆದರೆ ಇದೀಗ ಅದೆಲ್ಲವನ್ನು ಬಿಟ್ಟು ತಾಯ್ನಾಡಿಗೆ ಆಗಮಿಸಿ ಎಲ್ಲರಲ್ಲೂ ಓದುವ ಹವ್ಯಾಸ ಬೆಳೆಸುವಲ್ಲಿ ತೊಡಗಿದ್ದಾರೆ.

ಕೇವಲ ಇಂತಹ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ಮೂಲಕ ಪುಸ್ತಕಗಳನ್ನು ನೀಡುವ ಬದಲಾಗಿ 99ಚಿಟಟks. cಟ ಮೂಲಕ ಇಡೀ ದೇಶದಲ್ಲಿ ಪುಸ್ತಕಗಳು ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಮಹಾಂತೇಶ ಅವರು ಆನ್‌ಲೈನ್‌ನಲ್ಲಿ ಸುಮಾರು 1.3 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿದ್ದು, ಅವರಿಂದ ವಹಿವಾಟು ನಡೆಸುತ್ತಿದ್ದಾರೆ.

ಮಹಾಂತೇಶ ಅವರು ಸುಮಾರು 5ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದ್ದು, ಅದರಲ್ಲಿ 2 ಲಕ್ಷಕ್ಕೂ ಅಧಿಕ ಟೈಟಲ್ಸ್‌ಗಳನ್ನು ಹೊಂದಿದ್ದಾರೆ. ಪುಸ್ತಕ ಪ್ರದರ್ಶನದಲ್ಲಿ ಕೇವಲ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಅಷ್ಟೇ ಅಲ್ಲ ಅವರು ಇಲ್ಲಿಯೇ ಕುಳಿತುಕೊಂಡು ಓದಿಕೊಂಡು ಹೋಗಬಹುದು. ಅವರಿಗೆ ಇಷ್ಟವಾದಲ್ಲಿ ಪುಸ್ತಕ ಖರೀದಿಸಬಹುದು.

Advertisement

9ಕ್ಕೂ ಹೆಚ್ಚು ಭಾಷೆಗಳು: ಮಹಾಂತೇಶ ಅವರು 9 ಕ್ಕೂ ಹೆಚ್ಚು ಭಾಷೆಯ ಪುಸ್ತಕಗಳನ್ನು ಹೊಂದಿದ್ದು, ಇತ್ತೀಚೆಗೆ ಮತ್ತೂಂದು ಭಾಷೆ ಸೇರ್ಪಡೆಗೊಂಡಿದೆ. ಕನ್ನಡ, ಇಂಗ್ಲಿಷ್‌, ತಮಿಳು, ಮಲಯಾಳಂ, ತೆಲುಗು, ಮರಾಠಿ, ಬೆಂಗಾಲಿ, ಗುಜರಾತಿ, ಹಿಂದಿ ಹಾಗೂ ಪಂಜಾಬಿ ಭಾಷೆಯ ಪುಸ್ತಕಗಳನ್ನು ಹೊಂದಿದ್ದಾರೆ. ಪುಸ್ತಕ ಪ್ರದರ್ಶನ ಹಾಗೂ ಮಾರಾಟಕ್ಕೆ ತೆರಳಿದಾಗ ಅಲ್ಲಿನ ಸ್ಥಳೀಯ ಭಾಷೆಗೆ ಸಂಬಂಧಿಸಿದಂತೆ ಮಾರಾಟ ಹಾಗೂ ಪ್ರದರ್ಶನಕ್ಕೆ ಆದ್ಯತೆ ನೀಡುತ್ತಿದ್ದಾರೆ. ಈಗಾಗಲೇ ಅವರು ಬೆಂಗಳೂರು, ಮೈಸೂರು, ಮಂಗಳೂರು, ಪುಣೆ, ಜೈಪುರ, ಅಹಮದಾಬಾದ್‌ ಸೇರಿದಂತೆ ವಿವಿಧೆಡೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಾಡಿದ್ದಾರೆ.

ಪುಸ್ತಕ ಮಾರಾಟದಲ್ಲಿ ಕೆಟಗರಿ

ಪುಸ್ತಕ ಪ್ರದರ್ಶನ ಹಾಗೂ ಮಾರಾಟದಲ್ಲಿ ಆಗಮಿಸುವ ಪುಸ್ತಕ ಪ್ರೇಮಿಗಳಿಗೆ ಮಹಾಂತೇಶ ಹಿರೇಮಠ ಅವರು ವಿಶೇಷ ಪುಸ್ತಕ ಮಾರಾಟ ವ್ಯವಸ್ಥೆ ಕಲ್ಪಿಸಿದ್ದು, ಅದರಲ್ಲಿ ಮೂರು ವಿಭಾಗಗಳಾಗಿ ವಿಂಗಡಣೆ ಮಾಡಿದ್ದಾರೆ. ಚಿಕ್ಕ ಬಾಕ್ಸ್‌ಗೆ 1199 ರೂ. ಗಳಿದ್ದು, ಅದರಲ್ಲಿ ಎಷ್ಟು ಪುಸ್ತಕಗಳು ಹಿಡಿಯುತ್ತವೆ, ಅಷ್ಟು ಪುಸ್ತಕ ಖರೀದಿಸಬಹುದು. ಮಧ್ಯಮ ಬಾಕ್ಸ್‌ಗೆ 1699 ರೂ.ಗಳಿದ್ದು, ಈ ಬಾಕ್ಸ್‌ನಲ್ಲಿ ಕಡಿಮೆ ಎಂದರೂ 17ರಿಂದ 19 ಪುಸ್ತಕಗಳು ತುಂಬಲಿವೆ. ಇನ್ನು ಮೂರನೇ ಬಾಕ್ಸ್‌ ದೊಡ್ಡ ಬಾಕ್ಸ್‌. ಇದಕ್ಕೆ 2199 ರೂ. ನಿಗದಿ ಪಡಿಸಿದ್ದು, ಇದರಲ್ಲಿ 23-25 ಪುಸ್ತಕಗಳನ್ನು ಇಡಬಹುದಾಗಿದೆ. ಪ್ರದರ್ಶನದಲ್ಲಿರುವ ಯಾವುದೇ ಪುಸ್ತಕಗಳನ್ನು ಅವರಿಗೆ ಇಷ್ಟವಾದ ಬಾಕ್ಸ್‌ನಲ್ಲಿ ಹಾಕಿಕೊಂಡು ಗ್ರಾಹಕರು ಪಡೆಯಬಹುದಾಗಿದೆ.

ಹಣದ ಬದಲಾಗಿ ಪುಸ್ತಕ ಖರೀದಿಸಿ

ನಿಮ್ಮಲ್ಲಿರುವ ಹಳೆಯ ಅಥವಾ ಯಾವುದೇ ಹೊಸ ಪುಸ್ತಕಗಳನ್ನು ಗ್ರಾಹಕರು ಪ್ರದರ್ಶನದಲ್ಲಿ ನೀಡಿ ತಮಗೆ ಬೇಕಾದ ಬೇರೆ ಪುಸ್ತಕಗಳನ್ನು ಖರೀದಿಸಬಹುದಾಗಿದೆ. ಅದಕ್ಕಾಗಿ ಮಹಾಂತೇಶ ಹಿರೇಮಠ ಅವರು ಗ್ರಾಹಕರ ಬಳಿ ಇರುವ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಪುಸ್ತಕಗಳಿದ್ದರೂ ಅವುಗಳನ್ನು 49 ರೂ.ಗಳಿಗೆ ಕೆಜಿ ಲೆಕ್ಕದಲ್ಲಿ ಖರೀದಿಸುತ್ತಾರೆ. ಪುಸ್ತಕ ಮಾರಾಟ ಮಾಡಿದ ಗ್ರಾಹಕರಿಗೆ ಕೂಪನ್‌ ನೀಡಲಾಗುತ್ತದೆ. ಅದೇ ಕೂಪನ್‌ ಮೂಲಕ ಗ್ರಾಹಕರು ಮರಳಿ ತಮಗೆ ಬೇಕಾದ ಬೇರೆ ಪುಸ್ತಕಗಳನ್ನು ಖರೀದಿಸಬಹುದಾಗಿದೆ.

ಪ್ರದರ್ಶನದಲ್ಲಿ ಮಕ್ಕಳಿಗೆ ಬೇಕಾಗುವ ಪುಸ್ತಕಗಳು, ವಯಸ್ಕರು, ಮಹಿಳೆಯರು, ಇತಿಹಾಸ, ಥ್ರಿಲ್ಲರ್‌ ಹಾಗೂ ಕ್ರೈಂಗೆ ಸಂಬಂಧಿಸಿದ, ಸಾಹಿತ್ಯ, ಬಯೋಗ್ರಫಿ ಸೇರಿದಂತೆ ನೂರಾರು ಬಗೆಯ ಪುಸ್ತಕಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಗ್ರಂಥಾಲಯ ಮಾಡುವವರಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.

ಜನರಲ್ಲಿ ಓದುವ ಹವ್ಯಾಸ ಕಳೆದುಕೊಂಡಿದ್ದು ಅದು ಮರು ಓದುವಂತಾಗಬೇಕು ಮಕ್ಕಳೊಂದಿಗೆ ಪಾಲಕರು ಕುಳಿತು ಓದಿದಾಗ ಮಕ್ಕಳು ಹೆಚ್ಚಾಗಿ ಓದು ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಇದನ್ನು ಪಾಲಕರು ಮೊದಲು ಅರಿತುಕೊಂಡು ಮಕ್ಕಳು ಓದುವ ಸಮಯದಲ್ಲಿ ತಾವು ಕೂಡ ಓದಿದ್ದಲ್ಲಿ ಪುಸ್ತಕಗಳ ಪ್ರದರ್ಶನ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. –ಮಹಾಂತೇಶ ಹಿರೇಮಠ, ವ್ಯವಸ್ಥಾಪಕ

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next