ಮಾಗಡಿ: ಸಾಧಕರ ಬದುಕಿನ ಚಿತ್ರಣವನ್ನೊಳಗೊಂಡಿರುವ ಯೋಗಿವರ್ಯರು ಪುಸ್ತಕವನ್ನು ಪದ್ಮಶ್ರೀ ಪುರಸ್ಕೃತ, ಸಾಹಿತಿಡಾ.ದೊಡ್ಡರಂಗೇಗೌಡ ಬಿಡುಗಡೆ ಮಾಡಿದರು.
ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾಗಡಿತಾಲೂಕಿನದೊಡ್ಡ ಸೋಮನಹಳ್ಳಿ ಡಾ.ಡಿ.ಸಿ ರಾಮಚಂದ್ರ ರಚಿಸಿರುವ ಯೋಗಿವರ್ಯ 24 ಸಾಧಕರ ಯಶೋಗಾಥೆ ಒಳಗೊಂಡಿರುವ ಪುಸ್ತಕ ವನ್ನು ಬೆಂಗಳೂರಿನ ಸಂಸ್ಕೃತ ವಿವಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಾಲತಾಣಗಳಲ್ಲಿ ಹುಡುಕಾಡಿದರೂ ಸಿಗದ ಸ್ವಾರಸ್ಯ ವಿಚಾರಗಳು ಪುಸ್ತಕದಲ್ಲಿ ಸಿಗಲಿವೆ ಎಂದು ಹೇಳಿದರು.
ನವಿರಾದ ಸಾಹಿತ್ಯ ಈಗಿನ ಕವಿಗಳಿಂದ ಮೂಡಿಬರುತ್ತಿದೆ. ಇಂದು ಜಾಲತಾಣಗಳಬಳಕೆ ಮಾಡುವವರು ಹೆಚ್ಚಾಗುತ್ತಿದ್ದಾರೆ. ಪುಸ್ತಕ ಬರೆದು ಅದನ್ನುಸಾಹಿತ್ಯ ಭಂಡಾರಕ್ಕೆ ಕೊಡುವ ಕವಿಗಳು ಇಂದಿನ ದಿನಮಾನ ಗಳಲ್ಲಿ ವಿರಳವಾಗಿದ್ದಾರೆ. ಇಂತಹ ಸಮಯ ದಲ್ಲಿ ಪುಸ್ತಕಗಳನ್ನು ಹೊರತರುತ್ತಿರುವಗ್ರಾಮೀಣ ಪ್ರತಿಭೆಗಳಿಗೆ ಸರಸ್ವತಿ ಒಳಿತು ಮಾಡಲಿ, ಯೋಗಿವರ್ಯ ಪುಸ್ತಕ ಸಾಧಕರ ಬಗೆಗಿನ ಸ್ವಾರಸ್ಯ ವಿಚಾರ ಒಳಗೊಂಡಿದೆ ಎಂದರು.
ಸಾಹಿತಿ ಎಚ್.ಎಸ್‌ವೆಂಕಟೇಶಮೂರ್ತಿ ಮಾತನಾಡಿ, ಯೋಗಿವರ್ಯ ಪುಸ್ತಕಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದ ಪುಸ್ತಕವಾಗಿದೆ ಎಂದರು. ಲೇಖಕ ಡಾ.ಡಿ.ಸಿ.ರಾಮಚಂದ್ರ,ಮೈಸೂರುವಿವಿಉಪ ಕುಲಪತಿ ಡಾ. ವಿದ್ಯಾಶಂಕರ್, ಸಂಸ್ಕೃತ ವಿವಿ ಕುಲಪತಿ ಪ್ರೊ. ದೇವನಾಥನ್, ಸಿಂಡಿಕೇಟ್ ಸದಸ್ಯರಾದ ಡಾ.ಸಿ.ನಂಜುಂಡಯ್ಯಮಾತನಾಡಿದರು. ಕಡಬಗೆರೆ ಮುನಿರಾಜ ಭಾವಗೀತೆಗಳನ್ನು ಹಾಡಿ ಅದ ಕಾರ್ಯ ಕ್ರಮಕ್ಕೆ ಮೆರಗು ಕೊಟ್ಟರು ಹಾಗೂಗಾಯಕಿ ಶಮಿತ ಮಲ್ನಾಡ್ ಗೀತಗಾಯನ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ,ಪ್ರಾಂಶುಪಾಲರು, ಮಾಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ, ಕೋಡಿಪಾಳ್ಯ ಕೃಷ್ಣಪ್ಪ, ಚಿಕ್ಕವೀರಯ್ಯ, ಮುನಿಯಪ್ಪ,ಪ್ರಾಂಶುಪಾಲೆ ತ್ರಿವೇಣಿ,ಡಿ.ಜಿ.ಗಂಗಾಧರ, ಸಿ.ಬಿ.ಅಶೋಕ್ ಹಾಜರಿದ್ದರು.