Advertisement

ಆರಂಭಿಕ ಮುನ್ನಡೆ ಬಿಟ್ಟುಕೊಟ್ಟು ನಷ್ಟದ ಹಾದಿ ಹಿಡಿದ ಸೆನ್ಸೆಕ್ಸ್‌

11:07 AM Mar 07, 2017 | |

ಮುಂಬಯಿ : ಇಂದು ಮಂಗಳವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ  50 ಅಂಕಗಳ ಏರಿಕೆಯನ್ನು ಕಂಡಿದ್ದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ, 11 ಗಂಟೆಯ ಹೊತ್ತಿಗೆ ತನ್ನ ಆರಂಭಿಕ ಗಳಿಕೆಯನ್ನು ಬಿಟ್ಟುಕೊಟ್ಟು 44.11 ಅಂಕಗಳ ನಷ್ಟಕ್ಕೆ ಗುರಿಯಾಗಿ 29,004.08 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 18.75 ಅಂಕಗಳ ನಷ್ಟದೊಂದಿಗೆ 8,944.70 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ಇಂದಿನ ಆರಂಭಿಕ ವಹಿವಾಟಿನಲ್ಲಿ ಎನ್‌ಟಿಪಿಸಿ, ರಿಲಯನ್ಸ್‌, ಕೋಲ್‌ ಇಂಡಿಯಾ, ಅದಾನಿ ಪೋರ್ಟ್‌, ಬಿಎಚ್‌ಇಎಲ್‌, ಟೆಕ್‌ ಮಹೀಂದ್ರ, ಟಾಟಾ ಪವರ್‌, ಈಶರ್‌ ಮೋಟರ್‌ ಉತ್ತಮ ಮುನ್ನಡೆ ದಾಖಲಿಸಿದವು. ಇದೇ ವೇಳೆ ಇನ್‌ಫೋಸಿಸ್‌, ಹೀರೋ ಮೋಟೋ ಕಾರ್ಪ್‌, ಟಾಟಾ ಮೋಟರ್‌, ಹಿಂಡಾಲ್ಕೊ, ಇಂಡಸ್‌ ಇಂಡ್‌ ಬ್ಯಾಂಕ್‌, ಮಹೀಂದ್ರ  ಮತ್ತು ಐಡಿಯಾ ಸೆಲ್ಯುಲರ್‌ ಒತ್ತಡಕ್ಕೆ ಗುರಿಯಾದವು. 

ಇಂದಿನ ಆರಂಭಿಕ ವಹಿವಾಟಿನಲ್ಲಿ  ಏಶ್ಯನ್‌ ಶೇರು ಮಾರುಕಟ್ಟೆಗಳ ಪೈಕಿ ಹಾಂಕಾಂಗ್‌ನ ಹ್ಯಾಂಗ್‌ ಸೆಂಗ್‌ ಶೇ.0.30, ಜಪಾನಿನ ನಿಕ್ಕಿ ಶೇ.0.17 ಹಾಗೂ ಶಾಂಘೈ ಕಾಂಪೋಸಿಟ್‌ ಇಂಡೆಕ್ಸ್‌ ಶೇ.0.10 ಹಿನ್ನಡೆಗೆ ಗುರಿಯಾದವು. 

Advertisement

Udayavani is now on Telegram. Click here to join our channel and stay updated with the latest news.

Next