Advertisement
ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ಹುರುಪಿನಲ್ಲಿರುವ ಬಿಜೆಪಿಗೆ ಜೋಡಿ ಯಾತ್ರೆ ಇನ್ನಷ್ಟು ಹುಮ್ಮಸ್ಸು ತುಂಬಲಿದೆ. ಮೀಸ ಲಾತಿ ಹೆಚ್ಚಿಸುವ ನಿರ್ಧಾರ ಕೈಗೊಂಡ ಬಳಿಕ ಇದು ಮೊದಲ ಕಾರ್ಯಕ್ರಮ ವಾಗಿದ್ದು, ರಾಯಚೂರು ಗ್ರಾಮಾಂ ತರ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಜನಸಂಕಲ್ಪ ಯಾತ್ರೆ ಹೊರಡುತ್ತಿರುವುದು ವಿಶೇಷ. 50 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ.
Related Articles
Advertisement
ರಾಯಚೂರು ತಾಲೂಕಿನ ಗಿಲ್ಲೆಸೂ ಗೂರಿಂದ ಯಾತ್ರೆಗೆ ಚಾಲನೆ ಸಿಗಲಿದ್ದು, ಸಿಎಂ ಹಾಗೂ ಮಾಜಿ ಸಿಎಂ ಅವರ ಜೋಡಿ ಯಾತ್ರೆ ಅತ್ಯಂತ ಮಹತ್ವ ಪಡೆದಿದೆ. ಈ ಜೋಡಿ 52 ವಿಧಾನಸಭಾ ಕ್ಷೇತ್ರಗಳಲ್ಲದೆ, ಅ.16ರಂದು ಮೈಸೂರಿನಲ್ಲಿ ನಡೆಯಲಿರುವ ಎಸ್ಸಿ ಮೋರ್ಚಾ, ಅ.30ರಂದು ಕಲಬುರಗಿಯಲ್ಲಿ ಒಬಿಸಿ ಮೋರ್ಚಾ, ನ.13ರಂದು ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ, ನ.27ರಂದು ಶಿವಮೊಗ್ಗದಲ್ಲಿ ಯುವ ಮೋರ್ಚಾ, ಡಿ.11ರಂದು ಬಳ್ಳಾರಿ ಯಲ್ಲಿ ಎಸ್ಟಿ ಮೋರ್ಚಾ, ಡಿ.25ರಂದು ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಹಾಗೂ 2023ರ ಜ.8ರಂದು ವಿಜಯಪುರದಲ್ಲಿ ಅಲ್ಪಸಂಖ್ಯಾಕರ ಮೋರ್ಚಾದ ಬೃಹತ್ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದೆ.
ಇವರು ಸಂಚರಿಸುವ 52 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್ಸಿ ಮೀಸಲು 10, ಎಸ್ಟಿ ಮೀಸಲು 5, ಸಾಮಾನ್ಯ 37 ಕ್ಷೇತ್ರಗಳಿವೆ. ಇದರಲ್ಲಿ ಬಿಜೆಪಿ ಶಾಸಕರು ಇರುವ 28, ಕಾಂಗ್ರೆಸ್ ಶಾಸಕರು ಇರುವ 20 ಹಾಗೂ ಜೆಡಿಎಸ್ ಶಾಸಕರು ಇರುವ 4 ಕ್ಷೇತ್ರಗಳಿವೆ.ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದ ತಂಡಗಳು ಯಾತ್ರೆ ಆರಂಭಿಸಿದ್ದು, 75 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿವೆ.
ಹೈವೋಲ್ಟೇಜ್ ಕೇಂದ್ರಪ್ರಮುಖ ಪಕ್ಷಗಳ ಶಕ್ತಿಪ್ರದರ್ಶನಕ್ಕೆ ವೇದಿಕೆ ಈ ಗಿಲ್ಲೆಸೂಗುರು. ಹೈವೋಲ್ಟೇಜ್ ತಾಣ. ಒಂದೆಡೆ ಬಿಜೆಪಿ ಜನಸಂಕಲ್ಪ ಯಾತ್ರೆ ಮತ್ತೂಂದೆಡೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗಳು ಇಲ್ಲೇ ನಡೆ ಯುತ್ತಿವೆ. ಈಚೆಗೆ ಜೆಡಿಎಸ್ ಸಮಾವೇಶ ಕೂಡ ನಡೆದಿತ್ತು. ಜನಸಂಕಲ್ಪ ಯಾತ್ರೆಯಲ್ಲಿ 2 ಹಂತ ಗಳಲ್ಲಿ ತಲಾ 50 ಕ್ಷೇತ್ರಗಳನ್ನು ತಲುಪಲಾಗುತ್ತಿದೆ. ಮೊದಲ ಹಂತದಲ್ಲೇ ಕಲ್ಯಾಣ ಕರ್ನಾಟಕದ ರಾಯಚೂರು, ವಿಜಯ ನಗರ, ಬಳ್ಳಾರಿ, ಕೊಪ್ಪಳ, ಕಲಬುರಗಿ ಜಿಲ್ಲೆಗಳತ್ತ ಗಮನಹರಿಸಿರುವುದು ವಿಶೇಷ. ಡಿಸೆಂಬರ್‌ನೊಳಗೆ 150 ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಸುವ ಗುರಿ ಹಾಕಿಕೊಂಡಿದೆ. ಜನಸಂಕಲ್ಪ ಯಾತ್ರೆ ಅ.11ರಿಂದ ಡಿ.25
ಜೋಡಿ: ಬಸವರಾಜ ಬೊಮ್ಮಾಯಿ- ಯಡಿಯೂರಪ್ಪ
ಯಾತ್ರೆಯ ದಿನ: 26
ವಿಧಾನಸಭಾ ಕ್ಷೇತ್ರ: 52 ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತೀ ಕಡಿಮೆ ಅಂತರದಿಂದ ಸೋತ ಕ್ಷೇತ್ರಗಳು, ನೂರಕ್ಕೆ ನೂರು ಗೆಲ್ಲುವ ಮತ್ತು 50:50 ಅವಕಾ ಶವಿರುವ ಕ್ಷೇತ್ರಗಳನ್ನು ಗಮನ ದಲ್ಲಿಟ್ಟು ಕೊಂಡು ಯಾತ್ರೆ ಆರಂ ಭಿಸಲಾಗಿದ್ದು, ಮತದಾರರ ಮನೆ-ಮನೆಗೆ ತಲುಪುತ್ತೇವೆ. ಆ ಮೂಲಕ 150 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ.
– ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ