Advertisement

ಬೆಳೆಯದ ಬಾಂಧವ್ಯ: ದತ್ತು ಪ್ರಕ್ರಿಯೆ ರದ್ದುಗೊಳಿಸಿದ ಹೈಕೋರ್ಟ್‌

12:09 AM Feb 06, 2024 | Team Udayavani |

ಮುಂಬಯಿ: ಮಗುವಿನೊಂದಿಗೆ ಬಾಂಧ ವ್ಯ ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ಅವಲತ್ತುಕೊಂಡ ಹಿನ್ನೆಲೆಯಲ್ಲಿ ಗಂಡು ಮಗುವೊಂದರ ದತ್ತು ಪ್ರಕ್ರಿಯೆಯನ್ನೇ ಬಾಂಬೆ ಹೈಕೋ ರ್ಟ್‌ ರದ್ದುಗೊಳಿಸಿದೆ.

Advertisement

ಕಾನೂನಿನ ಪ್ರಕಾರವೇ ದಂಪತಿಯು ಗಂಡು ಮಗುವೊಂದನ್ನು ದತ್ತು ಪಡೆದಿ ದ್ದರು. ಅದಕ್ಕೂ ಮುನ್ನವೇ ಆ ದಂಪತಿಗೆ ಹೆಣ್ಣು ಮಗುವೊಂದಿತ್ತು. ನಂತರ, ಕೋರ್ಟ್‌ ಮೆಟ್ಟಿಲೇರಿದ ದಂಪತಿ, “ತಾವು ದತ್ತು ಪಡೆದಿರುವ ಬಾಲಕನ ಹವ್ಯಾಸಗಳು ಮತ್ತು ಕೆಟ್ಟ ನಡವಳಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಬಾಲ ಕನು ನಮ್ಮೊಂದಿಗಾಗಲೀ, ನಮ್ಮ ಮಗಳೊಂದಿಗಾಗಲೀ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ಹಾಗಾಗಿ, ನಾವು ಮಗುವನ್ನು ವಾಪಸ್‌ ನೀಡಲು ಬಯಸುತ್ತೇವೆ’ ಎಂದು ಹೇಳಿದ್ದರು.

ಅರ್ಜಿ ವಿಚಾರಣೆ ನಡೆಸಿದ ಪೀಠ, ಪೋಷಕರ ಕೋರಿಕೆಗೆ ಒಪ್ಪಿ ದತ್ತು ಪ್ರಕ್ರಿಯೆ ಯನ್ನು ರದ್ದುಪಡಿಸಿ, ಅವರು ಮಗುವಿನ ಹೆಸರಲ್ಲಿ ಮಾಡಿದ್ದ 2 ಲಕ್ಷ ರೂ. ಠೇವಣಿ ವಾಪಸ್‌ ನೀಡುವಂತೆ ಸೂಚಿಸಿದೆ. ಜತೆಗೆ, ಮಗುವನ್ನು “ದತ್ತು ಪಡೆಯಲು ಮುಕ್ತ’ ಎಂದು ಮರು ನೋಂದಣಿ ಮಾಡಿಕೊಳ್ಳುವಂತೆ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next