Advertisement

ಮುಂಬಯಿ ಶೇರು ಪೇಟೆ 267 ಅಂಕ ಅಚ್ಚರಿ ಜಿಗಿತ. 9,200 ದಾಟಿದ ನಿಫ್ಟಿ

11:19 AM Apr 18, 2017 | udayavani editorial |

ಮುಂಬಯಿ : ಸಾಗರೋತ್ತರ ಶೇರುಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿಬಂದಿರುವ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 267 ಅಂಕಗಳ ಅದ್ಭುತ ಜಿಗಿತವನ್ನು ದಾಖಲಿಸಿ ಅಚ್ಚರಿ ಉಂಟುಮಾಡಿತು.

Advertisement

ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದಿನ ಆರಂಭಿಕ ವಹಿವಾಟಿನಲ್ಲಿ 9,200 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್‌ ಸಂಪಾದಿಸಿತು.

ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್‌ 249.24 ಅಂಕಗಳ ಏರಿಕೆಯೊಂದಿಗೆ 29,662.90 ಅಂಕಗಳ ಮಟ್ಟದಲ್ಲೂ, ನಿಫ್ಟಿ 70.75 ಅಂಕಗಳ ಏರಿಕೆಯೊಂದಿಗೆ 9,210.05 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಇಂದಿನ ಆರಂಭಿಕ ವಹಿವಾಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಐಸಿಐಸಿಐ ಬ್ಯಾಂಕ್‌ , ರಿಲಯನ್ಸ್‌, ಹಿಂಡಾಲ್ಕೊ, ಅದಾನಿ ಪೋರ್ಟ್‌ ಮತ್ತು ಎಸ್‌ಬಿಐ.

ಟಾಪ್‌ ಗೇನರ್‌ಗಳು : ಹಿಂಡಾಲ್ಕೊ, ಅದಾನಿ ಪೋರ್ಟ್‌, ಐಸಿಐಸಿಐ ಬ್ಯಾಂಕ್‌, ಬ್ಯಾಂಕ್‌ ಆಫ್ ಬರೋಡ ಮತ್ತು ಎನ್‌ಟಿಪಿಸಿ.

Advertisement

ಟಾಪ್‌ ಲೂಸರ್‌ಗಳು : ಕೋಲ್‌ ಇಂಡಿಯಾ, ಭಾರ್ತಿ ಏರ್‌ಟೆಲ್‌, ಮಹಿಂದ್ರ, ಸನ್‌ ಫಾರ್ಮಾ, ಕೋಟಕ್‌ ಮಹಿಂದ್ರ. 

ಇಂದಿನ ಆರಂಭಿಕ ವಹಿವಾಟಿನಲ್ಲಿ ಏಶ್ಯನ್‌ ಶೇರು ಮಾರುಕಟ್ಟೆಗಳ ಪೈಕಿ ಇಂದು ಜಪಾನಿನ ನಿಕ್ಕಿ ಶೇ.0.23, ಹಾಂಕಾಂಗ್‌ನ ಹ್ಯಾಂಗ್‌ಸೆಂಗ್‌ ಶೇ.0.96 ಹಾಗೂ ಶಾಂಘೈ ಕಾಪೋಸಿಟ್‌ ಇಂಡೆಕ್ಸ್‌ ಶೆ.0.12ರಷ್ಟು ಕುಸಿದವು. ಅಮೆರಿಕದ ಡೋವ್‌ ಜೋನ್ಸ್‌ ನಿನ್ನೆಯ ವಹಿವಾಟನ್ನು ಶೇ.0.90ರಷ್ಟು ಏರಿಕೆಯೊಂದಿಗೆ ಕೊನೆಗೊಳಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next