ಮೈಸೂರು: ಜಾತೀಯತೆ ಮತ್ತು ಭ್ರಷ್ಟಾಚಾರ ಪತ್ರಿಕೋದ್ಯಮದ ಮೊದಲ ಎರಡು ಶತ್ರುಗಳು ಎಂದು ಹಿರಿಯ ಪತ್ರಕರ್ತ ಎಚ್.ಆರ್. ಶ್ರೀಶ ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘ ಮತ್ತು ಜಯತೀರ್ಥ ಪಬ್ಲಿಕೇಷನ್ಸ್ ವತಿಯಿಂದ ಜಿಲ್ಲಾ ಪತ್ರಕರ್ತರ ಭವವನದಲ್ಲಿ ಸೋಮವಾರ ಆಯೋಜಿಸಿದ್ದ ಹಿರಿಯ ಪತ್ರಕರ್ತ ಡಾ.ಕೂಡ್ಲಿ ಗುರುರಾಜ್ ರಚಿಸಿರುವ ಸುಧರ್ಮಾ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಹಾಸುಹೊಕ್ಕಾಗಿರುವ ಜಾತಿಯತೆ ಮತ್ತು ಭ್ರಷ್ಟಾಚಾರ ಇಂದು ಪತ್ರಿಕೋದ್ಯ ಮಕ್ಕೂ ಕಾಲಿರಿಸಿದೆ. ಈ ಎರಡು ಸಂಗತಿಗಳು ಪತ್ರಿಕೋದ್ಯಮದ ನಿಜವಾದ ಶತ್ರುಗಳು. ಪತ್ರಿಕಾ ವೃತ್ತಿ ಇರುವುದು ಸಮಾಜ ಸೇವೆ ಮಾಡಲು ಹೊರತು ಹಣ ಮಾಡುವುದಕ್ಕಲ್ಲ. ಜಾತೀಯತೆ, ಹಣ, ಆಸ್ತಿ ಮಾಡಲು ಈ ವೃತ್ತಿಗೆ ಬರಬೇಡಿ ಎಂದರು.
ಓದು ಮತ್ತು ಬರವಣಿಗೆ ಹುಚ್ಚಿರಬೇಕು: ಪತ್ರಿಕೋದ್ಯಮದ ಬಗ್ಗೆ ಹುಚ್ಚು ಇರುವವರು ಮಾತ್ರ ಮಾಧ್ಯಮ ಕ್ಷೇತ್ರ ಪ್ರವೇಶ ಮಾಡಬೇಕು. ದುಡ್ಡು , ಬಂಗಲೆ ಮತ್ತು ಅಧಿಕಾರಗಳ ಬಗ್ಗೆ ವ್ಯಾಮೋಹ ಇರುವವರು ಬೇರೆ ಮಾರ್ಗ ನೋಡಿಕೊಳ್ಳುವುದು ಸೂಕ್ತ. ಪತ್ರಕರ್ತನಿಗೆ ಸಮಾಜದ ಎಲ್ಲಾ ಸ್ತರಗಳ ಬಗ್ಗೆ ಅರಿವಿರಬೇಕು. ಓದು ಮತ್ತು ಬರವಣಿಗೆಯ ಹುಚ್ಚು ಹಿಡಿದವನು ಮಾತ್ರ ಒಳ್ಳೆಯ ಪತ್ರಕರ್ತನಾಗಬಲ್ಲ ಎಂದು ಹೇಳಿದರು.
ನಮ್ಮ ಸಂಸ್ಕೃತಿಯ ಪ್ರತೀಕ: ಸುಧರ್ಮಾ ಕೇವಲ ಪತ್ರಿಕೆಯಲ್ಲ. ಅದು ನಮ್ಮ ಸಂಸ್ಕೃತಿಯ ಪ್ರತೀಕ. ಇಂತಹ ಪತ್ರಿಕೆಯನ್ನು ಮೈಸೂರಿನ ವರದರಾಜ ಅಯ್ಯಂಗಾರ್ ಮುನ್ನಡೆಸುತ್ತಿದ್ದರು ಎಂಬುದು ಸಂತೋಷದ ವಿಚಾರ. ಮೈಸೂರು ಬ್ರಿಟಿಷರ ಕಾಲದಿಂದಲೂ ಉತ್ತಮ ಹೆಸರು ಪಡೆದುಕೊಂಡಿದೆ. ಇಲ್ಲಿನ ರಾಜರು ಮತ್ತು ದಿವಾನರು ಮೈಸೂರು ಸಂಸ್ಥಾನದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಪತ್ರಕರ್ತರಿಗೆ ತಾವು ಕೆಲಸ ಮಾಡುವ ಸ್ಥಳದ ಬಗ್ಗೆ ಕನಿಷ್ಠ ಇತಿಹಾಸ ತಳಿದುಕೊಳ್ಳಬೇಕು. ಆಗ ಮಾತ್ರ ನೀವು ಅಲ್ಲಿನ ಸಮಸ್ಯೆಳಿಗೆ ಸ್ಪಂದಿಸಲು ಸಾಧ್ಯ. ಇಂದಿನ ಯುವ ಪೀಳಿಗೆಗ ಇತಿಹಾಸ ತಿಳಿದುಕೊಳ್ಳುವ ವ್ಯವದಾನವೇ ಇಲ್ಲ ಎಂದು ಹೇಳಿದರು.
ಡಿಜಿಟಲ್ ಯುಗದೊಂದಿಗೆ ಹೆಜ್ಜೆ: ಕರ್ನಾಟಕ ಮಾಧ್ಯಮ ಆಕಾಡೆಮಿ ಸದಸ್ಯ ಪತ್ರಕರ್ತ ಕಂ.ಕ. ಮೂರ್ತಿ ಮಾತನಾಡಿ, ಇಂದಿನ ಡಿಜೆಟೆಲ್ ದಿಗಳ ಲ್ಲಿಯೂ ಪತ್ರಿಕೆಗಳು ತಮ್ಮ ಸತ್ವವನ್ನು ಕಾಪಾಡಿ ಕೊಂಡು, ಡಿಜಿಟಲ್ ಯುಗದೊಂದಿಗೆ ಹೆಜ್ಜೆ ಹಾಕುತ್ತಿವೆ. ಈ ಸಾಲಿನಲ್ಲಿ ಸುಧರ್ಮಾ ಪತ್ರಿಕೆ ನಿಲ್ಲುತ್ತದೆ. ನಾವು ಅನೇಕ ಪುಸ್ತಕಗಳನ್ನು ಓದುತ್ತೇವೆ ಅವುಗಳಲ್ಲಿ ಕೆಲವು ಮಾತ್ರ ನಮ್ಮನ್ನು ಹೆಚ್ಚು ಹೆಚ್ಚು ಕಾಡುತ್ತವೆ. ಇಂತಹ ಪುಸ್ತಕಗಳ ಪೈಕಿಯಲ್ಲಿ ಸುಧರ್ಮಾ ಪುಸ್ತಕವು ಒಂದಾಗಿದೆ. ಒಬ್ಬ ಪತ್ರಕರ್ತ ಕೇವಲ ತನ್ನನು ಸುದ್ದಿ ಬರೆಯುವುದಕ್ಕೆ ಸೀಮಿತಗೊಳಿಸಬಾರದು. ಪ್ರಪಂಚದ ಸೂಕ್ಷ್ಮ ವಿಷಯಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಸುಧರ್ಮಾ ಪತ್ರಿಕೆಯ ಸಂಪಾದಕಿ ಜಯಲಕ್ಷ್ಮೀ, ಪತ್ರಕರ್ತ ಡಾ.ಕೂಡ್ಲಿ ಗುರುರಾಜ್ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಇದ್ದರು