Advertisement

ಮಾದರಿ ಕ್ಷೇತ್ರ ಮಾಡಲು ಪ್ರಯತ್ನ : ಸಚಿವ ಬೊಮ್ಮಾಯಿ

07:06 PM Feb 09, 2021 | Team Udayavani |

ಬಂಕಾಪುರ: ಕ್ಷೇತ್ರದ ಮತದಾರರ ಆರ್ಶೀವಾದದಿಂದ ನಾನು ಸಚಿವನಾಗಿದ್ದೇನೆ. ಮತದಾರರ ಋಣ ತೀರಿಸಲು ಹಗಲಿರುಳು ಶ್ರಮಿಸುವ ಮೂಲಕ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಪಟ್ಟಣದ ಪುರಸಭೆ ಆವರಣದಲ್ಲಿ 1.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ,ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಚೆಕ್‌ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಟ್ಟಣದ 10 ಪ್ರದೇಶ ಕೊಳಚೆ ಪ್ರದೇಶವೆಂದು ಗುರುತಿಸಲಾಗಿದ್ದು, ಬರುವ ದಿನಗಳಲ್ಲಿ ಕೊಳಚೆ ಬೋರ್ಡ್‌ನಿಂದ ಆ ಪ್ರದೇಶ ಅಭಿವೃದ್ಧಿಪಡಿಸಲಾಗುವುದು. ಪಟ್ಟಣದ ಸುಂಕದಕೇರಿ ಮತ್ತು ಕುಂಬಾರ ಓಣಿ ಸ್ಲಂ ಬೋರ್ಡ್‌ ವ್ಯಾಪ್ತಿಗೆ ಒಳಪಡಿಸಿ ಅವುಗಳನ್ನೂ ಅಭಿವೃದ್ಧಿ ಪಡಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು.

ಜಿ+1 ಅತ್ಯುತ್ತಮ ಗುಣಮಟ್ಟದ 604 ಮನೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, 326 ಮನೆಗಳ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿವೆ. ಅವುಗಳನ್ನು ಶೀಘ್ರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಪಟ್ಟಣ ಸಂಪರ್ಕಿಸುವ ಎಲ್ಲ ಗ್ರಾಮೀಣ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ನಿಧಿ ಯೋಜನೆಯಡಿ ಎಸ್‌.ಸಿ ಪ್ರತಿಭಾವಂತ ಮೂರು ಹಾಗೂ ಓರ್ವ ಎಸ್‌.ಟಿ ವಿದ್ಯಾರ್ಥಿಗೆ ಲ್ಯಾಪ್‌ಟಾಪ್‌ ಖರೀದಿಗೆ ತಲಾ 15 ಸಾವಿರ ರೂ. ಸಹಾಯಧನ, ಆರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ, ಬಡಜನ ಕಲ್ಯಾಣ ಅನುದಾನದಲ್ಲಿ 11 ವಿದ್ಯಾರ್ಥಿಗಳಿಗೆ ಶ್ರೇಣಿಗನುಗುಣವಾಗಿ ಶೈಕ್ಷಣಿಕ ಸಹಾಯ ಧನ ವಿತರಿಸಲಾಯಿತು.

ಇದನ್ನೂ ಓದಿ :ಹೆಣ್ಣು ಮಕ್ಕಳ ಜನನ ಸಂಭ್ರಮಿಸಿ: ಪಾಟೀಲ

Advertisement

ಪ್ರಧಾನಮಂತ್ರಿ ಸ್ವ ನಿಧಿ  ಯೋಜನೆಯಡಿ 200 ಬೀದಿ ವ್ಯಾಪಾರಸ್ಥರಿಗೆ ತಲಾ 10 ಸಾವಿರ ರೂ. ಸಬ್ಸಿಡಿ ಸಾಲ ಸೌಲಭ್ಯ ಹಾಗೂ ಮಹಿಳಾ ಸಂಘಗಳಿಗೆ 10 ಸಾವಿರ ಆವರ್ತಕ ನಿಧಿ  ವಿತರಿಸಲಾಯಿತು.

ಈ ವೇಳೆ  ಎ.ಸಿ. ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ನರಗರಾಭಿವೃದ್ಧಿ ಕೋಶ ಕಾರ್ಯಪಾಲಕ ಅಭಿಯಂತರ ಎಸ್‌ .ಪಿ. ವಿರಕ್ತಮಠ, ಮುಖ್ಯಾಧಿ ಕಾರಿ ರೇಣುಕಾ ದೇಸಾಯಿ, ಶಿವಾನಂದ ಮ್ಯಾಗೇರಿ, ಹೊನ್ನಪ್ಪ ಹೂಗಾರ, ತಹಶೀಲ್ದಾರ್‌ ಬಸವರಾಜ ಹೊಂಕಣ್ಣವರ, ಎಸ್‌.ಎಸ್‌. ಗಿರಡ್ಡಿ, ರೂಪಾ ನಾಯ್ಕ, ಬಸವರಾಜ ನಾರಾಯಣಪುರ, ಗುಡ್ಡಪ್ಪ ಮತ್ತೂರ, ಅಶೋಕ ಪಟ್ಟಣಶೆಟ್ಟರ, ಸೋಮಶೇಖರ ಗೌರಿಮಠ, ಶಂಭಣ್ಣ ವಳಗೇರಿ, ಬಿ.ಎಸ್‌. ಗಿಡ್ಡಣ್ಣವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next