Advertisement

ಬಸವಣ್ಣ ವಿಶ್ವ ಶ್ರೇಷ್ಠ ಅನುಭಾವಿ

05:55 PM Nov 22, 2020 | Suhan S |

ವಿಜಯಪುರ: ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಜಾತಿರಹಿತ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ಕಾಯಕ ಸಂಸ್ಕೃತಿ ಬಿತ್ತಿದ ಶರಣ ಅಮರಗಣಂಗಳ ನಾಯಕ ಬಸವಣ್ಣ ವಿಶ್ವದ ಶ್ರೇಷ್ಠಅನುಭಾವಿ. ಇಂಥ ಶ್ರೇಷ್ಠನನ್ನು ಜಗತ್ತಿಗೆ ನೀಡಿದ ಶ್ರೇಯಸ್ಸು ವಿಜಯಪುರ ಜಿಲ್ಲೆಗೆ ಸ್ಪಂದಿಸಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಹೇಳಿದರು.

Advertisement

ನಗರದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಮರಗಣಂಗಳ ಕಾಯಕ ಚಿತ್ರ ದರ್ಶನಕಾರ್ಯಕ್ರಮದಲ್ಲಿ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದ ಶ್ರೀಗಳು, ಜಗತ್ತಿಗೆಶ್ರೇಷ್ಠ ಅನುಭಾವಿ ಅಣ್ಣ ಬಸವಣ್ಣನನ್ನು ನೀಡಿದ ಹಿರಿಮೆ ವಿಜಯಪುರ ಜಿಲ್ಲೆಗೆಸಲ್ಲುತ್ತದೆ. ಇಂತಹ ಪಾವನ ನೆಲದಲ್ಲಿ ಜೀವಿಸುವ ನಾವೆಲ್ಲರೂ ಧನ್ಯರು ಎಂದುಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಜಗತ್ತಿಗೆ ಕಾಯಕ ಸಿದ್ಧಾಂತ ಮೊದಲಾದ ಉದಾತ್ತ ಸಂದೇಶಗಳನ್ನು ನೀಡಿದ ಶ್ರೇಷ್ಠ ಅನುಭಾವಿ ಅಣ್ಣ ಬಸವಣ್ಣ,ಕಾಯಕ ಸಂಸ್ಕೃತಿಯನ್ನೇ ಉಸಿರಾಗಿಸಿಕೊಂಡಿದ್ದ ಬಸವಾದಿ ಶರಣರ ಕುರಿತಾದಅರ್ಥಪೂರ್ಣವಾದ ಗ್ರಂಥವನ್ನು ಹೊರತರುತ್ತಿರುವುದು ಶ್ಲಾಘನೀಯ ಕಾರ್ಯ.ಪ್ರತಿಯೊಬ್ಬ ಶರಣರ ಕಾಯಕವನ್ನುಚಿತ್ರ ಸಮೇತ ಪ್ರತಿ ಶರಣರ ಕಾಯಕದ ವಿವರ, ಸಂಕ್ಷಿಪ್ತ ಮಾಹಿತಿಯನ್ನು ಸುಂದರ ಹಾಗೂ ಸರಳ ರೀತಿ ಹೊಂದಿರುವುದುಈ ಗ್ರಂಥದ ಹಿರಿಮೆ. ಪ್ರತಿಯೊಬ್ಬರೂಕೊಂಡು ಓದಿ, ಮನೆಯಲ್ಲಿ ಎಲ್ಲರಿಗೂ ಒದಲು ಕೊಡುವ ಉಪಯುಕ್ತ ಗ್ರಂಥ. ಈ ಕೃತಿ ಇದ್ದ ಮನೆಯಲ್ಲಿ ಶರಣವೇ ಮನೆಯಲ್ಲಿ ವಾದಿಸಿಸುವಂತೆ ಎಂದರು. ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಧರ್ಮ ಮತ್ತು ಸಂಸ್ಕೃತಿಯ ಒಡನಾಡಿಗಳಾಗಿ ನಾವು ಬದುಕಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಟ್ಟ ರಾಜಕಾರಣದಪ್ರಭಾವದಿಂದಾಗಿ ನಾವು ಧರ್ಮ, ಸಂಸ್ಕೃತಿಯಿಂದ ವಿಮುಖವಾಗಿ ಬದುಕುತ್ತಿದ್ದೇವೆ. ಅಹಂಕಾರ, ದ್ವೇಷ ಮೊದಲಾದ ದುರ್ಗುಣಗಳು ಹೆಚ್ಚಾಗುತ್ತಿವೆ ಎಂದು ವಿಷಾದಿಸಿದರು.

ಕಾಯಕ ದಾಸೋಹವನ್ನು ಪ್ರತಿಪಾದಿಸಿದ ಬಸವಾದಿ ಶರಣರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಧರ್ಮ, ಸಂಸ್ಕೃತಿ, ಕಾಯಕ ಮಾರ್ಗದಲ್ಲಿ ನಡೆದರೆಪ್ರವಾಹದಂತೆ ಕಾಡುತ್ತಿರುವ ವೈಷಮ್ಯ,ಅಹಂಕಾರ, ಸಾಮಾಜಿಕ ಅಶಾಂತಿಗಳೆಲ್ಲ ಸಂಪೂರ್ಣ ದೂರವಾಗಿ, ಮಾನವ ಜನ್ಮ ಸಾರ್ಥಕತೆ ಪಡೆಯಲಿದೆ ಎಂದರು. ಭಾಲ್ಕಿ ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದೇವರು ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು. ಮಾಜಿ ಶಾಸಕ ಆರ್‌.ಆರ್‌. ಕಲ್ಲೂರು, ಬಿಎಲ್‌ ಡಿಇ ಸಂಸ್ಥೆ ನಿರ್ದೇಶಕ ಸಂ.ಗು. ಸಜ್ಜನ, ಚಾಣಕ್ಯ ಕೆರಿಯರ್‌ ಅಕಾಡೆಮಿ ಮುಖ್ಯಸ್ಥ ಎನ್‌.ಎಂ.ಬಿರಾದಾರ, ಎಕ್ಸ್‌ಲೆಂಟ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ, ಮೀನಾಕ್ಷಿ ಕಲ್ಲೂರ, ವಿ.ಸಿ. ನಾಗಠಾಣ, ಮ.ಗು. ಯಾದವಾಡ, ಸಿದ್ಧರಾಮಪ್ಪಉಪ್ಪಿನ, ಡಾ| ಸೋಮಶೇಖರ ವಾಲಿ, ಡಾ| ಎಂ.ಎಸ್‌. ಚಾಂದಕವಠೆ ಇದ್ದರು.ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ನಿರೂಪಿಸಿದರು. ವಿ.ಸಿ. ನಾಗಠಾಣ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next