ಶಿರಸಿ: ಬದುಕನ್ನು ಭವ್ಯವಾಗಿ ಬದುಕಿಸಿ, ಬದುಕನ್ನು ಕಲಾಪೂರ್ಣವಾಗಿ ಅರಳಿಸುವ ಸುಂದರ ಶ್ರೀಮಂತ ಕಲೆ ಅಂದರೆ ಯಕ್ಷಗಾನ ಎಂದು ಖ್ಯಾತ ನಾಟಕಕರ್ತ, ಕಲಾವಿದ ಜೇವರ್ಗಿ ರಾಜಣ್ಣ ಹೇಳಿದರು.
ಅವರು ನಗರದ ಲಾಯನ್ಸ ಕ್ಲಬ್ ಮತ್ತು ಹೊಂಗಿರಣ ಫೌಂಡೇಶನ್ ಸಹಯೋಗದಲ್ಲಿ ನಡೆದ ಡಾ. ಜಿ.ಎ. ಹೆಗಡೆ ಸೋಂದಾ ಅವರ ಹತ್ತನೆಯ ಕೃತಿ “ಯಕ್ಷಗಾನಂ ಗೆಲ್ಗೆ” ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪ್ರಸಿದ್ಧ ವಿಮರ್ಶಕ ವಿದ್ವಾನ ಗ.ನಾ ಭಟ್ ಮೈಸೂರು, “ಯಕ್ಷಗಾನಂ ಗೆಲ್ಗೆ” ಕೃತಿಯಲ್ಲಿ ವಿಶಾಲವಾದ ಚಿಂತನೆಯ ಹರಹು ಹಸನಾಗಿ ಹರಿದಿದೆ ಎಂದು ತಿಳಿಸಿದರು.
ಯಕ್ಷರಂಗ ಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗವತ ಕಡತೋಕಾ, ರಾಜ್ಯದ ಹಾಗೂ ಜಿಲ್ಲೆಯ ಯಕ್ಷಗಾನ ವಲಯ ಧನಾತ್ಮಕವಾಗಿ ಗುರುತಿಸಿಕೊಳ್ಳಬೇಕಾಗಿದೆ ಎಂದರು.
ಪ್ರಭಾಕರ ಹೆಗಡೆ, ಗುರುರಾಜ ಹೊನ್ನಾವರ, ಹಿರಿಯ ಕವಿ ಜಿ.ವಿ.ಕೊಪ್ಪಲತೋಟ, ಲೇಖಕ ಜಿ.ಎ. ಹೆಗಡೆ ಸೋಂದಾ, ಲಯನ್ಸ ಅಧ್ಯಕ್ಷ ಉದಯ ಸ್ವಾದಿ, ವಿನಯ ಹೆಗಡೆ, ಅನಿತಾ ಹೆಗಡೆ, ತ್ರಿವಿಕ್ರಮ್ ಪಟವರ್ಧನ್, ಕವಿ ಕೃಷ್ಣ ಪದಕಿ ಕವಯಿತ್ರಿ ಪ್ರತಿಭಾ.ಎಂ.ನಾಯ್ಕ್ ಇತರರು ಇದ್ದರು.