ಬದಿಯಡ್ಕ : ಸಿಂಪರ ಪ್ರಕಾಶನ ಕುಂಬಳೆ ಇದರ ಆಶ್ರಯದಲ್ಲಿ ಕವಯತ್ರಿಯೂ, ಕಥೆಗಾರ್ತಿಯೂ ಆದ ಶಿಕ್ಷಕಿ ಪರಿಣಿತ ರವಿ ಅವರು ರಚಿಸಿದ ವಾತ್ಸಲ್ಯ ಸಿಂಧು ಎಂಬ ಕಥಾ ಸಂಕಲನ ಹಾಗೂ ಸುಪ್ತ ಸಿಂಚನ ಎಂಬ ಕವನ ಸಂಕಲ ಬಿಡುಗಡೆಯು ಎ. 7 ರಂದು ಬದಿಯಡ್ಕದ ನವಜೀವನ ಶಾಲಾ ಸಮೀಪದ ರಾಮ್ ಲೀಲಾ ಸಭಾಂಗಣದಲ್ಲಿ ಜರಗಲಿದೆ.
ಬೆಳಿಗ್ಗೆ 10 ಗಂಟೆಗೆ ಜರಗುವ ಸಭಾ ಕಾರ್ಯಕ್ರಮವನ್ನು ಮಂಗಳೂರು ವಿ.ವಿಯ ಆಂಗ್ಲ ಸಾಹಿತ್ಯ ವಿಭಾಗದ ಮುಖ್ಯಸ್ಥೆ ಡಾ.ರಾಜಲಕ್ಷ್ಮಿ ಎನ್.ಕೆ. ಉದ್ಘಾಟಿಸುವರು. ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಸಭೆಯ ಅಧ್ಯಕ್ಷತೆ ವಹಿಸಲಿದ್ದು ನಿವೃತ್ತ ಪ್ರಾಧ್ಯಾಪಕಿ ಡಾ.ಮಹೇಶ್ವರಿ ಯು. ವಾತ್ಸಲ್ಯ ಸಿಂಧು ಎಂಬ ಕಥಾ ಸಂಕಲನವನ್ನು ಬಿಡುಗಡೆಗೊಳಿಸುವರು.
ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಕೃತಿ ಪರಿಚಯಿಸುವರು. ನಿವೃತ್ತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಸುಪ್ತ ಸಿಂಚನ ಕವನ ಸಂಕಲನವನ್ನು ಅನಾವರಣಗೊಳಿಸುವರು. ಸಾಹಿತಿ,ಪತ್ರಕರ್ತ ರಾಧಕೃಷ್ಣ ಉಳಿಯತ್ತಡ್ಕ ಕೃತಿ ಪರಿಚಯ ನಡೆಸುವರು. ಕೃತಿಗಾರ್ತಿ ಪರಿಣಿತ ರವಿ ಸಭೆಯಲ್ಲಿ ಉಪಸ್ಥಿತರಿರುವರು. ಬಳಿಕ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಜರಗುವ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಶ್ರೀಕಷ್ಣಯ್ಯ ಅನಂತಪುರ ಉದ್ಘಾಟಿಸುವರು. ನಾರಾಯಣ ಭಟ್ ಹಿಳ್ಳೆಮನೆ,ಬಿ.ಕೆ.ರಾಜ್ ನಂದಾವರ, ವಿರಾಜ್ ಅಡೂರು, ರಾಘವೇಂದ್ರ ಕಾರಂತ್, ಶಾಂತಪ್ಪ ಬಾಬು ಸಜಿಪ, ದಯಾನಂದ ರೈ ಕಳ್ವಾಜೆ, ಸುಭಾಷ್ ಪೆರ್ಲ, ಪುರುಷೋತ್ತಮ ಭಟ್ ಪುದುಕೋಳಿ, ಮಣಿರಾಜ್ ವಾಂತಿಚ್ಚಾಲ್, ಅಶ್ವಿನಿ ಕೋಡಿಬೆ„ಲು, ಪ್ರಭಾವತಿ ಕೆದಿಲಾಯ, ಶ್ಯಾಮಲ ರವಿರಾಜ್ ಕುಂಬಳೆ, ಪ್ರಮೀಳಾ ರಾಜ್ ಸುಳ್ಯ, ಶಶಿಕಲಾ ಕುಂಬಳೆ, ಪ್ರೇಮಾ ಉದಯ್ ಕುಮಾರ್ ಸುಳ್ಯ, ಸುಶೀಲಾ ಪದ್ಯಾಣ, ಜ್ಯೋತ್ಸಾಕಡಂದೇಲು, ಶ್ವೇತಾ ಕಜೆ, ಲತಾ ಬನಾರಿ ಕವಿಗೋಷ್ಠಿಯಲ್ಲಿ ಭಾಗವಹಿಸಲಿರುವರು.