Advertisement
ನವಿಮುಂಬಯಿ ನೆರೂಲ್ ಆಶ್ರಯದಲ್ಲಿನ ಬಾಲಾಲಯದಲ್ಲಿ ಪೂರ್ವಾಹ್ನ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಬಿಂಬಚಾರ ಕಲಶ ಸಹಿತ ತತ್ವಹೋಮ ಇತ್ಯಾದಿಗಳನ್ನು ವೈಧಿಕರು ಶಾಸ್ತ್ರೋಕ್ತ ವಾದ ಪೂಜೆ ಪುರಸ್ಕಾರ ನೆರವೇರಿಸಿ ಕೃಷ್ಣೆ,ಕ್ಯರಾದ ಅದಮಾರು ಶ್ರೀ ವಿಬುಧೇಶ ತೀರ್ಥರು ಹಾಗೂ ಪೇಜಾವರ ಶ್ರೀ ವಿಶ್ವೇಶ ತೀರ್ಥರ ದೇಣಿಗೆ ಮತ್ತು ಅನುಗ್ರಹ ಸ್ಮರಿಸಿದರು. ಬಳಿಕ ಭಕ್ತರ ಭಕ್ತಿಪೂರ್ವಕ ಭಜನೆ, ಸುವಾಸಿನಿಯರ ಸಂಕೀರ್ತನೆ ಮತ್ತು ಪುಣ್ಯಕಲಶಗಳೊಂದಿಗೆ ಕೊಂಬು ಕಹಳೆ, ವಾದ್ಯಘೋಷ ನೀನಾದಗಳೊಂದಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿಸಿ ಬಳಿಕ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಬಿಂಬ ಚಾಲನೆಯೊಂದಿಗೆ ಸ್ಥಳಾಂತರ ಕಾರ್ಯ ನಡೆಸಿ ಹಾಲು ಬಿಳುಪಿನ, ಹಸನ್ಮುಖೀ ಶ್ರೀ ಗೋಪಾಲ ಕೃಷ್ಣನ ಅಮೃತ ಶಿಲಾಮೂರ್ತಿಯನ್ನು ಸಕಲ ಪೂಜಾಧಿಗಳೊಂದಿಗೆ ಪವಿತ್ರೀಕರಿಸಿ ಸಾಯನ್‌ನ ಮೂಲಾಲಯ ಗೋಕುಲಕ್ಕೆ ನಿರ್ಗಮಿಸಲಾಯಿತು. ಬಿಎಸ್‌ಕೆಬಿಎ ಮತ್ತು ಜಿಪಿಟಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಹಾಗೂ ಪದಾಧಿಕಾರಿಗಳು ಗೋಕುಲದ ಆರಾಧ್ಯದೇವರಾದ ಶ್ರೀ ಗೋಪಾಲಕೃಷ್ಣ ದೇವರ ಉತ್ಸವಮೂರ್ತಿಯನ್ನು ಭಕ್ತಿಪೂರ್ವಕವಾಗಿ ಕರೆತಂದರು.
Related Articles
Advertisement
ಸಮಾಜ ಸೇವಕರ ಸೇರುವಿಕೆ, ಭಕ್ತರ ಕೂಡುವಿಕೆ ಯೊಂದಿಗೆ ಸಾರ್ವಜನಿಕವಾಗಿ ಶ್ರೀ ಗೋಪಾಲಕೃಷ್ಣ ದೇವರನ್ನು ಸಾಂಸ್ಕೃತಿಕ ಕಲಾ ಪ್ರಕಾರಗಳೊಂದಿಗೆ ಹನುಮಾನ್ ಮಂದಿರಕ್ಕೆ ಆದರಿಸಿ ಅಲ್ಲಿಂದ ಭವ್ಯ ಶೋಭಾಯಾತ್ರೆಯೊಂದಿಗೆ ಸಂಜೆ ಶ್ರೀ ಗೋಪಾಲ ಕೃಷ್ಣನನ್ನು ಭಕ್ತಿಪೂರ್ವಕವಾಗಿ ಗೋಕುಲಕ್ಕೆ ಬರಮಾಡಿ ಕೊಳ್ಳಲಾಯಿತು. ನಂತರ ಪಂಚಗವ್ಯ ಮಿಲನ, ಸಪ್ತ ಶುದ್ಧಿ, ಪ್ರಸಾದ ಶುದ್ಧಿ, ಅಂಕುರಾರ್ಪಣೆ, ಅಸ್ತ್ರಕಲಶ ಪ್ರತಿಷ್ಠೆ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಕಾರ ಬಲಿ, ಮಹಾಪೂಜೆಗಳು ನೆರವೇರಿಸಲ್ಪಟ್ಟವು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಉಪಾಧ್ಯಕ್ಷ ಅಶೋಕ್ ಎ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮೀನ್, ದೇವಾಡಿಗರ ಸಂಘ ಮುಂಬಯಿ ಅಧ್ಯಕ್ಷ ರವಿ ಎಸ್.ದೇವಾಡಿಗ, ರಾಮಣ್ಣ ದೇವಾಡಿಗ, ಭಂಡಾರಿ ಸೇವಾ ಸಂಘ ಮುಂಬಯಿ ಮಾಜಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್. ಭಂಡಾರಿ, ಉದ್ಯಮಿಗಳಾದ ರವಿ ಎಸ್.ಶೆಟ್ಟಿ, ಸುರೇಶ್ ಕಾಂಚನ್, ಕರ್ನಿರೆ ವಿಶ್ವನಾಥ ಶೆಟ್ಟಿ, ಶ್ಯಾಮ ಎನ್.ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ರವೀಂದ್ರನಾಥ ಎಂ.ಭಂಡಾರಿ, ಚಿತ್ರಾ ಆರ್.ಶೆಟ್ಟಿ , ಮಾಜಿ ನಗರ ಸೇವಕ ವಿಜಯ್ ತಾಂಡೆಲ್ ಸೇರಿದಂತೆ ವಿವಿಧ ಸಂಘಗಳ ಮುಖ್ಯಸ್ಥರು ಉಪಸ್ಥಿತರಿದ್ದು, ಐಕಳ ಹರೀಶ್ ಶೆಟ್ಟಿ ಅವರು ಗೌರವಿಸಿದರು. ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡು ತಮ್ಮ ಸಂಸ್ಥೆಗಳ ಪಾಲಿನ ಹೊರೆಕಾಣಿಕೆಯನ್ನು ಗೋಕುಲಕ್ಕೆ ಒಪ್ಪಿಸಿದರು. ಶ್ರೀ ನಾರಾಯಣ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನದ ಪ್ರತ್ಯಕ್ಷಿತೆ ನಡೆಯಿತು.
ಬಿಎಸ್‌ಕೆಬಿಎ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಶೈಲಿನಿ ರಾವ್, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಜತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್ ಮತ್ತು ಚಿತ್ರಾ ಮೇಲ್ಮನೆ, ಜತೆ ಕೋಶಾಧಿಕಾರಿ ಪಿ.ಬಿ ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್‌ನ
ವಿಶ್ವಸ್ಥ ಸದಸ್ಯರುಗಳಾದ ಎ. ಶ್ರೀನಿವಾಸ ರಾವ್, ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಎಸ್.ಎನ್. ಉಡುಪ ಜೆರಿಮೆರಿ, ಮಾಜಿ ಅಧ್ಯಕ್ಷ ಸುಬ್ಬಣ್ಣ ರಾವ್, ಗುರುರಾಜ ಭಟ್, ಜಿತೇಂದ್ರ ಗೌಡ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾದರು.
ನಗರಗಳ ಹಲವಾರು ಸಂಘಸಂಸ್ಥೆಗಳು, ಅಪಾರ ಸಂಖ್ಯೆಯ ಭಕ್ತಾದಿಗಳು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡು ಹೊರೆಕಾಣಿಕೆಯನ್ನು ಶ್ರೀಕೃಷ್ಣನಿಗೆ ಒಪ್ಪಿಸಿ ಗೋಕುಲದ ಬ್ರಹ್ಮ ಕಲಶೋತ್ಸವದ ಚಾಲನೆಗೆ ಸಾಕ್ಷಿಯಾದರು.
-ಚಿತ್ರ ವರದಿ : ರೋನ್ಸ್ ಬಂಟ್ವಾಳ್