ಮುಂಬಯಿ : ಪರ್ಯಾಪ್ತ ಪ್ರಮಾಣದ ನಗದು ಲಭ್ಯತೆಯ ಬಲದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ 7ನೇ ದಿನದ ಗೆಲುವಿನ ಓಟದ, ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 102 ಅಂಕಗಳ ಜಿಗಿತವನ್ನು ಸಾಧಿಸಿದೆಯಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,370 ಅಂಕಗಳ ಮಟ್ಟವನ್ನು ದಾಟಿ ಮುನ್ನುಗಿದೆ.
ಕಳೆದ ಆರು ದಿನಗಳ ನಿರಂತರ ಗೆಲುವಿನ ಓಟದಲ್ಲಿ ಸೆನ್ಸೆಕ್ಸ್ ಒಟ್ಟು 827.64 ಅಂಕಗಳನ್ನು ಸಂಪಾದಿಸಿದೆ.
ಇಂದಿನ ಆರಂಭಿಕ ವಸಿವಾಟಿನಲ್ಲಿ ಕ್ಯಾಪಿಟಲ್ ಗೂಡ್ಸ್, ಆಟೋ, ಕನ್ಸೂಮರ್ ಡ್ಯುರೇಬಲ್ಸ್ ಮತ್ತು ಬ್ಯಾಂಕಿಂಗ್ ರಂಗದ ಶೇರುಗಳು ಉತ್ತಮ ಖರೀದಿಯನ್ನು ಕಂಡವು. ಹಾಗಾಗಿ ಅವು ಶೇ.0.47ರ ಜಿಗಿತವನ್ನು ದಾಖಲಿಸಿದವು.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ತೇಜಿಯ ವಾತಾವರಣ ಇರುವುದನ್ನು ಅನುಸರಿಸಿ ಮುಂಬಯಿ ಶೇರು ಇಂದು ನಿರಂತರ 7ದಿನವೂ ಏರು ಹಾದಿಯಲ್ಲಿ ಸಾಗಿತು.
ದೇಶೀಯ ಸಾಂಸ್ಥಿಕ ಹೂಡಿಕೆದಾರರು ಈ ವರೆಗೆ 222.21 ಕೋಟಿ ರೂ. ನಿವ್ವಳ ಮೌಲ್ಯದ ಶೇರುಗಳನ್ನು ಖರೀದಿಸಿವೆಯಾದರೆ ವಿದೇಶೀ ಹೂಡಿಕೆದಾರರು 73.22 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದಾರೆ.
ಇಂದು ಸೆನ್ಸೆಕ್ಸ್ ಮುನ್ನಡೆಗೆ ಕಾರಣವಾದ ಶೇರುಗಳೆಂದರೆ ಬಜಾಜ್ ಆಟೋ, ಇನ್‌ಫೋಸಿಸ್, ಕೋಟಕ್ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇರುಗಳು; ಇವು ಕಂಡ ಏರಿಕೆ ಶೇ.1.64.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 102.56 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 33,690.64 ಶೇರುಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 38.10 ಅಂಕಗಳ ಏರಿಕೆಯೊಂದಿಗೆ 10,386.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.