Advertisement

ಪುಸ್ತಕ “ಕ್ಲಿ ದ ಕೋಲ್ಟ್’ಲೋಕಾರ್ಪಣೆ

10:00 PM Jun 17, 2019 | Sriram |

ಉಡುಪಿ: ಲೇಖಕ ಕ್ಲಿಂಗ್‌ ಜಾನ್ಸನ್‌ ಅವರು ಪುಸ್ತಕ ಮಕ್ಕಳಲ್ಲಿ ಯೋಚನಾ ಶಕ್ತಿ ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಪೋಷಕರು ಇಂತಹ ಪುಸ್ತಕವನ್ನು ಮಕ್ಕಳು ಓದುವಂತೆ ಪ್ರಚೋದನೆ ನೀಡಬೇಕು ಎಂದು ಮನೋವೈದ್ಯ ಡಾ| ವಿರೂಪಾಕ್ಷ ದೇವರ ಮನೆ ತಿಳಿಸಿದರು.

Advertisement

ಸಿಎಸ್‌ಐ ಜುಬಿಲಿ ಚರ್ಚ್‌ ಸಮೀಪದ ಸ್ನೇಹಾಲಯ ಸಭಾಂಗಣದಲ್ಲಿ ರವಿವಾರ ಆಯೋಜಿದ್ದ ಲೇಖಕ ಕ್ಲಿಂಗ್‌ ಜಾನ್ಸನ್‌ ಅವರ “ಕ್ಲಿ ದ ಕೋಲ್ಟ್’ (ಕಾಡು ಕುದುರೆ) ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಒಬ್ಬ ತಂದೆ ತನ್ನ ಮಗನ ಪ್ರೇರಣೆಯಿಂದ ಬರೆದಿರುವ ಪುಸ್ತಕವಾಗಿದೆ. ಮುಂದೆ ಈ ಪುಸ್ತಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದರು.

ಕ್ಲಿಂಗ್‌ ಜಾನ್ಸನ್‌ ಮಾತನಾಡಿ, ಈ ಪುಸ್ತಕದಲ್ಲಿ ಮೈಸೂರು ಅರಮನೆ ಸೇರ ಬಯಸುವ ಊಟಿ ಕಾಡು ಕುದುರೆ ಮರಿಯ ಕತೆಯಾಗಿದೆ. ಇದರಲ್ಲಿ ಇಡೀ ಮೈಸೂರಿನ ಇತಿಹಾಸವನ್ನು ಕತೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದರು. ಪುಸ‌¤ಕದ ಆನ್‌ಲೈನ್‌ ಪ್ರತಿಯನ್ನು ಚಿತ್ರನಟಿ ಆಶಾ ಭಟ್‌ ಬಿಡುಗಡೆಗೊಳಿಸಿದರು. ಚಲನಚಿತ್ರ ನಿರ್ದೇಶಕ ಸಿತೇಶ್‌ ಸಿ. ಗೋವಿಂದ, ರೆ| ಕಿಶೋರ್‌, ರೆ| ಸ್ಟೀವನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next