Advertisement

ಮಾ.4 ಕ್ಕೆ ರಾಜ್ಯ ಬಜೆಟ್:ರಾಜಸ್ವ ಕೊರತೆಯ ಹಗ್ಗದ ನಡಿಗೆ ನಿಭಾಯಿಸುವರೇ ಬೊಮ್ಮಾಯಿ

02:44 PM Feb 18, 2022 | Team Udayavani |

ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ ಗೆ ದಿನಗಣನೆ ಆರಂಭವಾಗಿದ್ದು, ಮಾ.4  ರಂದು ಆಯವ್ಯಯ ಮಂಡನೆ ಮಾಡಲಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಸಚಿವ ಸಂಪುಟ ಸಭೆ ನಡೆದ ಬಳಿಕ ಬಜೆಟ್ ಅಧಿವೇಶನಕ್ಜೆ ಮುಹೂರ್ತ‌ ನಿಗದಿ ಮಾಡಲಾಗಿದೆ.

Advertisement

2023 ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ಎದುರಾಗಲಿದೆ. ಹೀಗಾಗಿ ಬೊಮ್ಮಾಯಿ ಅವರ ಈ ಬಜೆಟ್ ಮೇಕೆ ಎಲ್ಲರ ನಿರೀಕ್ಷೆ ಇದೆ. ಜನಪ್ರಿಯ ಬಜೆಟ್ ಮಂಡನೆಗೆ ಸರಕಾರ ತಯಾರಿ ನಡೆಸಿದೆ ಎಂದು ಹೇಳಲಾಗುತ್ತಿದೆ.

ಆದರೆ ಹಣಕಾಸು ಇಲಾಖೆ ಮೂಲಗಳ ಪ್ರಕಾರ ರಾಜ್ಯ ಸರಕಾರದ ಖಜಾನೆ ಸಂಪನ್ನವಾಗಿಲ್ಲ. ಕಳೆದ ವರ್ಷ ಮೂವತ್ತು ಸಾವಿರ ಕೋಟಿ ರೂ. ಸಾಲವನ್ಬು ಕೇಂದ್ರ ಸರಕಾರದಿಂದ ಪಡೆಯಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ರಾಜಸ್ವ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಕಳೆದ ವರ್ಷವೇ ರಾಜಸ್ವ ಕೊರತೆ ನೀಗಿಸುವುದಕ್ಕೆ ಮಾಡಿದ ಪ್ರಯತ್ನ ಯಶಸ್ವಿಯಾಗಿಲ್ಲ. ಹೀಗಾಗಿ ಬೊಮ್ಮಾಯಿ ಹಗ್ಗದ ಮೇಲೆ ನಡಿಗೆ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next