Advertisement
ಸಾಹಿತ್ಯಾಸಕ್ತರಿಗೆ ನಿಸ್ವಾರ್ಥ ಬುದ್ಧಿಯಿಂದ ತಾವು ಓದಿದ ಒಳ್ಳೆಯ ಕೃತಿಗಳನ್ನು ಸದಾ ಹಂಚುತ್ತಿರುವ ಅವರಿಗೆ ದೊಡ್ಡ ಸಾಹಿತಿಗಳು ಸಣ್ಣ ಸಾಹಿತಿಗಳು, ಪ್ರಸಿದ್ಧರು, ಸಾಮಾನ್ಯರು, ಪ್ರಶಸ್ತಿಗಳನ್ನು ಪಡೆದವರು ಪಡೆಯದವರು ಎಂಬ ತಾರತಮ್ಯ ಭಾವವಿಲ್ಲ.
Related Articles
Advertisement
(ಕು.ಗೋ)
ಅವರ ಬಳಿ ತಮ್ಮ ಮೊದಲ ಕೃತಿಗೆ ಮುನ್ನುಡಿ ಬರೆಯಿಸಿಕೊಂಡ ಡಾ.ಕಾತ್ಯಾಯನಿ ಕುಂಜಿಬೆಟ್ಟು ಇವತ್ತು ಬಹಳಷ್ಟು ಕೃತಿಗಳನ್ನು ಪ್ರಕಟಿಸಿರುವ ಪ್ರಸಿದ್ಧ ಸಾಹಿತಿಯಾಗಿದ್ದಾರೆ. ಗೀತಾ ಕುಂದಾಪುರ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.
ಸಾಕಷ್ಟು ಬರೆದು ಪ್ರಕಟಿಸಿ ಸಾಹಿತ್ಯಕ್ಷೇತ್ರದಲ್ಲಿ ಗಮನಾರ್ಹರೆಂದು ಗುರುತಿಸಿಕೊಂಡಿರುವ ಪ್ರಬುದ್ಧ ಸಾಹಿತಿಗಳಾದ ಅಂಬ್ರಯ್ಯ ಮಠ, ಪ್ರದೀಪಕುಮಾರ್ ಹೆಬ್ರಿ, ಸುಮುಖಾನಂದ ಜಲವಳ್ಳಿ, ಅಂಶುಮಾಲಿ, ಶಾಂತರಾಜ ಐತಾಳ್ ಪರಮೇಶ್ವರಿ ಲೋಕೇಶ್ವರ್, ಜ್ಯೋತಿ ಮಹಾದೇವ್, ಸುಶೀಲಾದೇವಿ ಆರ್ ರಾವ್ ಮೊದಲಾದವರೂ ಕು.ಗೋ.ಅವರಿಂದ ಮುನ್ನುಡಿ ಬೆನ್ನುಡಿಗಳನ್ನು ಬರೆಸಿಕೊಂಡಿದ್ದಾರೆ. ಅವರ ಯಾವುದೇ ಕೃತಿಗಳನ್ನೂ ವಿಮರ್ಶೆ ಮಾಡಲು ಹೋಗದೆ ಮುನ್ನುಡಿಯ ಉದ್ದೇಶ ವಿಮರ್ಶೆ ಮಾಡುವುದಲ್ಲ ಬದಲಾಗಿ ಕೃತಿಗೆ ಶುಭ ಕೋರುವುದು ಎನ್ನುತ್ತಾರೆ ಕು.ಗೋ.ಅವರು.
ಆದರೂ ಸಾಧನೆ ಮಾಡಿದವರನ್ನು ಮತ್ತು ಅವರು ಹಿಂದೆ ಮಾಡಿದ ಕೆಲಸಗಳ ಕುರಿತು ಒಳ್ಳೆಯ ಮಾತುಗಳಲ್ಲಿ ಪರಿಚಯಿಸುವ ಕೆಲಸವನ್ನು ಅವರು ಮಾಡುತ್ತಾರೆ. ಇದು ತುಂಬಾ ಮುಖ್ಯವೂ ಹೌದು. ಯಾಕೆಂದರೆ ಇಂದು ಇತರರ ಕೃತಿಗಳನ್ನು ಓದುವ ಅಥವಾ ಇತರರ ಬಗ್ಗೆ ತಿಳಿದುಕೊಳ್ಳುವ ವ್ಯವಧಾನ ಅನೇಕರಿಗೆ ಇಲ್ಲ. ಅಂಥವರು ಕು.ಗೋ.ಅವರ ಮುನ್ನುಡಿಯಿಂದ ಬಹಳಷ್ಟು ತಿಳಿದುಕೊಳ್ಳುವ ಅವಕಾಶವಿರುತ್ತದೆ.
ಇನ್ನೊಂದು ವಿಚಾರ ಏನೆಂದರೆ ಇಂದು ಮುನ್ನುಡಿ ಬರೆಯುವ ಹಲವಾರು ಸಾಹಿತಿಗಳು ಕೃತಿಯನ್ನು ಪೂರ್ತಿಯಾಗಿ ಓದದೆಯೇ ಜಾಳುಜಾಳಾಗಿ ಬರೆದು ಬಿಡುತ್ತಾರೆ. ಆದರೆ ಕು.ಗೋ.ಹಾಗಲ್ಲ. ಅವರು ಕೃತಿಯನ್ನು ಒಂದಕ್ಷರ ಬಿಡದೆ ಓದಿದ್ದಾರೆ ಅನ್ನುವುದು ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಬೇರೆ ಬೇರೆ ಕೃತಿಗಳಲ್ಲಿ ಹರಿದು ಹಂಚಿ ಹೋಗಿರುವ ಕು.ಗೋ.ಅವರ ಈ ಬರಹಗಳನ್ನು ಮಂಡ್ಯದ ಶ್ರೀರಾಮ ಪ್ರಕಾಶನದವರು ಸಂಕಲನರೂಪದಲ್ಲಿ ತಂದು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ.