Advertisement
ತಮ್ಮ ಕೃತಿ, ಕಾದಂಬರಿಗಳ ಮೂಲಕ ಪಾತ್ರಗಳಲ್ಲಿಯೇ ಬದುಕನ್ನು ಅನ್ವೇಷಿಸುವ ಇವರ ಬರೆಹದ ಶೈಲಿ ಅದ್ಭುತ. ಇದು ಓದುಗರನ್ನು ಹತ್ತಿರವಾಗಿಸುತ್ತದೆ. ಜೀವನ ಪ್ರೀತಿಯನ್ನು ಹೆಚ್ಚಿಸುತ್ತದೆ. ಈ ಸಾಲಿಗೆ “ಸಂಧ್ಯಾರಾಗ’ ಎಂಬ ಕಾದಂಬರಿ ಸೇರುತ್ತದೆ.
Related Articles
Advertisement
ಒಂದು ದಿನ ತಮ್ಮ ಮನೆಯಲ್ಲಿದ್ದ ಗುಮಾಸ್ತನ ಕುಟುಂಬದ ಬಡತನವನ್ನು ಕಂಡ ರಾಯರು, ಗುಮಾಸ್ತನ ಸಂಬಂಧಿ ವೆಂಕಟೇಶ ಎಂಬ ಬಾಲಕನಿಗೆ “ನಾನು ವೆಂಕಟೇಶನಿಗೆ ವಿದ್ಯಾದಾನ ಮಾಡುತ್ತೇನೆ’ ಎಂದು ಮಾತುಕೊಟ್ಟರು. ರಾಯರು ಕೊಟ್ಟ ಮಾತಿನಂತೆಯೇ ವೆಂಕಟೇಶನನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು.
ಹಿರಿಯ ಮಗ ರಾಮ ಎಲ್‌ಎಸ್‌ಬಿ ಪದವಿ ಪಡೆದ ಬಳಿಕ ಎಲ್ಲರೂ ಈತನನ್ನು ರಾಮಚಂದ್ರರಾಯರು ಎಂದು ಈತನನ್ನು ಕರೆಯಲಾರಂಭಿಸದರು. ಇದರಿಂದ ಈತ ಹಿಗ್ಗಿ ಜಂಭಕೊಚ್ಚಿಕೊಳ್ಳುತ್ತಿದ್ದ. ಆದರೆ ಲಕ್ಷ್ಮಣನಿಗೆ ಮಾತ್ರ ವಿದ್ಯೆ ತಲೆಗೆ ಹಚ್ಚಲಿಲ್ಲ. ಬದಲಿಗೆ ಆತನಿಗೆ ಸಂಗೀತವೇ ಉಸಿರಾಗಿತ್ತು. ಈತನಿಗೆ ಸಂಗೀತಾಭ್ಯಾಸ ಮುಂದೆ ಎಲ್ಲವೂ ಗೌಣ.
ಮುಂದೆ ಶ್ರೀನಿವಾಸರಾಯರು ಇಬ್ಬರಿಗೆ ಮದುವೆ ಮಾಡಿದರು. ವೆಂಕಟೇಶನಿಗೂ ತನ್ನ ಮಗಳನ್ನೇ ಕೊಟ್ಟು ಮದುವೆ ಮಾಡಿದರು. ರಾಮಚಂದ್ರ ರಾಯನ ಹೆಂಡತಿ ಶ್ರೀಮಂತ ಮನೆಯ ಮೂಲದವಳಾಗಿದ್ದರಿಂದ ಆತನ ಇನ್ನಷ್ಟು ಜಂಭಗೊಂಡಿದ್ದ.
ಮೀನಾಕ್ಷ್ಮಮ್ಮ ಸ್ವರ್ಗಸ್ಥರಾದರು. ಬಳಿಕ ರಾಯರು ಕೂಡ ಹಾಸಿಗೆಯಿಡಿದರು. ಆದರೆ ರಾಯರೂ ಕೂಡ ಬಹಳಷ್ಟು ದಿನ ಬದುಕಲಿಲ್ಲ. ಅವರು ಕೂಡ ಸ್ವರ್ಗಸ್ಥರಾದರು. ಬಳಿಕ ಮನೆಯ ಯಜಮಾನಿಕೆ ಹಿರಿ ಮಗ ರಾಮಚಂದ್ರರಾಯರಿಗೆ ಸೇರಿದ ಮೇಲೆ ಹೆಂಡತಿ ಜತೆಗೆ ಸೇರಿ ವೈಭೋಗದ ಜೀವನಕ್ಕೆ ಮುಂದಾದನು. ತಮ್ಮ ಲಕ್ಷ್ಮಣ, ಆತನ ಹೆಂಡತಿ ಹಾಗೂ ತಂಗಿ ಗಂಡ ವೆಂಕಟೇಶ ಇವರು ಮನೆಯಾಳುಗಳಂತೆ ದುಡಿಯಲಾರಂಭಿಸಿದರು.
ರಾಮಚಂದ್ರ ರಾಯರು ಹೈಕೋರ್ಟ್ ವಕೀಲರಾದ ಬಳಿಕ ಸಂಬಂಧಗಳನ್ನು ದೂರಲಾರಂಭಿಸದರು. ಹಣಕ್ಕೆ ಪ್ರಾಶಸ್ತ್ಯ ನೀಡಿದರು. ಆದರೆ ರಾಯರ ತಮ್ಮ ಲಕ್ಷ್ಮಣನ ಸಂಗೀತ ಅಭ್ಯಾಸಕ್ಕೆ ತೊಂದರೆ ಮಾಡಿ, ನೀನು ಮನೆಯಲ್ಲಿ ಸಂಗೀತಾಭ್ಯಾಸ ಮಾಡದಿರು ಆಜ್ಞೆ ಮಾಡಿ ಅವಮಾನಿಸದ. ಇದರಿಂದ ಒಂದು ದಿನ ಲಕ್ಷ್ಮಣ ಮನೆ ಬಿಟ್ಟು ಹೋದ. ಮುಂದೆ ಲಕ್ಷ್ಮಣ ತನ್ನ ಸಂಗೀತ ಶಿಕ್ಷಣಕ್ಕೆ, ಹಸಿವಿಗೆ ಊರುಗಳ ತಿರುಗಾಡಿದ ಬಳಿಕ ಅವರು ಒಬ್ಬ ಮಹಾನ್ ಸಂಗೀತ ದರ್ಶನವಾಗಿ ಈತನಿಗೆ ಸಂಗೀತ ಅಭ್ಯಾಸ ಹೇಳಿಕೊಟ್ಟರು. ಮುಂದೆ ದೊಡ್ಡ ಸಂಗೀತಗಾರನಾದ. ಆದರೆ ಅವರ ಅಣ್ಣ ಹಣ ಗಳಿಕೆಯ ಹಿಂದೆ ಬಿದ್ದು ಎಲ್ಲವನ್ನೂ ಕಳೆದುಕೊಂಡರು. ಆದರೆ ತಾಳ್ಮೆಯಿಂದ ಲಕ್ಷ್ಮಣ ರಾಯರು ತಮ್ಮ ಸಂಗೀತ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದರು.
ಜೀವನದುದ್ದಕ್ಕೂ ಸುಖ ದುಃಖಗಳು ನಮ್ಮನ್ನು ಹಿಂಬಾಲಿಸುತ್ತವೆ, ನಾವು ನಮ್ಮವರು ನಮ್ಮ ಕುಟುಂಬ, ನಮ್ಮ ಸಮಾಜ ಎಂದು ತಿಳಿದಾಗಲೆ ನಮ್ಮತನ ಗೊತ್ತಾಗುತ್ತದೆ. ಈ ಸಂಧ್ಯಾರಾಗದಲ್ಲಿ ಅ.ನ. ಕೃಷ್ಣರಾಯರು ಸೃಷ್ಟಿಸಿದ ಲಕ್ಷ್ಮಣ ಈ ಸಾಲಿನಲ್ಲಿ ಬಂದು ನಿಲ್ಲುತ್ತಾರೆ.
ಸಿದ್ಧರಾಮೇಶ ರಾಮತ್ನಾಳ, ವಿಎಸ್ ಆರ್ ಕಾನೂನು ಕಾಲೇಜು, ಬಳ್ಳಾರಿ