Advertisement

ಮುಂಬಯಿ ಶೇರು ಪೇಟೆ 2 ತಿಂಗಳ ಗರಿಷ್ಠ ಮಟ್ಟಕ್ಕೆ; 50 ಅಂಕ ಏರಿಕೆ

04:34 PM Jan 16, 2017 | |

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಸೋಮವಾರದ ವಹಿವಾಟನ್ನು ಎರಡು ತಿಂಗಳ ಗರಿಷ್ಠ ಮಟ್ಟವಾಗಿ 50.11 ಅಂಕಗಳ ಏರಿಕೆಯೊಂದಿಗೆ 27,288.17 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿದೆ. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 12.45 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 8,412.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಇಂದು ಮುಂಬಯಿ ಶೇರು ಪೇಟೆ, ಇತರ ಏಶ್ಯನ್‌ ಶೇರು ಮಾರುಕಟ್ಟೆಗಳನ್ನು ಹಿಂದಿಕ್ಕಿ ಮುನ್ನಡೆಯುವಲ್ಲಿ ಬ್ಯಾಂಕಿಂಗ್‌, ಹಣಕಾಸು ಮತ್ತು ಟಾಟಾ ಸಮೂಹದ ಕಂಪೆನಿಗಳ ಶೇರುಗಳು ಮುಖ್ಯ ಪಾತ್ರ ವಹಿಸಿದವು. ಆದರೆ ಇದೇ ವೇಳೆ ಇನ್‌ಫೋಸಿಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಐಟಿಸಿ ಶೇರುಗಳು ಕುಸಿತವನ್ನು ಕಂಡವು.

ಇಂದಿನ ವಹಿವಾಟಿನಲ್ಲಿ ಬಿಎಸ್‌ಇ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕ ಶೇ.0.3 ಮತ್ತು ಶೇ.0.6ರಷ್ಟು ಅನುಕ್ರಮ ಏರಿಕೆಯನ್ನು ಕಂಡವು. ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,534 ಶೇರುಗಳು ಮುನ್ನಡೆ ಸಾಧಿಸಿದರೆ 1,240 ಶೇರುಗಳು ಹಿನ್ನಡೆಗೆ ಗುರಿಯಾದವು. 

Advertisement

Udayavani is now on Telegram. Click here to join our channel and stay updated with the latest news.

Next