Advertisement

ಆರಂಭಿಕ ವಹಿವಾಟಿನಲ್ಲಿ 103 ಅಂಕ ಏರಿ ಬಳಿಕ ಕುಸಿದ ಮುಂಬಯಿ ಶೇರು

11:27 AM Jan 06, 2017 | udayavani editorial |

ಮುಂಬಯಿ : ದೇಶೀಯ ಹೂಡಿಕೆದಾರರ ಬೆಂಬಲದಲ್ಲಿ ನಿನ್ನೆಯ ಅಮೋಘ ರಾಲಿಯನ್ನು  ಮುಂದುವರಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 103 ಅಂಕಗಳ ಮುನ್ನಡೆಯನ್ನು ಸಾಧಿಸಿತಲ್ಲದೆ 27,000 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್‌ ಸಂಪಾದಿಸಿತು. ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ತೋರಿಬಂದಿರುವ ಸ್ಥಿರತೆಯಿಂದ ಕೂಡ ಮುಂಬಯಿ ಶೇರು ಪೇಟೆ ಗರಿಗೆದರಿರುವುದು ಗಮನಾರ್ಹವಾಗಿದೆ.

Advertisement

ಹಾಗಿದ್ದರೂ ಮಧ್ಯಾಹ್ನ 11.30ರ ಹೊತ್ತಿಗೆ ಸೆನ್ಸೆಕ್ಸ್‌ 9 ಅಂಕಗಳ ನಷ್ಟದೊಂದಿಗೆ 26,868.29 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 5 ಅಂಕಗಳ ನಷ್ಟದೊಂದಿಗೆ 8,268.50 ಅಂಕಗಳ ಮಟ್ಟದಲ್ಲೂ  ವ್ಯವಹಾರ ನಿರತವಾಗಿರುವುದು ಕಂಡು ಬಂದಿದೆ. 

ನಿನ್ನೆ ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 245.11 ಅಂಕಗಳ ಏರಿಕೆಯನ್ನು ಸಾಧಿಸಿತ್ತು.

ಇಂದಿನ ಆರಂಭಿಕ ವಹಿವಾಟಿನಲ್ಲಿ ಹೆಲ್ತ್‌ಕೇರ್‌, ಕನ್ಸೂಮರ್‌ ಡ್ಯುರೇಬಲ್‌, ಮೆಟಲ್‌, ಆಟೋ, ಕ್ಯಾಪಿಟಲ್‌ ಗೂಡ್ಸ್‌, ಆಯಿಲ್‌ ಆ್ಯಂಡ್‌ ಗ್ಯಾಸ್‌ ಮತ್ತು ಬ್ಯಾಂಕಿಂಗ್‌ ರಂಗದ ಶೇರುಗಳು ಉತ್ತಮ ಬೇಡಿಕೆಯನ್ನು ಕಂಡಿವೆ.  

Advertisement

Udayavani is now on Telegram. Click here to join our channel and stay updated with the latest news.

Next