Advertisement
ನೈಜ ಅರ್ಥದಲ್ಲಿ ಗಜಲ್ ಅಂದ್ರೆ ಏನು ಗಜಲಿನ ಹಿನ್ನೆಲೆ ಯಾವುದು ಮೊದಲಿಗೆ ಅದರ ಆಯಾಮವೇನಾಗಿತ್ತು ಅದರ ಲಯಬದ್ಧತೆ ಏನು ಗಜಲ್ ನ ಪ್ರಬುದ್ಧತೆ ಏನು ಈಗಿರುವ ಗಜಲ್ ನ ವಿಸ್ತಾರವೇನು ಅನ್ನೋದರ ಸಂಪೂರ್ಣ ಹೂರಣದ ರುಚಿ ಗಜಲ್ ಆಸಕ್ತ ಹೃದಯಿಗಳಿಗೆ ಅವಶ್ಯಕತೆ ಇದೆ.
Related Articles
Advertisement
ಗಜಲಿನ ಮಾಹಿತಿಗಳ ಯಾವ ವಿಷಯಗಳನ್ನು ಸಹ ಅವರು ಮುಟ್ಟುವಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ. ಆದರೆ ಗಜಲ್ ನ ಬಗ್ಗೆ ಪ್ರೀತಿ ಕಾಳಜಿ ಇರುವ ಮಲ್ಲಿನಾಥ್ ರವರು ಗಜಲ್ ನ ಮುಚ್ಚಿಡುವಂತಹ ಕೆಲಸ ಮಾಡಿಲ್ಲ. ಓದುವ ಮತ್ತು ಬರೆಯಲು ಹಂಬಲಿಸುವಂತಹ ಪ್ರತಿ ಮನಸ್ಸುಗಳಿಗೆ ಶಕ್ತಿ ತುಂಬುವಂತಹ ಭಾವಕ್ಕೆ ಶಾಯಿ ಲೇಪಿಸುವಂತ ಕಾರ್ಯ ಮಾಡಿದ್ದಾರೆ.
ಈ ಕೃತಿಯಲ್ಲಿ ಗಜಲ್ ಗಳು ಆರಂಭವಾಗುವುದಕ್ಕೂ ಮುನ್ನ ಗಜಲ್ ನ ಹುಟ್ಟು ಹರಿವು ಅರಿವು ಆಳ ಅಂದ ಚೂಪುತನ ಸೊಗಸು ಎಲ್ಲವನ್ನ ಎಳೆಎಳೆಯಾಗಿ ಬಿಚ್ಚಿಕೊಟ್ಟಿದ್ದಾರೆ. ಇದರ ಜೊತೆಗೆ ತುಂಬಾ ಜನರಿಗೆ ಗೊತ್ತಿರದಂತಹ ಗಜಲ್ ಪ್ರಕಾರಗಳನ್ನ ಪ್ರಖರವಾಗಿ ಉದಾಹರಣೆಗಳ ಸಮೇತ ತಿಳಿಸಿಕೊಡುತ್ತ ಹಾಗೂ ಓದುಗರನ್ನ ಎಚ್ಚರಿಸುವ ಕೆಲಸವನ್ನ ಮಾಡಿದ್ದಾರೆ.
ಪ್ರಯೋಗಗಳ ಹೆಸರಿನಲ್ಲಿ ಗಜಲ್ ಮೂಲವನ್ನ ತಿರುಚುತ್ತಿರುವವರ ಮೇಲೆ ಮಲ್ಲಿನಾಥ್ ಅವರಿಗೆ ಆತಂಕವಿದೆ, ಈ ನಿಟ್ಟಿನಲ್ಲಿ ಜನರು ಸ್ಪರ್ಶಿಸಲೆ ಬೇಕಾದ ಕೃತಿಯನ್ನ ಮಾಹಿತಿ ಉದಾಹರಣೆ ಸವಿಸ್ತಾರತೆಯನ್ನ ತುಂಬಿ ನಮ್ಮ ಮುಂದೆ ಇಟ್ಟಿದ್ದಾರೆ, ಈಗ ನಾವಷ್ಟೇ ಬಾಕಿ ಓದಬೇಕ ಚರ್ಚೆಗಳಾಗಬೇಕು, ಅಲ್ಲದ್ದು ಊರು ಸುತ್ತಾಡುವ ಮೊದಲು ಸಲ್ಲುವುದು ಪ್ರತಿ ಮನೆಯ ಮನಕೆ ತಲುಪಬೇಕಿದೆ ಇಲ್ಲವಾದರೆ ಶೈಲಿ ತಿರುಚಿಟ್ಟ ಚಿತ್ರವಾಗಿಬಿಡುತ್ತದೆ.
ಆರಂಭದಲ್ಲಿನ ಉಪಯುಕ್ತ ಮಾಹಿತಿಯ ನಂತರ ನೂರ ಒಂದು ಗಜಲ್ ಗಳ ಕುಣಿದಾಟ ಕೋಲಾಟ ಆರಂಭವಾಗುತ್ತದೆ. ಇದರೊಳಗೆ ಒಂಟಿತನವಿದೆ, ಪ್ರೇಮ ಲಹರಿಯ ಹಿಮಗಂಗೆ ಹರಿದಿದೆ, ಮುಖವಾಡಗಳ ಬಗೆಗಿನ ಬೇಸರವಿದೆ, ಸಮಾಜದ ಕಂಟಕಗಳ ವಿರುದ್ಧ ಗಡಸು ಧ್ವನಿಯಿದೆ, ಕತ್ತಲನ್ನ ಕಳೆಯುವ ಸಾಕಿ ಇದ್ದಾಳೆ, ಗಾಲಿಬ್ ಇದ್ದಾನೆ. ಇಲ್ಲಿ ಸೆಳೆತವಿದೆ, ಒರತೆಗಳಿದ್ದಾವೆ, ಹಾಡು ಕುಣಿತಗಳ ಮೆರವಣಿಗೆ ಇದೆ, ಸಮಾಜವನ್ನ ತಿದ್ದುವ ಕೆಲಸವಿದೆ. ಆತಂಕವಿದೆ, ಅನುಭವವಿದೆ, ಅನುಭಾವವಿದೆ, ಭವವಿದೆ, ಭಿನ್ನತೆ ಇದೆ ಒಟ್ಟಾರೆ ಗಾಲಿಬ್ ಸ್ಮೃತಿಯಲ್ಲಿ ಬದುಕಿದೆ.
ಓದಿ : ಮಂಗಳೂರು: ಸಾಕ್ಸ್ ಒಳಗೆ ಅರ್ಧ ಕೆ.ಜಿ ಚಿನ್ನ ಅಕ್ರಮ ಸಾಗಾಟ ಮಾಡಿದ ಪ್ರಯಾಣಿಕ ವಶಕ್ಕೆ