ಮುಂಬಯಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ನಗರದ ಹಿರಿಯ ಮತ್ತು ಪ್ರತಿಷ್ಠಿತ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮವು ಅಂಧೇರಿ ಪಶ್ಚಿಮದ ಮೊಗವೀರ ಭವನದ ಎಂವಿಎಂ ಶಾಲಿನಿ ಜಿ. ಶಂಕರ್ ಸೆಂಟರ್‌ನ ಸಭಾಗೃಹದಲ್ಲಿ ನಡೆಯಿತು.
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್ ಎಲ್. ಬಂಗೇರ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂವಿಎಂ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಗೋಪಾಲ್ ಕಲಕೋಟಿ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ, ಮೊಗವೀರ ಮಂಡಳಿಯ ಉಪಾಧ್ಯಕ್ಷ, ಮೊಗವೀರ ಮಾಸಿಕದ ಸಂಪಾದಕ, ಅಶೋಕ ಎಸ್. ಸುವರ್ಣ ಅವರ ಮೊಗವೀರ ವ್ಯವಸ್ಥಾಪಕ ಮಂಡಳಿ ಪ್ರಕಟಿತ “ಮುಂಬಯಿ ಪರಿಕ್ರಮಣ’ ಕೃತಿಯನ್ನು ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷ, ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರು ಇದರ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್. ಭಂಡಾರಿ ಅವರು ಬಿಡುಗಡೆಗೊಳಿಸಿದರು.
ಕವಿ, ಲೇಖಕ ಗೋಪಾಲ್ ತ್ರಾಸಿ ಅವರ ಸಾಹಿತ್ಯ ಬಳಗ ಮುಂಬಯಿ ಪ್ರಕಟಿತ “ಸಮರ್ಥ ಪತ್ರಕರ್ತ, ಸಂಪಾದಕ ಅಶೋಕ ಸುವರ್ಣ’ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮುಂಬಯಿ ಘಟಕದ ಕಾರ್ಯದರ್ಶಿ, ರಂಗತಜ್ಞ ಡಾ| ಭರತ್‌ಕುಮಾರ್ ಪೊಲಿಪು ಬಿಡುಗಡೆಗೊಳಿಸಿದರು. ಈ ಸಂದರ್ಭ ಮೋಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್, ಸೋಮ ಸಾಯಿ ಸ್ಕಂದ ಆಶ್ರಮ ಮೈಸೂರು ಇದರ ವಿಶ್ವಸ್ಥ ಸದಸ್ಯ ಶ್ರೀನಿವಾಸ ಎನ್. ಕಾಂಚನ್, ಮದರ್ ಇಂಡಿಯಾ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಮೈಂದನ್, ಒಡೆಯರಬೆಟ್ಟು ಮೊಗವೀರ ಸಭಾ ಮುಂಬಯಿ ಅಧ್ಯಕ್ಷ ಗೋವಿಂದ ಎನ್. ಪುತ್ರನ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್, ನಗರದ ಉದ್ಯಮಿಗಳಾದ ಸುಧೀರ್ ಎಸ್. ಪುತ್ರನ್ ಮತ್ತು ಜಿತೇಂದ್ರಕುಮಾರ್ ವಿ. ಕೋಟ್ಯಾನ್ ಅವರು ಪಾಲ್ಗೊಂಡು ಶುಭಹಾರೈಸಿದರು.
ಕೃತಿಕರ್ತರಾದ ಅಶೋಕ ಎಸ್. ಸುವರ್ಣ, ಗೋಪಾಲ ತ್ರಾಸಿ ಹಾಗೂ ಮೋಗವೀರ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಲ್. ಸಾಲ್ಯಾನ್, ಸಂಜೀವ ಕೆ. ಸಾಲ್ಯಾನ್, ದೇವರಾಜ್ ಬಂಗೇರ, ಪ್ರೀತಿ ಹರೀಶ್ ಶ್ರೀಯಾನ್, ಮೊಗವೀರ ಮಾಸಿಕ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ ¾ಣ್ ಶ್ರೀಯಾನ್, ವ್ಯವಸ್ಥಾಪಕ ದಯಾನಂದ ಬಂಗೇರ, ಡಾ| ಜಿ. ಪಿ. ಕುಸುಮಾ, ಜಿ. ಟಿ. ಆಚಾರ್ಯ, ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ನಗರದ ವಿವಿಧ ಮೊಗವೀರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಜಾತೀಯ, ಕನ್ನಡಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಸಮಾಜ ಬಾಂಧವರು, ತುಳು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೃತಿಕಾರರನ್ನು ಅಭಿನಂದಿಸಿ ಶುಭಹಾರೈಸಿದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾಹಿತ್ಯಾಭಿಮಾನಿಗಳಿಗೆ ಅನುಕೂಲವಾಗಲು ಆನ್‌ಲೈನ್ ಮುಖಾಂತರ ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.