Advertisement

ಶೋಷಿತರಿಗೆ ಬಡತನವೇ ದೊಡ್ಡ ಶಕಿ

03:27 PM Feb 22, 2021 | Team Udayavani |

ತುಮಕೂರು: ಅಂಬೇಡ್ಕರ್‌ ಸಂವಿಧಾನದಲ್ಲಿ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಜಾತಿಗಳಿಗೆ ಮಾತ್ರ ಮೀಸಲಾತಿ ನೀಡಿದರು. ಅಂದು ಮೀಸಲಾತಿ ವಿರೋಧಿಸಿದ್ದ ಜನರೇ ಇಂದು ನಮಗೆ ಮೀಸಲಾತಿ ಬೇಕು ಎಂದು ಕೇಳುತ್ತಿದ್ದಾರೆ ನಿಜವಾಗಿಯೂ ಮೀಸಲಾತಿ ದೊರಕದೇ ಇರುವವರಿಗೆ ಇಂದಿಗೂ ಮೀಸಲಾತಿ ದೊರೆತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

Advertisement

ನಗರದ ಬಾಲಭವನದಲ್ಲಿ ಭೂಮಿ ಬಳಗ ಹಾಗೂ ಎಚ್‌.ಕೆಂಚಮಾರಯ್ಯ ಅಭಿಮಾನಿ ಬಳಗ ಆಯೋಜಿಸಿದ್ದ ಅಭಿನಂದನಾ ಗ್ರಂಥ ಒಡನಾಡಿ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 1987ರಲ್ಲಿ ಮಂಡಲ್‌ ವರದಿಯನ್ವಯ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ, ಅದರ ಪ್ರಮಾಣವನ್ನು ಶೇ.52 ಮೀರದಂತೆ ನೋಡಿಕೊಳ್ಳಲಾಯಿತು.ಮೀಸಲಾತಿ ಕೇಳುವವರು ಸಾಮಾಜಿಕ, ಶೈಕ್ಷಣಿಕವಾಗಿ ಶೋಷಿತರೆ, ಜನರು ನಿಮ್ಮನ್ನು ಮುಟ್ಟಿಸಿಕೊಳ್ಳುತ್ತಿಲ್ಲವೇ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರಿದಿರುವ ನಿಮಗೆ ನಾಲ್ಕು ಜನರನ್ನು ಸಾಕುವಶಕ್ತಿ ಇದ್ದರೂ ಏಕೆ ಮೀಸಲಾತಿ ಬೇಕಾಗಿದೆ ಎಂದು ಡಾ.ಜಿ.ಪರಮೇಶ್ವರ್‌ ಪ್ರಶ್ನಿಸಿದರು.

ಶೋಷಿತರಿಗೆ ಬಡತನವೇ ದೊಡ್ಡ ಶಕ್ತಿ, ಯಾರು ಶಿಕ್ಷಣದಿಂದ ದೂರ ಉಳಿದಿದ್ದರೋ ಅವರೇ ಶಿಕ್ಷಕರಾಗಿಪಾಠ ಹೇಳಿ ಹಲವು ಬದಲಾವಣೆಗೆ ಕಾರಣರಾದರು. ಶೇ.16ರಷ್ಟಿದ್ದ ಫ‌ಲಿತಾಂಶವನ್ನು ಶೇ.76ಕ್ಕೆ ತಂದವರು,ಪೋಷಕರು, ಮಕ್ಕಳೊಂದಿಗೆ ಗ್ರಾಮ ವಾಸ್ತವ್ಯ ಮಾಡಿಮಾದರಿ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಕೆಂಚಮಾರಯ್ಯಅವರ ದಾರಿಯಲ್ಲಿ ಶಿಕ್ಷಕ ಸಮುದಾಯ ಸಾಗಿದರೆ ಶಿಕ್ಷಣದಲ್ಲಿ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಸಂಸದ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆ ಮೌಲ್ಯಗಳನ್ನು ಕಳೆದುಕೊಂಡಿವೆ, ಸರ್ಕಾರಿ ಶಾಲೆ ದಲಿತರು, ಆರ್ಥಿಕ ಸಂಕಷ್ಟದಲ್ಲಿರುವವರಿಗೆಮೀಸಲಾಗಿರುವುದು ವಿಪರ್ಯಾಸ. ಹಣವಂತರು ಶಿಕ್ಷಣ ಕ್ಷೇತ್ರ ಪ್ರವೇಶಿಸುವ ಮೊದಲು ಸರ್ಕಾರಿ ಶಾಲೆ ದೇಗುಲವಾಗಿತ್ತು. ಶಿಕ್ಷಕರು ದೇವರಾಗಿದ್ದರು. ಮಕ್ಕಳ ಮೇಲೆ ಪ್ರಭಾವ ಬೀರಿ ಉನ್ನತ ಬದುಕು ಕಟ್ಟಿಕೊಟ್ಟಿದ್ದರು, ಆಗಾಗಿ ಶಿಕ್ಷಕರಿಗೆ ಗೌರವ ಸಿಗುತ್ತಿತ್ತು ಎಂದು ಸ್ಮರಿಸಿದರು.

ಅಭಿನಂದನಾ ಕೃತಿ ಒಡನಾಡಿ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕೆಂಚಮಾರಯ್ಯ ಅವರು ಅಧಿಕಾರಿಯಾಗಿ, ರಾಜಕಾರಣ ಪ್ರವೇಶಿಸಿದ ನಂತರ ಅವರೊಂದಿಗೆ ಒಡನಾಟ ಹೆಚ್ಚಿತ್ತು, ಯಾರ ಮೇಲೂ ದ್ವೇಷ ಸಾಧನೆ ಮಾಡದ ರಾಜಕಾರಣಿ ಎಂದರೆ ಕೆಂಚಮಾರಯ್ಯ ಮಾತ್ರ ಎಂದು ಹೇಳಿದರು.

ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ಇತಿಹಾಸದ ಪರಿವೆ ಇಲ್ಲದ ಯುವಕರ ನಡುವೆ ಅಂಬೇಡ್ಕರ್‌ ರಚಿಸಿದ ಸಂವಿಧಾನ ಉಳಿಯುತ್ತ ಎನ್ನುವ ಅನು ಮಾನಗಳಿವೆ. ಶೋಷಿತ ಸಮುದಾಯಗಳ ಅವಮಾನವನ್ನು ಎದೆಗೆ ಇಳಿಸಿಕೊಂಡು ಮುಂದೆ ಬರಬೇಕು, ಮಕ್ಕಳಲ್ಲಿ ಲಿಂಗಬೇಧವಿಲ್ಲದೆ ಬೆಳೆಸಬೇಕು ಎಂದರು. ಜಿಪಂ ಸದಸ್ಯ ಕೆಂಚಮಾರಯ್ಯ ಮಾತನಾಡಿ, ನಮ್ಮ ಒಡನಾಡಿ ಸೋಮಣ್ಣ ಇಂದಿನ ಕಾರ್ಯಕ್ರಮದ ರೂವಾರಿ, ನಾನು ಅಧಿಕಾರಿಯಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ. ರಾಜಕಾರಣಿಯಾಗಿಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ಹಿಂದೆಸಾಕಷ್ಟು ಜನರ ಉತ್ತೇಜನ ಇದೆ.ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸುವಂತೆ ಕೋರಿದರು.

Advertisement

ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಶರಣರು, ಮಾದಾರ ಚೆನ್ನಯ್ಯ ಪೀಠದ ಬಸವ ಮೂರ್ತಿ ಸ್ವಾಮೀಜಿ, ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಶಿವಶಂಕರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕರಾದ ಗೋಪಾಲಕೃಷ್ಣ, ಕೊಂಡವಾಡಿ ಚಂದ್ರಶೇಖರ್‌, ಚಿತ್ರದುರ್ಗ ಜಿ.ಪಂ.ಸದಸ್ಯ ನರಸಿಂಹರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next