Advertisement
ಜನರ ದೃಷ್ಟಿಯಲ್ಲಿ ದಾರಿ ತಪ್ಪಿರಬಹುದಾದ ಮಗಳ ಮದುವೆಗಾಗಿ ಬಡಿದಾಡುವ ವಿಶ್ವನಾಥರು, ಹರಡಿದ ಸುದ್ದಿ ಊಹಾಪೋಹವೋ? ನಿಜ ಸಂಗತಿಯೋ? ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದೇ ವಾಸ್ತವವಾಗಿ ಚಿಂತಿಸುವ ವಾಸುದೇವ, ಬಾಯಿಚಪಲ ತೀರಿಸಿಕೊಳ್ಳಲೆಂದೇ ಬದುಕಿರುವ ತುಂಗಕ್ಕ, ನಾರಾಯಣ, ಪುರುಷೋತ್ತಮ, ರಾಮನಾಥ ಮುಂತಾದವರು, ನಲ್ಮೆಯ ಜೀವವೊಂದಕ್ಕೆ ಏನೇ ಆದರೂ ಒಳ್ಳೆಯದಾಗಲಿ ಎನ್ನುವ ಚಂದ್ರ ಭಾಗಕ್ಕ, ದೇವಪ್ಪ ಮಾಸ್ತರ, ರಾಧಮ್ಮ, ಅನಸೂಯಾ ಮುಂತಾದವರು.
ಕಥೆಯು ಹನೇಹಳ್ಳಿ, ಕಾರವಾರ, ಕುಮಟಾ ಈ ಮೂರು ದಾರಿಗಳಲ್ಲಿ ಸಾಗುತ್ತದೆ.
Related Articles
Advertisement
ವಾಸುದೇವನ ಮೂಲಕ, ಪ್ರತಿಯೊಬ್ಬರೂ ತಮ್ಮ ತಮ್ಮ ಸುಖದ ದಾರಿಗಳನ್ನು ತಾವೇ ಕಂಡುಕೊಳ್ಳಬೇಕು. ನಾನು ಎಂ.ಎಸ್ಸಿ.ಕಲಿಯಬೇಕು; ಪಿಎಚ್.ಡಿ. ಮಾಡಬೇಕು; ಅಮೆರಿಕಕ್ಕೂ ಹೋಗಬೇಕು. ಯಾಕೆ? ಇವೇ ಸುಖದಾಯಕವೆಂದಲ್ಲ. ಅವುಗಳಿಂದ ಬರುವ ಪ್ರಸಿದ್ಧಿಯಿಂದ ಜನರಲ್ಲಿ ನಾನು ಸುಖೀ ಎಂಬ ಭ್ರಮೆ ಹುಟ್ಟಿ, “ನೀನು ಸುಖೀಯಪ್ಪಾ’ ಎಂದು ಅವರ ಬಾಯಿಂದ ಕೇಳಬೇಕು.
“ಉಳಿದವರ’ ಮಹತ್ವ ನಮಗೆ ಇದು. ಸಮಾಜ ಪ್ರತಿಷ್ಠೆ, ಪ್ರಸಿದ್ಧಿಯ ಅರ್ಥ ಇದು. ನನಗೆ ಇಂತಹ ಭ್ರಮೆಯ ಮೇಲೆ ನಿಂತ ಸುಖದ ಹುಚ್ಚು ಬೇಡ. ನನ್ನ ಸುಖಕ್ಕೆ ಆಂತರ್ಯದ ಸಾಕ್ಷಿಯೊಂದೇ ಸಾಕು ಎಂದು ಹೇಳಿಸಿ ನಾವು ಯಾವ ರೀತಿಯ ಸುಖೀಗಳು ಎನ್ನುವ ಎತ್ತರದ ಪ್ರಶ್ನೆಯ ಮರದ ಮೇಲೆ ನಮ್ಮನ್ನು ಇಳಿಸುತ್ತಾರೆ. ಬೇಡವಾಗಿದ್ದನ್ನು ಪದೇ ಪದೆ ಹೇಳಿ ದಾಗ ಕುತೂಹಲಕ್ಕಾದರೂ ಅದು ಹೇಗೆ ಬೇಕೆನಿಸು ತ್ತದೆ!?ಅನ್ನುವುದಕ್ಕೆ ನಿರ್ಮಲೆ ಇಲ್ಲಿ ನಿದರ್ಶನ.
ಹೆಜ್ಜೆ ಮೂಡದ ಹಾದಿಯಲ್ಲಿನ ಮೌನಿ ನಿರ್ಮಲೆ, ತಥಾಸ್ತು ಎಂದ ಪ್ರೀತಿಯಲ್ಲಿ ಮುಖ್ಯವಾಹಿನಿಗೆ ಬಂದು, ಸಿಡಿಮದ್ದಿನ ವಾಸನೆಯಲ್ಲಿ ಸ್ವ ಕೋಪದಿಂದ, ಸಮಾಜದ ಮತುಗಳಿಂದ ಉರಿದು ಸಿಡಿಮ¨ªಾಗಿಯೇ ಸುಟ್ಟುಹೋಗುತ್ತಾಳೆ. ಉಪಸಂಹಾರವನ್ನು ಮಂಜು ಮಂಜಾದ ಕಣ್ಣಿನಲ್ಲಿಯೇ ಓದುವಂತೆ ಯಶವಂತರು ಮಾಡಿದ್ದಾರೆ. ಕೊನೆಯಲ್ಲಿ ವಿಶ್ವನಾಥರು ತಮ್ಮ ಮಗಳನ್ನು ಅಪವಾದದಿಂದ ಪಾರು ಮಾಡಲು ನಡೆಸುವ ಹೋರಾಟದ ಮೂಲಕ ಅಪ್ಪನ ಸ್ಥಾನದಲ್ಲಿ ನಿಂತವನ ಗುಣ, ಘನತೆ, ಕರ್ತವ್ಯಗಳನ್ನು ಹೇಳುತ್ತಾ ಕಥೆಯಾದಳು ಹುಡುಗಿಗೆ ಮುನ್ನುಡಿ ಬರೆಯುತ್ತಾರೆ.