ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿಪ್ರ ಸಮಾಜದ ಮನೆ ಮನೆಯ ಸರ್ವೇಕ್ಷಣೆ ನಡೆಸಿ ತಾಲೂಕಿನ ವಿಪ್ರ ಸಮಾಜ ಬಂಧುಗಳ ಪೂರ್ಣ ಮಾಹಿತಿ ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡು ತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಹರ್ಷ ವ್ಯಕ್ತಪಡಿಸಿದರು.
ನಗರದ ಜೋಡಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದ ಆವ ರಣದಲ್ಲಿರುವ ಸಮೀರ ಪ್ರವಚನ ಮಂದಿರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಪ್ರ ಕುಟುಂಬ ಪುಸ್ತಕ ಹಾಗೂ ಮಂಡಳಿಯ ಸಹಾಯವಾಣಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅಸಂಘಟಿತರಾಗಿಯೇ ಉಳಿದಿರುವ ಅಡುಗೆ ಬ್ರಾಹ್ಮಣರು ಮತ್ತು ಬ್ರಾಹ್ಮಣ ಪುರೋಹಿತ ವರ್ಗ ದವರನ್ನು ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿಸಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸುವ ಬಗ್ಗೆ ಚಿಂತನೆ ನಡೆಸಿದ್ದು, ಶೀಘ್ರವೇ ಕ್ರಮ ಕೈಗೊಳುತ್ತೇನೆ ಎಂದರು.
ಚಿಂತಾಮಣಿ ತಾಲೂಕಿನಾದ್ಯಂತ ನೂರಾರು ಕುಟುಂಬಗಳು ಅಡುಗೆ ಮತ್ತು ಪುರೋಹಿತ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಅಂತಹವರನ್ನು ಈಗಾಗಲೇ ಗುರುತಿಸಿದ್ದು ಅವರನ್ನು ಆರ್ಥಿಕವಾಗಿ ಸದೃಡಗೊಳಿಸಲು ಕ್ರಿಯಾ ಯೋಜನೆ ನಡೆಸಲಾಗುವುದು ಎಂದರು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಕಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ ಕ್ಷೇತ್ರದ ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿದರು.
ರಾಜ್ಯ ಮಂಡಳಿಯ ನಿರ್ದೇಶಕ ರಾದ ವತ್ಸಲಾ ನಾಗೇಶ್ ಸಂಘದ ಸದಸ್ಯರಿಗೆ ಗುರುತಿನ ಚೀಟಿ ಬಿಡುಗಡೆ ಮಾಡಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷರಾದ ಅಟ್ಟೂರು ವೆಂಕಟೇಶ್ ಮಾತನಾಡಿದರು. ಬ್ರಾಹ್ಮಣ ಸಮುದಾಯದ ಹಾಗೂ ಸಂಘ ಕಾರ್ಯಚಟುವಟಿಕೆಗಳಲ್ಲಿ ಸಾಕಷ್ಟು ಶ್ರಮ ವಹಿಸಿದ ಎಸ್.ಗೋಪಾಲಕೃಷ್ಣ, ಪತ್ರಕರ್ತ ಸಿ.ಎಸ್.ರವಿಕುಮಾರ್, ಸಿ. ಸೋಮಶೇಖರ್, ಸಿ.ಎನ್.ಮಂಜುಳಾ ದೇವಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಮಾರ್ಗದರ್ಶಿಗಳಾದ ಬಿ.ಆರ್. ಶ್ರೀನಾಥ್, ರಮೇಶ್ ಶರ್ಮ, ಉಪಾಧ್ಯಕ್ಷ ವಸಂತಪ್ಪ, ಕಾರ್ಯದರ್ಶಿ ಎಸ್.ವಿ. ರವಿಪ್ರಕಾಶ್, ಖಜಾಂಚಿ ವಿ.ಲಕ್ಷ್ಮಪ್ಪ, ಸಹಕಾರ್ಯದರ್ಶಿ ನಾಗೇಶ್, ಪದಾಧಿಕಾರಿಗಳಾದ ಮಂಜುಳಾ ದೇವಿ, ಮಂಜುಳಾ ವಾಸುದೇವ ಮೂರ್ತಿ, ಧರ್ಮರಾಜ್, ಬಿ.ವಿ.ಸುರೇಶ್, ಎನ್. ಕೃಷ್ಣ, ಮಲ್ಲಿಕಾರ್ಜುನ್, ಡಾ.ಶ್ರೀನಿವಾಸ್, ವೆಂಕಟೇಶ ಪ್ರಸಾದ್, ಶೋಭಾ ಆನಂದ್, ಸುಧಾಕರ್, ವೆಂಕಟಾಚಲಪತಿ ಮತ್ತಿತರರು ಉಪಸ್ಥಿತರಿದ್ದರು.