Advertisement

ಮೂರನೇ ದಿನವೂ ಕುಸಿತದ ಹಾದಿಯಲ್ಲಿ ಸಾಗಿದ ಮುಂಬಯಿ ಶೇರು

05:25 PM Apr 10, 2017 | udayavani editorial |

ಮುಂಬಯಿ: ನಿರಂತರ ಮೂರನೇ ದಿನ ಜಾರು ಹಾದಿಯಲ್ಲಿ  ಸಾಗಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ  ಇಂದು ಸೋಮವಾರ, ಹೂಡಿಕೆದಾರರು ಮತ್ತು ವಹಿವಾಟುದಾರರು ತೋರಿದ ನಿರಾಸಕ್ತಿಯ ಫ‌ಲವಾಗಿ 130.87 ಅಂಕಗಳ ಕುಸಿತವನ್ನು ಕಂದು ದಿನದ ವಹಿವಾಟನ್ನು 29,575.74 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 16.85 ಅಂಕಗಳ ನಷ್ಟಕಕ್ಕೆ ಗುರಿಯಾಗಿ 9,181.45 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.

ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ ,757 ಶೇರುಗಳು ಮುನ್ನಡೆ ಸಾಧಿಸಿದವು; 1,144 ಶೇರುಗಳು ಕುಸಿದವು; 168 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

ಇಂದಿನ ಟಾಪ್‌ ಗೇನರ್‌ಗಳು : ಬಿಪಿಸಿಎಲ್‌, ಗ್ರಾಸಿಂ, ಎಸ್‌ ಬ್ಯಾಂಕ್‌, ಭಾರ್ತಿ ಇಂಟರ್‌ನ್ಯಾಶನಲ್‌, ಟಾಟಾ ಮೋಟರ್‌. ಟಾಪ್‌ ಲೂಸರ್‌ಗಳು : ಇನ್‌ಫೋಸಿಸ್‌, ಏಶ್ಯನ್‌ ಪೇಂಟ್‌, ಇನ್‌ಫೋಸಿಸ್‌, ಎಚ್‌ಸಿಎಲ್‌ ಟೆಕ್‌, ರಿಲಯನ್ಸ್‌, ವಿಪ್ರೋ.

Advertisement

Udayavani is now on Telegram. Click here to join our channel and stay updated with the latest news.

Next